ಎಲ್ಲೆಡೆ ಮಕರ ಸಂಕ್ರಾಂತಿಯ ಸಂಭ್ರಮ..!!

yellede makara sankranthiya sambhrama-naadle
Share This:

ಕ್ಯಾಲೆಂಡರ್ ದಿನಚರಿ ಪ್ರಕಾರ ಹೊಸ ವರ್ಷದ ಮೊದಲ ಹಬ್ಬವೇ ಸಂಕ್ರಾಂತಿ. ಮಕರ ರಾಶಿಗೆ ಸೂರ್ಯ ಪ್ರವೇಶ ಮಾಡುವ ಮೊದಲ ದಿನವನ್ನೇ ಸಂಕ್ರಾಂತಿಯನ್ನಾಗಿ ಆಚರಿಸಲಾಗುತ್ತದೆ. ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸೂರ್ಯ ಪ್ರವೇಶಿಸುವುದು ಸಂಕ್ರಾಂತಿ ದಿನದ ವಿಶೇಷ. ಅಲ್ಲದೆ, ಈ ದಿನದಿಂದ ಹಗಲು ಹೆಚ್ಚು, ರಾತ್ರಿ ಕಡಿಮೆಯಾಗುತ್ತದೆ. ಇದು ಉತ್ತರಾಯಣ ಪುಣ್ಯಕಾಲದ ಅರಂಭವೂ ಸಹ ಔದು. “ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡು” ಎಂಬುವುದು ಹಬ್ಬದ ಸಂದರ್ಭದಲ್ಲಿ ಕೇಳಿ ಬರುವ ಘೋಷ ವಾಕ್ಯ. ಈ ಎಳ್ಳುಬೆಲ್ಲದ ತಯಾರಿಕೆ ಹಬ್ಬಕ್ಕೆ ತಿಂಗಳು ಇರುವಾಗಲೇ ಆರಂಭವಾಗುತ್ತದೆ. ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಿದ ಬೆಲ್ಲ, ಒಣ ಕೊಬ್ಬರಿ, ಹುರಿಗಡಲೆ, ಸಿಪ್ಪೆ ತೆಗೆದ ಕಡಲೇಕಾಯಿ ಬೀಜ ಹಾಗೂ ಹುರಿದ ಬಿಳಿ ಎಳ್ಳನ್ನು ಸೇರಿಸಿ “ಎಳ್ಳು” ತಯಾರಿಸಲಾಗುತ್ತದೆ. ಎಳ್ಳು ಬೀರುವ ಸಂದರ್ಭ ಎಳ್ಳಿನ ಜೊತೆಗೆ ಸಕ್ಕರೆ ಅಚ್ಚುಗಳು, ಹಣ್ಣು ಮತ್ತು ಕಬ್ಬಿನ ತುಂಡುಗಳನ್ನು ಸಹ ನೀಡಲಾಗುತ್ತದೆyellede makara sankranthiya sambhrama-naadle

Upcoming and Ongoing events

View More Events

Want to Promote your Event, contact Naadle at 7090787344 or Email us at info@naadle.com

ಮಕರ ಸಂಕ್ರಾಂತಿ ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾಗಿದ್ದು, ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ನಾನಾ ಕಡೆ ಹಲವು ಹೆಸರುಗಳಲ್ಲಿ ಈ ಹಬ್ಬವನ್ನು ಆಚರಣೆ ಮಾಡುತ್ತಾರೆ. ಈ ಹಬ್ಬವನ್ನು ಕರ್ನಾಟಕದಲ್ಲಿ ಸಂಕ್ರಾಂತಿಯೆಂದೂ, ತಮಿಳುನಾಡಿನಲ್ಲಿ ಪೊಂಗಲ್ ಎಂದೂ, ಪಂಜಾಬ್‌ನಲ್ಲಿ ಲೊಹ್ರಿ ಎಂದೂ, ಗುಜರಾತ್‌ನಲ್ಲಿ ಉತ್ತರಾಯಣ, ಅಸ್ಸಾಂನಲ್ಲಿ ಭೋಗಾಲಿ ಬಿಹು, ಪಶ್ಚಿಮ ಬಂಗಾಳದಲ್ಲಿ ಪೌಶ್ ಸಂಕ್ರಾಂತಿಯೆಂದೂ ಕರೆಯಲಾಗುತ್ತದೆ. ಇನ್ನು, ಗ್ರಾಮೀಣ ಭಾಗಗಳಲ್ಲೂ ಹಿಂದೂಗಳು ಹೆಚ್ಚಾಗಿ ಆಚರಿಸುವ ಮಕರ ಸಂಕ್ರಾಂತಿ ಹಬ್ಬವನ್ನು ಪ್ರತಿ ವರ್ಷ ಜನವರಿ 14 ಅಥವಾ 15 ರಂದು ಆಚರಣೆ ಮಾಡಲಾಗುತ್ತದೆ.yellede makara sankranthiya sambhrama-naadleಕೇರಳದಲ್ಲಿ ಮಕರ ಸಂಕ್ರಾಂತಿಯಂದು ಶಬರಿಮಲೆಯಲ್ಲಿ ಕಾಣುವ ಮಕರಜ್ಯೋತಿಗೆ ಹೆಚ್ಚಿನ ಪ್ರಾಧಾನ್ಯತೆ ಇದೆ. ಅಯ್ಯಪ್ಪ ವೃತಾಧಾರಿಗಳಾದ ಜನರು ಶಬರಿಮಲೆಗೆ ತೆರಳಿ ತಮ್ಮ ಸ್ವಾಮಿಯ ಪಾದಕ್ಕೆರಗಿ ಮಕರ ಜ್ಯೋತಿಯ ದರ್ಶನ ಪಡೆದರೆ ಜನ್ಮ ಸಾರ್ಥಕವಾಗುವುದೆಂಬ ನಂಬಿಕೆಯಿಂದಾಗಿ ಲಕ್ಷೋಪಲಕ್ಷ ಜನರು ಈ ಜ್ಯೋತಿಯ ದರ್ಶನಕ್ಕಾಗಿ ವರ್ಷಂಪ್ರತಿ ಶಬರಿಮಲೆ ಸನ್ನಿಧಾನಕ್ಕೆ ಆಗಮಿಸುತ್ತಾರೆ.

 

Offers

Want to Add your Offers, contact Naadle at 7090787344 or Email us at info@naadle.com