ಏಕದಿನ ವಿಶ್ವಕಪ್ ಮಹಾ ಹಬ್ಬಕ್ಕೆ ಇಂದಿನಿಂದ ಚಾಲನೆ..!!

yekadina vishwacup mahahabbakke indininda chalane-naadle
Share This:

ಏಕದಿನ ಕ್ರಿಕೆಟ್‌ ವಿಶ್ವಕಪ್‌ನ 12ನೇ ಆವೃತ್ತಿಯ ಟೂರ್ನಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. 12ನೇ ಆವೃತ್ತಿಯ ಏಕದಿನ ವಿಶ್ವಕಪ್‌ಗೆ ಇಂಗ್ಲೆಂಡ್ ಹಾಗೂ ವೇಲ್ಸ್ ಆತಿಥ್ಯ ವಹಿಸುತ್ತಿದೆ. ಹಾಗೆಯೇ ಗುರುವಾರ ನಡೆಯಲಿರುವ ಮೊದಲ ಪಂದ್ಯದಲ್ಲಿ ಕ್ರಿಕೆಟ್ ಜನಕ ಇಂಗ್ಲೆಂಡ್ ತಂಡವು ಪ್ರಬಲ ದಕ್ಷಿಣ ಆಫ್ರಿಕಾ ಸವಾಲನ್ನು ಎದುರಿಸಲಿದೆ.yekadina vishwacup mahahabbakke indininda chalane-naadle

Upcoming and Ongoing events

View More Events

Want to Promote your Event, contact Naadle at 7090787344 or Email us at info@naadle.com

ಟೂರ್ನಿಯಲ್ಲಿ ಒಟ್ಟು 10 ತಂಡಗಳು ಭಾಗವಹಿಸುತ್ತಿದೆ. ಅಲ್ಲದೆ 1992ರ ಬಳಿಕ ಇದೇ ಮೊದಲ ಬಾರಿಗೆ ರೌಂಡ್ ರಾಬಿನ್ ಮಾದರಿಯಲ್ಲಿ ಟೂರ್ನಿಯು ಆಯೋಜನೆಯಾಗುತ್ತಿದೆ. ಅಂದರೆ ಎಲ್ಲ 10 ತಂಡಗಳು ಮೊದಲ ಹಂತದಲ್ಲಿ ತಲಾ ಒಂಬತ್ತು ಪಂದ್ಯಗಳನ್ನು ಆಡಲಿದೆ. ಇಲ್ಲಿ ಅಗ್ರ ನಾಲ್ಕು ಸ್ಥಾನಗಳನ್ನು ಪಡೆದ ತಂಡಗಳು ಸೆಮಿಫೈನಲ್‌ಗೆ ತೇರ್ಗಡೆಯನ್ನು ಹೊಂದಲಿದೆ. ಬಹುನಿರೀಕ್ಷಿತ ಫೈನಲ್ ಪಂದ್ಯವು ಜುಲೈ 14ರಂದು ನಡೆಯಲಿದೆ. ಏಕದಿನ ಶ್ರೇಯಾಂಕದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ಇಂಗ್ಲೆಂಡ್ ಜತೆಗೆ ಎರಡನೇ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವೆನಿಸಿಕೊಂಡಿದೆ.yekadina vishwacup mahahabbakke indininda chalane-naadleಭಾರತ ತಂಡವು ತನ್ನ ಮೊದಲ ಮುಖಾಮುಖಿಯಲ್ಲಿ ಜೂನ್ 5ರಂದು ದಕ್ಷಿಣ ಆಫ್ರಿಕಾ ಸವಾಲನ್ನು ಎದುರಿಸಲಿದೆ. ಕಳೆದ ಬಾರಿ ನ್ಯೂಜಿಲೆಂಡ್ ತಂಡವನ್ನು ಮಣಿಸಿದ ಆಸ್ಟ್ರೇಲಿಯಾ ದಾಖಲೆಯ ಐದನೇ ಬಾರಿಗೆ ಕಿರೀಟವನ್ನು ಎತ್ತಿ ಹಿಡಿದಿತ್ತು. 1983ರಲ್ಲಿ ಭಾರತ ತನ್ನ ಚೊಚ್ಚಲ ವಿಶ್ವಕಪ್ ಇಂಗ್ಲೆಂಡ್ ನೆಲದಲ್ಲೇ ಜಯಿಸಿತ್ತು ಎಂಬುದು ಅಷ್ಟೇ ಮಹತ್ವದೆನಿಸಿದೆ. ಬಳಿಕ 2011ರಲ್ಲಿ ತವರು ನೆಲದಲ್ಲಿ ಮಹೇಂದ್ರ ಸಿಂಗ್ ಧೋನಿ ವಿಶ್ವಕಪ್ ಕಿರೀಟಕ್ಕೆ ಮುತ್ತಿಕ್ಕಿದ್ದರು. ಇದೀಗ ವಿರಾಟ್ ಕೊಹ್ಲಿ ಇದಕ್ಕೆ ಸಮಾನವಾದ ಐತಿಹಾಸಿಕ ಸಾಧನೆ ಮಾಡಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

 

Offers

Want to Add your Offers, contact Naadle at 7090787344 or Email us at info@naadle.com