ವಾಯುಪಡೆಗೆ ‘ಚಿನೂಕ್‌’ ಬಲ..!!

Vayupadeg chinook bala-naadle
Share This:

ಇತ್ತೀಚೆಗೆ ಭಾರತದ ಸೇನಾ ಶಕ್ತಿ ಬಲಗೊಳ್ಳುತ್ತಿರುವ ಬೆನ್ನಲ್ಲೆ ಭಾರತೀಯ ವಾಯುಪಡೆಗೆ ಆನೆ ಬಲ ಬಂದಿದೆ, ಬಹು ಉಪಯೋಗಿ ಮತ್ತು ಅತ್ಯಾಧುನಿಕ ತಂತ್ರಜ್ಞಾನವುಳ್ಳ ಚಿನೂಕ್ CH47F (I) ಹೆಲಿಕಾಪ್ಟರ್ ಗಳು ವಾಯು ಸೇನೆಗೆ ಸೇರ್ಪಡೆಯಾಗಿದೆ. ಬಹು ಉಪಯೋಗಿ ಹೆಲಿಕಾಪ್ಟರ್ ಆಗಿರುವಂತಹ ಚಿನೂಕ್ CH47F (I) ಎಲ್ಲ ಬಗೆಯ ಸೇನಾ ಕಾರ್ಯಾಚರಣೆಗೆ ನೆರವಾಗಲಿವೆ, ಪ್ರಮುಖವಾಗಿ ನೈಸರ್ಗಿಕ ವಿಪ್ಪತ್ತು ನಿರ್ವಹಣೆ , ಸೇನಾ ಪಸ್ತುಗಳ ಪೂರೈಕೆ ಇನ್ನು ಮುಂತಾದ ಕಾರ್ಯಾಚರಣೆಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತವೆ. ಅಧಿಕ ಭಾರದ ಸಾಮಾಗ್ರಿಗಳನ್ನು ಹೊತ್ತೂಯ್ಯಬಲ್ಲ ಸಾಮರ್ಥ್ಯವಿರುವ ಇಂತಹ ನಾಲ್ಕು ಚಿನೂಕ್‌ ಹೆಲಿಕಾಫ್ಟರ್‌ ಗಳನ್ನು ಇಂದು ವಾಯಪಡೆಗೆ ಸೇರ್ಪಡೆಗೊಳಿಸಲಾಯಿತು. ವಾಯು ಸೇನಾ ಮುಖ್ಯಸ್ಥ ಏರ್‌ ಚೀಫ್ ಮಾರ್ಷಲ್‌ ಬಿ.ಎಸ್‌. ಧನೋವಾ ಅವರು ಚಂಢಿಗಢದಲ್ಲಿ ಚಿನೂಕ್‌ ಹೆಲಿಕಾಫ್ಟರ್‌ ಗಳನ್ನು ವಾಯುಸೇನೆಗೆ ಔಪಚಾರಿಕವಾಗಿ ಸೇರ್ಪಡೆಗೊಳಿಸಿದರು.Vayupadeg chinook bala-naadle

Upcoming and Ongoing events

View More Events

Want to Promote your Event, contact Naadle at 7090787344 or Email us at info@naadle.com

2015ರಲ್ಲಿ ಭಾರತವು 15 ಚಿನೂಕ್‌ ಹೆಲಿಕಾಪ್ಟರ್‌ ಗಳಿಗಾಗಿ ಅಮೆರಿಕಾದ ಜೊತೆ 1.5 ಬಿಲಿಯನ್‌ ಡಾಲರ್‌ ಮೊತ್ತದ ಒಪ್ಪಂದಕ್ಕೆ ಸಹಿ ಮಾಡಿತ್ತು. ಈ ಒಪ್ಪಂದದ ಪ್ರಕಾರ ಮೊದಲ ಕಂತಿನ ನಾಲ್ಕು ಹೆಲಿಕಾಫ್ಟರ್‌ ಗಳು ಅಮೆರಿಕಾದಿಂದ ಗುಜರಾತ್‌ ನ ಮುಂದ್ರಾ ಬಂದರಿನ ಮೂಲಕ ಹಡಗಿನಲ್ಲಿ ಭಾರತಕ್ಕೆ ಆಗಮಿಸಿದ್ದವು, ಬಳಿಕ ಅಲ್ಲಿಂದ ಅವುಗಳನ್ನು ಚಂಡೀಗಢಕ್ಕೆ ರವಾನಿಸಲಾಗಿತ್ತು. ಈ ಮೂಲಕ ಚಿನೂಕ್‌ ಹೆಲಿಕಾಫ್ಟರ್‌ ಗಳನ್ನು ಬಳಸುತ್ತಿರುವ 19ನೇ ರಾಷ್ಟ್ರವಾಗಿ ಭಾರತ ಗುರುತಿಸಿಕೊಂಡಂತಾಗಿದೆ. ಒಂದು ಬಾರಿಗೆ 23,000 ಕಿಲೋ ಸಾಮರ್ಥ್ಯದ ಭಾರವನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಈ ಹೆಲಿಕಾಫ್ಟರ್‌ ಗಿದೆ ಮತ್ತಿದರ ಗರಿಷ್ಠ ವೇಗ ಗಂಟೆಗೆ 302 ಕಿಲೋಮೀಟರ್‌ ಗಳಾಗಿದೆ.Vayupadeg chinook bala-naadleಗುಡ್ಡಗಾಡು ಪ್ರದೇಶದಲ್ಲಿ ರಸ್ತೆ ನಿರ್ಮಾಣಕ್ಕೆ ಬೇಕಾದ ಎಲ್ಲ ಬಗೆಯ ಸರಕನ್ನು ಈ ಕಾಪ್ಟರ್‌ ಹೊತ್ತೊಯ್ಯಬಲ್ಲದು. ಹಿಂದೆ ಹಾಗೂ ಮುಂದೆ ಎರಡು ಭಾಗದಲ್ಲಿ ದೈತ್ಯ ರೆಕ್ಕೆಗಳನ್ನು ಹೊಂದಿರುವ ಈ ಕಾಪ್ಟರ್‌ ಪರ್ವತ ಪ್ರದೇಶಗಳಿಗೆ ಯೋಧರನ್ನು ಇಳಿಸುವ, ಕರೆತರುವ ಕೆಲಸ ಮಾಡುತ್ತದೆ. ಜತೆಗೆ ಭಾರದ ಮಿಲಿಟರಿ ಉಪಕರಣಗಳನ್ನು ಬೇಕೆಂದರಲ್ಲಿ ಇಳಿಸುತ್ತದೆ. ಈ ಕಾಪ್ಟರ್‌ ಚಾಲನೆ ಕುರಿತಂತೆ ಕಳೆದ ಅಕ್ಟೋಬರ್‌ನಲ್ಲಿ ವಾಯುಪಡೆಯ ನಾಲ್ವರು ಎಂಜಿನಿಯರ್‌ಗಳಿಗೆ ಬೋಯಿಂಗ್‌ ತರಬೇತಿ ನೀಡಿದೆ. ಸೇನಾ ಸಾಮಾಗ್ರಿಗಳನ್ನು ರವಾನಿಸಲು ಮಾತ್ರವೇ ಅಲ್ಲಿದೆ ಚಿನೂಕ್‌ ಹೆಲಿಕಾಫ್ಟರ್‌ ಗಳನ್ನು ಮಿಲಿಟರಿ ಕಾರ್ಯಾಚರಣೆ ಸಂದರ್ಭದಲ್ಲಿ ಹಾಗೂ ವಿಕೋಪ ಪರಿಹಾರ ಕಾರ್ಯಾಚರಣೆ ಸಂದರ್ಭದಲ್ಲೂ ಬಳಸಬಹುದಾಗಿರುತ್ತದೆ. ಹೀಗೆ ಬಹುಪಯೋಗಿ ಮಾದರಿಯ ಚಿನೂಕ್‌ ಹೆಲಿಕಾಪ್ಟರ್‌ ಗಳ ಸೇರ್ಪಡೆಯಿಂದಾಗಿ ಭಾರತೀಯ ವಾಯುಪಡೆಗೆ ವಿಶೇಷ ಬಲ ಬಂದಂತಾಗಿದೆ.

 

Offers

Want to Add your Offers, contact Naadle at 7090787344 or Email us at info@naadle.com