ಮರ್ಲಾನ್ ಸ್ಯಾಮ್ಯುಯೆಲ್ಸ್ ಎಸೆತದಲ್ಲಿ ಲಾಂಗ್ ಆನ್ ನತ್ತ ಚೆಂಡನ್ನು ಅಟ್ಟಿ ಒಂದು ರನ್ ಕಸಿದ ಬೆನ್ನಲ್ಲಿಯೇ ವಿರಾಟ್ ಕೊಹ್ಲಿ 205 ಏಕದಿನ ಇನಿಂಗ್ಸ್ ಗಳಲ್ಲಿ 10 ಸಾವಿರ ರನ್ ಗಡಿ ಮುಟ್ಟಿದರು. ಈವರೆಗೂ ವಿಶ್ವ ಕ್ರಿಕೆಟ್ ನಲ್ಲಿ ಅತಿವೇಗವಾಗಿ ಏಕದಿನದಲ್ಲಿ 10 ಸಹಸ್ರ ರನ್ ಗಳ ಗಡಿ ಮುಟ್ಟಿದ್ದ ದಿಗ್ಗಜ ಸಚಿನ್ ತೆಂಡುಲ್ಕರ್ ಗಿಂತ 54 ಕಡಿಮೆ ಇನಿಂಗ್ಸ್ ನಲ್ಲಿ ಈ ಸಾಧನೆ ಮಾಡಿದ ಕೊಹ್ಲಿ, ತೀರಾ ಅಪರೂಪದ ಮೈಲಿಗಲ್ಲನ್ನು ಹಲವರ ನಿರೀಕ್ಷೆಗಿಂತ ಮುಂಚಿತವಾಗಿ ಮುಟ್ಟಿದರು.
Upcoming and Ongoing events
Want to Promote your Event, contact Naadle at 7090787344 or Email us at [email protected]
ವಿಶ್ವ ಕ್ರಿಕೆಟ್ ನ ದಿಗ್ಗಜರುಗಳಿಂದ ‘ಕಿಂಗ್ ಕೊಹ್ಲಿ’ ಎಂದು ಕರೆಸಿಕೊಳ್ಳುತ್ತಿರುವ 29 ವರ್ಷದ ವಿರಾಟ್ ಕೊಹ್ಲಿ, ಎರಡು ದಶಕಗಳ ಕಾಲ ಭಾರತೀಯ ಕ್ರಿಕೆಟ್ ನ ಆಧಾರಸ್ತಂಭವಾಗಿದ್ದ ತೆಂಡುಲ್ಕರ್ ರ ಮತ್ತೊಂದು ದಾಖಲೆಯನ್ನು ನಿರೀಕ್ಷೆಗಿಂತ ಮುಂಚಿತವಾಗಿಯೇ ಪುಡಿಗಟ್ಟಿದರು. ಸಚಿನ್ 10 ಸಹಸ್ರ ರನ್ ಬಾರಿಸಲು 259 ಇನಿಂಗ್ಸ್ ಆಡಿದ್ದರು. ಪ್ರವಾಸಿ ವೆಸ್ಟ್ಇಂಡೀಸ್ ವಿರುದ್ಧ ತವರಿನಲ್ಲಿ ಸಾಗುತ್ತಿರುವ ಏಕದಿನ ಸರಣಿಯ ದ್ವಿತೀಯ ಪಂದ್ಯದಲ್ಲೂ ನಾಯಕ ವಿರಾಟ್ ಕೊಹ್ಲಿ ಶತಕೋತ್ತರ ಶತಕದ ಸಾಧನೆ ಮಾಡಿದ್ದರು. ಈ ಮೊದಲು ಗುವಾಹಟಿಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲೂ 140 ರನ್ ಬಾರಿಸಿದ್ದರು. ಈ ಮೂಲಕ ವಿಂಡೀಸ್ ವಿರುದ್ದ ಹ್ಯಾಟ್ರಿಕ್ ಶತಕ ಸಾಧನೆಯನ್ನು ಮಾಡಿದ್ದರು.2018ನೇ ಸಾಲಿನಲ್ಲಿ ಆಡಿರುವ ಕೇವಲ 11ನೇ ಇನ್ನಿಂಗ್ಸ್ಗಳಲ್ಲಿ ಕೊಹ್ಲಿ 1000 ರನ್ ಮೈಲುಗಲ್ಲು ತಲುಪಿದ್ದಾರೆ. ಈ ಮೂಲಕ ಏಕದಿನ ಕ್ಯಾಲೆಂಡರ್ ವರ್ಷವೊಂದರಲ್ಲಿ ಅತಿ ವೇಗವಾಗಿ 1000 ರನ್ ಗಳಿಸಿದ ದಾಖಲೆಗೂ ಪಾತ್ರವಾಗಿದ್ದಾರೆ. ಕೆಲ ವರ್ಷಗಳ ಹಿಂದೆ ಸಚಿನ್ 100ನೇ ಅಂತಾರಾಷ್ಟ್ರೀಯ ಶತಕ ಪೂರೈಸಿದಾಗ, ಭಾರತದ ಆಟಗಾರರಿಂದಲೇ ಈ ದಾಖಲೆ ಮುರಿದರೆ ಸಂತಸವಾಗುತ್ತದೆ ಎಂದಿದ್ದರು. ಕೊಹ್ಲಿ ಹಾಗೂ ರೋಹಿತ್ ಶರ್ಮಗೆ ಈ ಸಾಮರ್ಥ್ಯವಿದೆ ಎಂದೂ ತಿಳಿಸಿದ್ದರು. ಇಂದು ದಿಗ್ಗಜನ ಮಾತು ಕೊಹ್ಲಿ ನಿರ್ವಹಣೆಯಿಂದ ಸತ್ಯವಾಗುವ ಹಂತದಲ್ಲಿದೆ.
If you like this article, click on the button below
Offers
Want to Add your Offers, contact Naadle at 7090787344 or Email us at [email protected]