ಎಲ್ಲೆಡೆ ಐಪಿಎಲ್‌-12 ಚಾಂಪಿಯನ್‌ಶಿಪ್‌ ಹವಾ ಶುರುವಾಗಿದೆ..!!

yellede ipl 2019 championship havaa joraagide-naadle
Share This:

ನೋಡನೋಡುತ್ತಲೇ 12ನೇ ಐಪಿಎಲ್‌ ಬಂದೇ ಬಿಟ್ಟಿದೆ. ಕ್ರೀಡಾ ಜಗತ್ತು ಪ್ರತಿಷ್ಠಿತ ವಿಶ್ವಕಪ್‌ ಗುಂಗಿನಲ್ಲಿ ಮುಳುಗಿರುವಾಗ, ದೇಶಕ್ಕೆ ದೇಶವೇ ಮಹಾ ಚುನಾವಣೆಯ ಕಾವೇರಿಸಿಕೊಂಡು ಕೂತಿರುವಾಗ ಚುಟುಕು ಕ್ರಿಕೆಟಿನ ಹವಾ ಬೀಸ ಲಾರಂಭಿಸಿದೆ. ಚುನಾವಣೆಯ ಸಮಯದಲ್ಲಿ ಸಂಪೂರ್ಣ ಟೂರ್ನಿಯನ್ನು ಭಾರತದಲ್ಲೇ ನಡೆಸುವ ಸಾಹಸಕ್ಕೂ ಬಿಸಿಸಿಐ ಮುಂದಾಗಿದ್ದು, ಈ ವರ್ಷ ಸಾಕಷ್ಟು ಜೋಶ್ ಮತ್ತು ರೋಚಕ ಕ್ಷಣಗಳಿಂದ ತುಂಬಿದ ಐಪಿಎಲ್, ಡಜನ್ ಸಂಭ್ರಮ ಹರಡುವ ನಿರೀಕ್ಷೆ ಇದೆ. ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾದು ಕುಳಿದಿರುವ ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ಗೆ ಇಂದು ಚಾಲನೆ ದೊರಕಲಿದೆ.yellede ipl 2019 championship havaa joraagide-naadle

Upcoming and Ongoing events

View More Events

Want to Promote your Event, contact Naadle at 7090787344 or Email us at info@naadle.com

ಕಳೆದ ಸಲದಂತೆ ಒಟ್ಟು 8 ತಂಡಗಳು ಐಪಿಎಲ್‌ ಚಾಂಪಿಯನ್‌ಶಿಪ್‌ಗಾಗಿ ಜಿದ್ದಾಜಿದ್ದಿ ಹೋರಾಟ ನಡೆಸಲಿವೆ. ಪಾಕಿಸ್ಥಾನ ಹೊರತುಪಡಿಸಿ ಕ್ರಿಕೆಟ್‌ ಜಗತ್ತಿನ ದೊಡ್ಡ ದೇಶಗಳ ಸ್ಟಾರ್‌ ಆಟಗಾರರ ಉಪಸ್ಥಿತಿ ಈ ಕೂಟದ ವಿಶೇಷ. ದ್ವಿಪಕ್ಷೀಯ ಹಾಗೂ ಇತರ ಐಸಿಸಿ ಸರಣಿಗಳ ವೇಳೆ ಬೇರೆ ಬೇರೆಯಾಗಿ ಆಡುವ ಆಟಗಾರರು ಇಲ್ಲಿ ಒಂದೇ ಸೂರಿನಡಿ ಆಡುವ ಮೂಲಕ ಒಗ್ಗಟ್ಟು ಪ್ರದರ್ಶಿಸುವ ಅಪರೂಪದ ದೃಶ್ಯವನ್ನೂ ಕಾಣಬಹುದು. ಗೇಲ್‌, ಎಬಿಡಿ, ವಿಲಿಯಮ್ಸನ್‌, ವಾರ್ನರ್‌, ಸ್ಮಿತ್‌, ಹೈಟ್‌ಮೈರ್‌, ಟರ್ನರ್‌, ಬೇರ್‌ಸ್ಟೊ, ಸ್ಟೋಕ್ಸ್‌, ಬ್ರಾತ್‌ವೇಟ್‌, ನಾರಾಯಣ್‌… ಹೀಗೆ ವಿದೇಶಿ ಆಟಗಾರರ ದಂಡೇ ಇಲ್ಲಿ ನೆರೆಯಲಿದೆ. ಜತೆಗೆ ತವರಿನ ಯುವ ಆಟಗಾರರ ಮಿಂಚುವಿಕೆಗೂ ಇದೊಂದು ವೇದಿಕೆ. ಶುಭಮನ್‌ ಗಿಲ್‌, ಪೃಥ್ವಿ ಶಾ, ವರುಣ್‌ ಚಕ್ರವರ್ತಿ, ಪ್ರಯಾಸ್‌ ರಾಯ್‌ ಬರ್ಮನ್‌, ಪ್ರಭ್‌ ಸಿಮ್ರಾನ್‌ ಸಿಂಗ್‌ ಅವರೆಲ್ಲ ಪ್ರತಿಭಾ ಪ್ರದರ್ಶನಕ್ಕೆ ಕಾದಿರುವ ಯುವ ತಾರೆಗಳಾಗಿದ್ದಾರೆ.yellede ipl 2019 championship havaa joraagide-naadleಶನಿವಾರ ಚೆನ್ನೈನ ಚಿಪಾಕ್ ಸ್ಟೇಡಿಯಂನಲ್ಲಿ ರಾತ್ರಿ 8ಕ್ಕೆ ಆರಂಭವಾಗಲಿರುವ ಮೊದಲ ಕದನದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸವಾಲನ್ನು ಎದುರಿಸಲಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡವು ಈಗಾಗಲೇ ಮೂರು ಬಾರಿ ಕಿರೀಟವನ್ನು ಗೆದ್ದಿದ್ದರೆ ಅತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೊಚ್ಚಲ ಪ್ರಶಸ್ತಿಗಾಗಿ ಸೆಣಸಲಿದೆ. ಹಾಗಾಗಿ ಈ ಸಲ ಕಪ್ ನಮ್ದೇ ಅಭಿಯಾನವು ಜೋರಾಗಿದೆ.

 

Offers

Want to Add your Offers, contact Naadle at 7090787344 or Email us at info@naadle.com