ಯುವ ಚೈತನ್ಯ ಚಿಲುಮೆ ಸ್ವಾಮಿ ವಿವೇಕಾನಂದ..!!

yuva-chaithanya-chilume-swamy-vivekananda-naadle
Share This:

ಅಮೆರಿಕದ ಶಿಕಾಗೊ ನಗರದ ಸರ್ವಧರ್ಮ ಸಮ್ಮೇಳನದಲ್ಲಿ ಪ್ರಪಂಚದ ಸಮಸ್ತ ಧರ್ಮಗಳ ಮೂಲತತ್ವಗಳನ್ನು ಭಾರತದ ಧರ್ಮದೊಂದಿಗೆ ಹೋಲಿಸಿ, ಧಾರ್ಮಿಕ ಸಮನ್ವಯತೆಯನ್ನು ವಿಶ್ವಕ್ಕೆ ಪರಿಚಯಿಸಿದ ಸ್ವಾಮಿ ವಿವೇಕಾನಂದರ ಜಯಂತಿಯನ್ನು (ಜ.12) ನಾವು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸುತ್ತಿದ್ದೇವೆ. ಅವರ ಭಾಷಣದಲ್ಲಿ ರಾಷ್ಟ್ರೀಯ ಭಾವೈಕ್ಯತೆ ಮತ್ತು ಧಾರ್ಮಿಕ ಸ್ವಾತಂತ್ರ್ಯದ ತಿರುಳು ಅಡಗಿತ್ತು. ಅಂದು ಅವರು ವಿಶ್ವದ ಒಬ್ಬ ಶ್ರೇಷ್ಟ ವಾಗ್ಮಿ ಎಂದು ಗುರುತಿಸಿಕೊಂಡು ಇಡೀ ಸಮ್ಮೆಳನದ ಕೇಂದ್ರ ಬಿಂದು ಎಂದೆನಿಸಿಕೊಂಡಿದ್ದರು. ಭಾರತವನ್ನು ಸ್ವಾಮಿ ವಿವೇಕಾನಂದರು ಅಪಾರವಾಗಿ ಪ್ರೀತಿಸುತ್ತಿದ್ದರು. ಅವರ ಧಮನಿ ಧಮನಿಗಳಲ್ಲಿ ಭಾರತ ಮಿಡಿಯುತ್ತಿತ್ತು. ಅವರ ಕನಸು ನನಸುಗಳಲ್ಲೆಲ್ಲಾ ಭಾರತವೇ ತುಂಬಿತ್ತು. ಒಂದರ್ಥದಲ್ಲಿ ಅವರೇ ಭಾರತವಾಗಿ ಬಿಟ್ಟಿದ್ದರು. ಭಾರತಾಂಬೆಯ ಆಧ್ಯಾತ್ಮಿಕತೆ, ಪಾವಿತ್ರ್ಯ, ಜ್ಞಾನ, ಶಕ್ತಿ ಮತ್ತು ಧ್ಯೇಯಗಳ ಶ್ರೇಷ್ಠತಮ ಲಾಂಛನವಾಗಿದ್ದರು ಎನ್ನುತ್ತಾರೆ ಸೋದರಿ ನಿವೇದಿತಾ.yuva-chaithanya-chilume-swamy-vivekananda-naadle

Upcoming and Ongoing events

View More Events

Want to Promote your Event, contact Naadle at 7090787344 or Email us at [email protected]

39 ವರ್ಷದಲ್ಲಿಯೇ ಅಗಾಧವಾದುದನ್ನು ಸಾಧಿಸಿದ ಆ ಮಹಾನ್ ಸಂತನನ್ನು ಪಡೆದ ಈ ಭಾರತ ಮಾತೆ ಮಾತ್ರವಲ್ಲ ಅವರನ್ನು ಹೆತ್ತ ಅಮ್ಮ ಭುವನೇಶ್ವರಿ ಕೂಡ ಧನ್ಯಳು. ಇದೇ ದಿನ ಅಂದರೆ, ಜನವರಿ 12, 1863ರಂದು ಭುವನೇಶ್ವರಿ ದೇವಿಯ ಗರ್ಭದಲ್ಲಿ ಕೋಲ್ಕತಾದಲ್ಲಿ ನರೇಂದ್ರನಾಥ ದತ್ತರಾಗಿ ವಿವೇಕಾನಂದರು ಜನಿಸಿದರು. ಬಾಲ್ಯದಲ್ಲಿ ತಾಯಿಯಿಂದ ಕಲಿತ ಜೀವನದ ಅತ್ಯಮೂಲ್ಯ ಪಾಠಗಳೇ ವಿವೇಕಾನಂದರನ್ನು ಆ ಮಟ್ಟಕ್ಕೆ ಬೆಳೆಸಲು ಸಾಧ್ಯವಾಯಿತು. ಧಾರ್ಮಿಕ ಭಾವನೆಯವಳಾಗಿದ್ದ ಭುವನೇಶ್ವರಿ ದೇವಿಯಿಂದ ಭಕ್ತಿಯ ಜೊತೆಗೆ ತಮ್ಮನ್ನು ತಾವು ನಿಗ್ರಹಿಸುವುದನ್ನು ವಿವೇಕಾನಂದರು ಕಲಿತರು. ಅವರು ತಾಯಿ ಹೇಳಿದ “ನಿರ್ಮಲ ಜೀವನ ಸಾಗಿಸು, ಗೌರವದಿಂದ ಬಾಳು, ಅನ್ಯರ ಗೌರವಕ್ಕೆ ಧಕ್ಕೆ ತರಬೇಡ. ಯಾವಾಗಲೂ ಶಾಂತವಾಗಿರು. ಆದರೆ, ಅವಶ್ಯಕತೆ ಬಿದ್ದಾಗ ಸಿಡಿದೇಳು” ಎಂಬ ನುಡಿಗಳು ಎಲ್ಲ ಭಾರತೀಯರಿಗೆ ಅನ್ವಯವಾಗುತ್ತದೆ.yuva-chaithanya-chilume-swamy-vivekananda-naadleಸ್ವಾಮಿ ವಿವೇಕಾನಂದರು ತಮ್ಮ ಶಕ್ತಿಯುತ ವ್ಯಕ್ತಿತ್ವದ ಮೂಲಕ, ಅಪೂರ್ವ ವಾಗ್ಮೀಯತೆ ಹಾಗೂ ಪ್ರಚೋದನಾತ್ಮಕ ಬರವಣಿಗೆ ಮೂಲಕ ನಮ್ಮ ರಾಷ್ಟ್ರ ಚೇತವನ್ನು ಜಾಗೃತಗೊಳಿಸಿ, ಯುವಕರಲ್ಲಿ ನವೋತ್ಸಾಹವನ್ನು ಕೆರಳಿಸಿ, ಅವರಲ್ಲಿ ನಮ್ಮ ಸಂಸ್ಕೃತಿಯ ಬಗ್ಗೆ ಹೆಮ್ಮೆಯನ್ನು ಕುದುರಿಸಿ ಸ್ವತಂತ್ರ ನವ ಭಾರತ ನಿರ್ಮಾಣಕ್ಕೆ ಬುನಾದಿಯನ್ನು ಹಾಕಿದರು. ಏಳಿ! ಎದ್ದೇಳಿ !! ಗುರಿ ಮುಟ್ಟುವ ತನಕ ನಿಲ್ಲದಿರಿ’ ವಿಶ್ವದ ಅನೇಕ ಮಂದಿ ಇಂದು ಭಾರತ ಸಂಸ್ಕೃತಿ, ಹಿಂದೂ ಪರಂಪರೆಯ ಬಗ್ಗೆ ಗೌರವದಿಂದ ಕಾಣಲು ಹಾಗೂ ಅದರ ಬಗ್ಗೆ ಅಧ್ಯಯನ ಮಾಡಲು ಮುಂದಾಗುತ್ತಿರುವುದಕ್ಕೆ ಕಾರಣ ಕೂಡ ಅದೇ ವಿವೇಕವಾಣಿ!

 

Offers

Want to Add your Offers, contact Naadle at 7090787344 or Email us at [email protected]