Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!

ವಿಕ್ರಂ ಲ್ಯಾಂಡರ್​ ಚಂದ್ರನ ದಕ್ಷಿಣ ಧ್ರುವದಲ್ಲಿ ಸುರಕ್ಷಿತವಾಗಿ ಸ್ಪರ್ಶಿಸುವ ಪ್ರಕ್ರಿಯೆಯ ಕೊನೆಯ ಕ್ಷಣದಲ್ಲಿ ಸಂಪರ್ಕ ಕಳೆದುಕೊಂಡಿದೆ…!!

vikram-lander-chandrana-dakshina-dhruvadallii-surakshithavaagi-sparsisuva-prakriyeya-koneya-kshanadalli-samparka-kaledukondide-naadle
Share This:

ಇಡೀ ವಿಶ್ವದ ಖಗೋಳಾಸಕ್ತರೆಲ್ಲಾ ಈ ಐತಿಹಾಸಿಕ ಕ್ಷಣಕ್ಕೆ ಕಾತರದಿಂದ ಕಾಯುತ್ತಿದ್ದರು. ಚಂದ್ರಯಾನ -2ರ ಆರ್ಬಿಟರ್, ವಿಕ್ರಂ ಲ್ಯಾಂಡಿಂಗ್ ನೌಕೆ ಮತ್ತು ಪ್ರಗ್ಯಾನ್ ಹೆಸರಿನ ಉಪಕರಣಗಳ ಸಹಿತ ಅವಶ್ಯ ಪರಿಕರಗಳನ್ನು ಹೊತ್ತು ಜುಲೈ22ರಂದು ಆಂಧ್ರಪ್ರದೇಶದ ಶ್ರೀ ಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಭೋಮಂಡಲ ಜಿಗಿದಿದ್ದ ‘ಬಾಹುಬಲಿ’ ಹೆಸರಿನ GSLV MK III-M1 ರಾಕೆಟ್ ಭಾರತೀಯರ ಚಂದ್ರಯಾನದ ಕನಸಿಗೆ ಹೊಸ ಉಮ್ಮಸ್ಸು ನೀಡಿತ್ತು.vikram-lander-chandrana-dakshina-dhruvadallii-surakshithavaagi-sparsisuva-prakriyeya-koneya-kshanadalli-samparka-kaledukondide-naadle

Upcoming and Ongoing events

View More Events

Want to Promote your Event, contact Naadle at 7090787344 or Email us at info@naadle.com

ಜಾಗತಿಕವಾಗಿ ಭಾರತಕ್ಕೆ ಮಹತ್ವದ ಸ್ಥಾನ ಕಲ್ಪಿಸಿಕೊಡಲಿರುವ ಚಂದ್ರಯಾನ-2 ಪ್ರಮುಖ ಹಂತವಾಗಿ ವಿಕ್ರಂ ಲ್ಯಾಂಡರ್​ ಚಂದ್ರನ ದಕ್ಷಿಣ ಧ್ರುವದಲ್ಲಿ ಸುರಕ್ಷಿತವಾಗಿ ಲ್ಯಾಂಡ್​ ಆಗುವ ಪ್ರಕ್ರಿಯೆಯಲ್ಲಿ ಕೊನೆಯ ಕ್ಷಣದಲ್ಲಿ ಸಂಪರ್ಕ ಕಳೆದುಕೊಂಡಿದೆ. 48 ದಿನಗಳ ಸುದೀರ್ಘ ಪ್ರಯಾಣದ ಬಳಿಕ ಇಂದು ಅಂದರೆ ಶುಕ್ರವಾರ ತಡರಾತ್ರಿಯ ಸಮಯದಲ್ಲಿ 27 ಕಿಲೋ ಗ್ರಾಂ ತೂಕದ ಪ್ರಗ್ಯಾನ್ ರೋವರ್ ಅನ್ನು ತನ್ನೊಡಳಲ್ಲಿ ಇರಿಸಿಕೊಂಡಿದ್ದ 1471 ಕಿಲೋ ಗ್ರಾಂ ತೂಕದ ‘ವಿಕ್ರಂ ಲ್ಯಾಂಡರ್’ ಯಶಸ್ವಿಯಾಗಿ ಚಂದಿರನ ದಕ್ಷಿಣ ಧ್ರುವದ ಉದ್ದೇಶಿತ ಪ್ರದೇಶದಲ್ಲಿ ಇಳಿಯುವ ಹಂತದಲ್ಲಿ ಕೊನೇ ಕ್ಷಣದಲ್ಲಿ ನಿಯಂತ್ರಣ ಕೇಂದ್ರದಿಂದ ತನ್ನ ಸಂಪರ್ಕವನ್ನು ಕಡಿದುಕೊಂಡಿತು. ಇದು ಇಸ್ರೋ ವಿಜ್ಞಾನಿಗಳಲ್ಲಿ ನಿರಾಸೆ ಮೂಡಿಸಿತು.ಲ್ಯಾಂಡರ್ ವಿಕ್ರಮ್ ಇಂದು ಮುಂಜಾನೆ 1.55 ಕ್ಕೆ ಚಂದ್ರನ ಮೇಲ್ಮೈ ಮೇಲೆ ಇಳಿಯಬೇಕಿತ್ತು, ಆದರೆ ಅದರ ಸಮಯವನ್ನು ಮಧ್ಯಾಹ್ನ 1.45 ಕ್ಕೆ ಇಳಿಯಲಿದೆ ಎಂದು ಹೇಳಲಾಗಿತ್ತು. ಆದರೆ, ಬಳಿಕ ಲ್ಯಾಂಡರ್ ವಿಕ್ರಮ್‌ನ ಸಂಪರ್ಕ ಕಡಿದುಕೊಂಡಿದೆ. ಈ ಮಿಷನ್ ಇನ್ನೂ ಕಾರ್ಯಾಚರಣೆಯಲ್ಲಿದ್ದು ಇಸ್ರೋ ಅದನ್ನು ಮತ್ತೆ ಸಂಪರ್ಕಿಸಲು ಪ್ರಯತ್ನಿಸುತ್ತಿದೆ.vikram-lander-chandrana-dakshina-dhruvadallii-surakshithavaagi-sparsisuva-prakriyeya-koneya-kshanadalli-samparka-kaledukondide-naadleಇದುವರೆಗೆ ಚಂದ್ರನ ನೆಲದಲ್ಲಿ ಕಾಲೂರಿದ ಯಾವ ದೇಶವೂ ಅದರ ದಕ್ಷಿಣ ಧ್ರುವವನ್ನು ಅನ್ವೇಷಿಸಿಲ್ಲ. ನಮ್ಮ ಲ್ಯಾಂಡರ್‌ ಕಾಲಿಡುತ್ತಿರುವುದು ದಕ್ಷಿಣ ಧ್ರುವ ಪ್ರದೇಶದಲ್ಲಿ. ಈ ಭಾಗ ಮನುಕುಲಕ್ಕೆ ಇದುವರೆಗೂ ಕತ್ತಲ ಗರ್ಭದಲ್ಲಿಯೇ ಇದೆ. ಇಸ್ರೋದ ಸಾಹಸದಿಂದ ಈ ಭಾಗಕ್ಕೆ ಬೆಳಕು ಬೀಳಬಹುದೆಂಬ ನಿರೀಕ್ಷೆ. ಚಂದ್ರನ ನೆಲದ ಮೇಲ್ಮೈಯಲ್ಲಿ ಕಂಡುಬರುವ ಖನಿಜ ಹಾಗೂ ನೀರಿನ ಅಂಶಗಳನ್ನು ಅಧ್ಯಯನಕ್ಕೊಳಪಡಿಸುವುದು ಈ ಯೋಜನೆಯ ಮುಖ್ಯ ಉದ್ದೇಶ. ಚಂದ್ರಯಾನ-2 ಯೋಜನೆಯಿಂದ ನಮ್ಮ ದೇಶದ ಹೊಸ ಕಾಲದ ಅವಿಷ್ಕಾರಗಳು, ಸಂಶೋಧನೆಗೆ ಸ್ಫೂರ್ತಿ ಸಿಗಲಿದೆ. ಜಗತ್ತಿನ ಶಕ್ತಿಶಾಲಿ ರಾಷ್ಟ್ರಗಳು ಭಾರತದೊಂದಿಗೆ ಮತ್ತಷ್ಟು ಉತ್ತಮ ಬಾಂಧವ್ಯ ಬೆಳೆಸಲಿವೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದಲ್ಲಿ ಹೆಚ್ಚಿನ ವಾಣಿಜ್ಯ ಅವಕಾಶಗಳ ಬೆಳವಣಿಗೆ ಆಗಲಿದೆ. ಬಾಹ್ಯಾಕಾಶದ ಕುರಿತು ನಮ್ಮ ಜ್ಞಾನ ಹೆಚ್ಚಳವಾಗಲಿದೆ. ತಂತ್ರಜ್ಞಾನದ ಸುಧಾರಣೆ ಮತ್ತು ಮುಂದಿನ ಜನಾಂಗವನ್ನು ಪ್ರೇರೇಪಿಸಿ ಸ್ಪೂರ್ತಿ ತುಂಬಲಿದೆ ಎಂಬುದು ಇಸ್ರೋ ಅಧ್ಯಕ್ಷ ಕೆ.ಶಿವನ್‌ ಅವರ ಅಭಿಪ್ರಾಯ.vikram-lander-chandrana-dakshina-dhruvadallii-surakshithavaagi-sparsisuva-prakriyeya-koneya-kshanadalli-samparka-kaledukondide-naadleವಿಕ್ರಮ್ ಲ್ಯಾಂಡರ್‌ನ ಯೋಜಿತ ಸ್ಪರ್ಶವನ್ನು ವೀಕ್ಷಿಸಲು ಶುಕ್ರವಾರ ರಾತ್ರಿ ಬೆಂಗಳೂರಿಗೆ ಬಂದಿಳಿದಿದ್ದ ಪ್ರಧಾನಿ ಮೋದಿ, ಇಸ್ರೋ ವಿಜ್ಞಾನಿಗಳಿಗೆ ಇಡೀ ದೇಶವು ನಿಮ್ಮೊಂದಿಗೆ ನಿಂತಿದೆ ಮತ್ತು ಭಾರತದ ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ಇನ್ನೂ ಉತ್ತಮವಾದದ್ದು ಸಾಧಿಸಬೇಕಿದೆ. ಇಂದಿನ ನಮ್ಮ ಕಲಿಕೆ ನಾಳೆ ನಮ್ಮನ್ನು ಗಟ್ಟಿಗೊಳಿಸುತ್ತದೆ, ಹತಾಶರಾಗಬೇಡಿ. ನಿಮ್ಮೊಂದಿಗೆ ನಾವಿದ್ದೇವೆ. ಇಡೀ ಭಾರತವಿದೆ ಎಂದು ಹೇಳಿ ಇಸ್ರೋ ವಿಜ್ಞಾನಿಗಳ ಕೆಲಸ ನಿರ್ವಹಣೆ ಹಾಗೂ ಪರಿಶ್ರಮವನ್ನು ಶ್ಲಾಘಿಸಿದರು .

 

Offers

Want to Add your Offers, contact Naadle at 7090787344 or Email us at info@naadle.com