ವಿಜಯ ಬ್ಯಾಂಕ್, ದೇನಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ ವಿಲೀನ..!!

vijaya bank denaa bank bank of baroda vilina-naadle
Share This:

ಕರ್ನಾಟಕ ಮೂಲದ ವಿಜಯಾ ಬ್ಯಾಂಕ್, ಮಹಾರಾಷ್ಟ್ರದ ದೇನಾ ಬ್ಯಾಂಕ್ ಮತ್ತು ಗುಜರಾತ್ ಮೂಲದ ಬ್ಯಾಂಕ್ ಆಫ್ ಬರೋಡಾ (ಬಿಒಬಿ)ಗಳನ್ನು ವಿಲೀನಗೊಳಿಸುವುದಾಗಿ ಕೇಂದ್ರ ಸರ್ಕಾರ ಸೋಮವಾರ ಅಧಿಕೃತವಾಗಿ ಘೋಷಿಸಿದೆ. ಈ ಮೂರೂ ಬ್ಯಾಂಕ್​ಗಳ ವಿಲೀನದ ನಂತರ ದೇಶದ ಮೂರನೇ ಅತಿ ದೊಡ್ಡ ಬ್ಯಾಂಕ್ ಎಂಬ ಶ್ರೇಯಕ್ಕೆ ಪಾತ್ರವಾಗಲಿದೆ. ಮೂರೂ ಬ್ಯಾಂಕ್​ಗಳ ಒಟ್ಟಾರೆ ವಹಿವಾಟು -ಠಿ; 14.82 ಲಕ್ಷ ಕೋಟಿ ಆಗಲಿದೆ.  vijaya bank denaa bank bank of baroda vilina-naadle

Upcoming and Ongoing events

View More Events

Want to Promote your Event, contact Naadle at 7090787344 or Email us at info@naadle.com


ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಮತ್ತು ಹಣ ಕಾಸು ಸೇವೆಗಳ ಕಾರ್ಯದರ್ಶಿ ರಾಜೀವ್‌ ಕುಮಾರ್‌ ಸೋಮವಾರ ದಿಲ್ಲಿಯಲ್ಲಿ ಆಯೋಜಿಸಿದ್ದ ಸುದ್ದಿ ಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ್ದಾರೆ. ವಿಲೀನ ಪ್ರಕ್ರಿಯೆ ಯಿಂದ ದೇಶದ ಬ್ಯಾಂಕಿಂಗ್‌ ಕ್ಷೇತ್ರ ಮತ್ತಷ್ಟು ಬಲಗೊಳ್ಳಲಿದೆ. ಸಾಲ ನೀಡುವ ಬಲ ಅವುಗಳಿಗೆ ಸಿಗಲಿದೆ. ಇತ್ತೀಚಿನ ದಿನಗಳಲ್ಲಿ ಸಾಲ ನೀಡುವ ಬ್ಯಾಂಕ್‌ಗಳ ಶಕ್ತಿ ಕುಂದುತ್ತಿದೆ. ಇದರಿಂದಾಗಿ ಕಾರ್ಪೊರೇಟ್‌ ಕ್ಷೇತ್ರದಲ್ಲಿನ ಹೂಡಿಕೆಗಳಿಗೆ ಹಿನ್ನಡೆಯಾಗುತ್ತಿದೆ. ಹೀಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹಣಕಾಸು ಸಚಿವ ಅರುಣ್‌ ಜೇಟ್ಲಿ ಹೇಳಿದ್ದಾರೆ. vijaya bank denaa bank bank of baroda vilina-naadleಉದ್ದೇಶಿತ ಮೂರು ಬ್ಯಾಂಕ್‌ಗಳ ವಿಲೀನದಿಂದ ಉದ್ಯೋಗಿಗಳಿಗೆ ಯಾವುದೇ ತೊಡಕಾಗುವುದಿಲ್ಲ. ಹಾಲಿ ಸೇವಾ ನಿಯಮಗಳೇ ಮುಂದೆಯೂ ಅನ್ವಯವಾಗುತ್ತವೆ ಎನ್ನುವುದು ಸರಕಾರದ ವಿವರಣೆ. ಎಸ್‌ಬಿಐ ವಿಲೀನದ ಸಂದರ್ಭದಲ್ಲಿ ಉದ್ಯೋಗಿಗಳ ಸಂಘಟನೆಯಿಂದ ಒಂದಿಷ್ಟು ತಕರಾರುಗಳು ಕೇಳಿಬಂದಿದ್ದವು. ವಿಲೀನ ವಿರೋಧಿಸಿ ಹೋರಾಟಗಳೂ ನಡೆದಿದ್ದವು. ವಿಜಯ ಬ್ಯಾಂಕ್‌, ಬ್ಯಾಂಕ್‌ ಆಫ್‌ ಬರೋಡಾ, ದೇನಾ ಬ್ಯಾಂಕ್‌ ಸೇರಿದಂತೆ ಮೂರು ಬ್ಯಾಂಕ್‌ಗಳ ವಿಲೀನ ಕುರಿತ ಯೋಜನೆಯನ್ನು ಬ್ಯಾಂಕ್‌ ಮಂಡಳಿಯು ಪರಿಶೀಲನೆ ನಡೆಸಲಿದೆ. ಈ ವಿಲೀನದಿಂದ ಬ್ಯಾಂಕ್‌ಗಳ ಕಾರ್ಯನಿರ್ವಹಣೆ ಮತ್ತು ಗ್ರಾಹಕರ ಸೇವೆಗಳು ಸುಧಾರಿಸಲು ಅನುಕೂಲವಾಗಲಿದೆ. ಖಾಸಗಿ ಬ್ಯಾಂಕ್‌ಗಳಿಗೆ ಸ್ಪರ್ಧೆ ನೀಡಲು, ವೆಚ್ಚಗಳ ತಗ್ಗಿಸಿ ಬ್ಯಾಂಕಿಂಗ್‌ ವ್ಯವಸ್ಥೆ ಬಲಗೊಳಿಸುವುದು ಸರಕಾರಿ ಬ್ಯಾಂಕ್‌ಗಳ ವಿಲೀನದ ಮುಖ್ಯ ಉದ್ದೇಶ.
naadle If you like this article, click on the button below

Offers

Want to Add your Offers, contact Naadle at 7090787344 or Email us at info@naadle.com