ಎಲ್ಲೆಡೆ ಗೌರಿ ಹಬ್ಬದ ಸಂಭ್ರಮ..!!

yellede gauri habbada sambhrama-naadle
Share This:

ಗೌರಿ ಭಾದ್ರಪದ ಮಾಸದ ಚತುರ್ಥಿಯ ಮುನ್ನಾದಿನ ಬರುವ ಗೌರಿ ಹಬ್ಬ ಮುತ್ತೈದೆಯರಿಗೆ ಸಕಲ ಸೌಭಾಗ್ಯ ನೀಡುವ ಗೌರಿ ಹಬ್ಬವನ್ನು ಸ್ವರ್ಣ ಗೌರಿ ವೃತದ ಮೂಲಕ ಎಲ್ಲೆಡೆ ಸಂಭ್ರಮದಿಂದ ನಾಳೆ  ಆಚರಿಸಲಾಗುತ್ತದೆ. yellede gauri habbada sambhrama-naadle

Upcoming and Ongoing events

View More Events

Want to Promote your Event, contact Naadle at 7090787344 or Email us at info@naadle.com


ಸ್ವರ್ಣ ಎಂದರೆ ಬಂಗಾರ. ಬಂಗಾರದ ಬಣ್ಣದಂತೆ ಹೊಳೆಯುವ ಜಗನ್ಮಾತೆಯಾದ ಗೌರಿಯನ್ನು ಈ ದಿನ ಶೋಡಶೋಪಚಾರದಿಂದ ಪೂಜಿಸಲಾಗುತ್ತದೆ. ಶಿವನನ್ನು ವರಿಸಿ ಕೈಲಾಸದಲ್ಲಿ ನೆಲೆಸಿರುವ ಗೌರಿ ವರ್ಷಕ್ಕೊಮ್ಮೆ ತನ್ನ ತವರಾದ ಭೂಮಿಗೆ ಬಂದು ಪೂಜೆ ಸ್ವೀಕರಿಸಿ, ಹೆಣ್ಣುಮಕ್ಕಳಿಂದ ಬಾಗೀನ ಪಡೆದು ಸಂತೃಪ್ತಳಾಗಿ ಕೈಲಾಸಕ್ಕೆ ಹೋಗುತ್ತಾಳೆ ಎಂಬ ನಂಬಿಕೆ ಇದೆ. ಮನುಷ್ಯನಿಗೆ ಆಸ್ತಿ, ಅಂತಸ್ತು, ಹಣ ಮುಂತಾದ ಭೌತಿಕ ಸಂಪತ್ತು ಎಷ್ಟೇ ಇದ್ದರೂ , ಮಾನಸಿಕ ಸಂಪತ್ತಾದ ಶಾಂತಿ-ನೆಮ್ಮದಿಯಿಲ್ಲದೇ ಹೋದರೆ ಜೀವನ ನಶ್ವರವಾಗುತ್ತದೆ.yellede gauri habbada sambhrama-naadleಗೌರಿ ಹಬ್ಬದ ದಿನ ಮಹಿಳೆಯರು ಸಾಂಪ್ರದಾಯಿಕ ಉಡುಪಿನಲ್ಲಿರುತ್ತಾರೆ. ಅವರು ಜಲಗೌರಿ ಪ್ರತಿಕೃತಿ ಅಥವಾ ಅರಶಿನದಿಂದ ಅರಶಿನದಗೌರಿಯನ್ನು ಮಾಡುತ್ತಾರೆ. ಇದರ ಬಳಿಕ ಮಂತ್ರದ ಮೂಲಕ ದೇವತೆಯನ್ನು ಆವಾಹಿಸಲಾಗುತ್ತದೆ. ವ್ರತದ ಅಂಗವಾಗಿ ಬಾಗಿನವನ್ನು ತಯಾರು ಮಾಡಲಾಗುತ್ತದೆ. ಬಾಗಿನದಲ್ಲಿ ವಿವಿಧ ರೀತಿಯ ವಸ್ತುಗಳಾದ ಅರಶೀನ, ಕುಂಕುಮ, ಕಪ್ಪು ಬಳೆ, ಕಪ್ಪು ಮಣಿಗಳು, ಬಾಚಣಿಗೆ, ಸಣ್ಣ ಕನ್ನಡಿ, ತೆಂಗಿನಕಾಯಿ, ಧಾನ್ಯಗಳು, ಅಕ್ಕಿ, ಗೋಧಿ ಮತ್ತು ಬೆಲ್ಲವಿರುತ್ತದೆ. ವ್ರತಕ್ಕಾಗಿ ಸುಮಾರು ಐದು ಬಾಗಿನಗಳನ್ನು ತಯಾರಿಸಲಾಗುತ್ತದೆ. ಒಂದು ಬಾಗಿನವನ್ನು ದೇವತೆಗೆ ಅರ್ಪಿಸಲಾಗುತ್ತದೆ ಮತ್ತು ಉಳಿದ ಬಾಗಿನಗಳನ್ನು ಮುತ್ತೈದೆ ಮಹಿಳೆಯರಿಗೆ ನೀಡಲಾಗುತ್ತದೆ. ಇದರ ಬಳಿಕ ಗೌರಿ ದೇವತೆಗೆ ಹೋಲಿಗೆ ಅಥವಾ ಒಬ್ಬಟ್ಟು, ಪಾಯಸವನ್ನು ಅರ್ಪಿಸಲಾಗುತ್ತದೆ. ಗೌರಿ ಹಬ್ಬವನ್ನು ಈ ಎಲ್ಲಾ ರೀತಿಯಿಂದ ಆಚರಿಸಿದ ಮರುದಿನ ಗಣೇಶ ದೇವರ ಮೂರ್ತಿಯನ್ನು ಮನೆಗೆ ತರಲಾಗುತ್ತದೆ ಮತ್ತು 11 ದಿನಗಳ ಕಾಲ ಪೂಜಿಸಲಾಗುತ್ತದೆ.
naadle If you like this article, click on the button below

Offers

Want to Add your Offers, contact Naadle at 7090787344 or Email us at info@naadle.com