ಏಷ್ಯಾ ಜೂನಿಯರ್ ಬ್ಯಾಡ್ಮಿಂಟನ್ : ಪುರುಷರ ಬ್ಯಾಡ್ಮಿಂಟನ್ ನಲ್ಲಿ 53 ವರ್ಷಗಳ ನಂತರ ಭಾರತಕ್ಕೆ ಚಿನ್ನ..!!

yeshya junior badminton purushara badmintonnaali 53 varshagala nantara bharathakke chinna-naadle
Share This:

ಉದಯೋನ್ಮುಖ ಆಟಗಾರ ಲಕ್ಷ್ಯ ಸೇನ್ ಭಾನುವಾರ ಭಾರತದ ಬ್ಯಾಡ್ಮಿಂಟನ್ ಇತಿಹಾಸದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದರು.16ರ ಹರೆಯದ ಲಕ್ಷ್ಯ, ಏಷ್ಯಾ ಚಾಂಪಿಯನ್ ಷಿಪ್ ನಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಇದರೊಂದಿಗೆ ಚಾಂಪಿಯನ್ ಷಿಪ್ ನ ಬಾಲಕರ ಸಿಂಗಲ್ಸ್ ನಲ್ಲಿ 53 ವರ್ಷಗಳ ನಂತರ ಚಿನ್ನ ಗೆದ್ದ ಭಾರತದ ಮೊದಲ ಆಟಗಾರ ಎಂಬ ದಾಖಲೆ ತಮ್ಮದಾಗಿಸಿಕೊಂಡರು.1965ರಲ್ಲಿ ಗೌತಮ್ ಠಕ್ಕರ್ ಮೊದಲ ಬಾರಿಗೆ ಚಿನ್ನಕ್ಕೆ ಮುತ್ತಿಕ್ಕಿದ್ದರು. ಲಕ್ಷ್ಯ ಅವರು ಚಾಂಪಿಯನ್ ಷಿಪ್ ನಲ್ಲಿ ಚಿನ್ನ ಜಯಿಸಿದ ಭಾರತದ ಮೂರನೇ ಆಟಗಾರ ಎಂಬ ಹಿರಿಮೆಗೂ ಪಾತ್ರರಾದರು. ಗೌತಮ್ ಅವರ ಬಳಿಕ ಪಿ.ವಿ.ಸಿಂಧು (2012ರಲ್ಲಿ) ಈ ಸಾಧನೆ ಮಾಡಿದ್ದರು. ಈ ಚಾಂಪಿಯನ್‌ಷಿಪ್‌ನಲ್ಲಿ ಲಕ್ಷ್ಯ ಗೆದ್ದ ಎರಡನೇ ಪದಕ ಇದಾಗಿದೆ. 2016ರಲ್ಲಿ ಕಂಚಿನ ಪದಕ ಗೆದ್ದಿದ್ದರು.yeshya junior badminton purushara badmintonnaali 53 varshagala nantara bharathakke chinna-naadle

Upcoming and Ongoing events

View More Events

Want to Promote your Event, contact Naadle at 9035030300 or Email us at info@naadle.com


ಇದೀಗ ಚಾಂಪಿಯನ್‌ಷಿಪ್‌ ಗೆಲುವಿನೊಂದಿಗೆ ಜೂನಿಯರ್‌ ಏಷ್ಯನ್‌ ಬ್ಯಾಡ್ಮಿಂಟನ್‌ನ ಸಿಂಗಲ್ಸ್‌ ವಿಭಾಗದಲ್ಲಿ ಸ್ವರ್ಣ ಗೆದ್ದ ಮೂರನೇ ಭಾರತೀಯ ಎಂಬ ಹೆಗ್ಗಳಿಕೆಗೂ ಲಕ್ಷ್ಯ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಪಿ.ವಿ ಸಿಂಧೂ ಮತ್ತು ಗೌತಮ್‌ ಥಕ್ಕರ್‌ ಕ್ರಮವಾಗಿ 2012 ಮತ್ತು 1965ರಲ್ಲಿ ಪ್ರತ್ಯೇಕ ಸಿಂಗಲ್ಸ್‌ ವಿಭಾಗಗಳಲ್ಲಿ ಚಿನ್ನ ಗೆದ್ದ ಸಾಧನೆ ಮೆರೆದಿದ್ದರು. ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಭಾರತಕ್ಕೆ 1965ರ ಬಳಿಕ ಸಿಕ್ಕ ಮೊದಲ ಸ್ವರ್ಣ ಎಂಬುದು ವಿಶೇಷ.yeshya junior badminton purushara badmintonnaali 53 varshagala nantara bharathakke chinna-naadleಬೆಂಗಳೂರಿನಲ್ಲಿರುವ ಕರ್ನಾಟಕ ಬ್ಯಾಡ್ಮಿಂಟನ್‌ ಸಂಸ್ಥೆಯಲ್ಲಿ ಅನುಭವಿ ಕೋಚ್‌ ವಿಮಲ್‌ ಕುಮಾರ್‌ ಅವರ ಗರಡಿಯಲ್ಲಿ ಪಳಗಿರುವ ಲಕ್ಷ್ಯ ಸೇನ್‌, ಭವಿಷ್ಯದಲ್ಲಿ ಭಾರತಕ್ಕೆ ಒಲಿಂಪಿಕ್‌ ಪದಕ ಗೆದ್ದುಕೊಡಬಲ್ಲ ಭರವಸೆಯಾಗಿದ್ದಾರೆ.
naadle If you like this article, click on the button below

Offers

Want to Add your Offers, contact Naadle at 9035030300 or Email us at info@naadle.com