ವರ್ಷದಿಂದ ವರ್ಷಕ್ಕೆ ಬೆಳೆಯುತ್ತೆ ಕಾಪುವಿನ ಬ್ರಹ್ಮ ಬೈದರ್ಕಳ ಗರೋಡಿಯ ಮರದ ಕುದುರೆ..!!

varshadinda varshakke beleyutte kaupina brahmabaidarkalada marada kudure-naadle
Share This:

ಜೀವಿಗಳು ವರ್ಷದಿಂದ ವರ್ಷಕ್ಕೆ ಬೆಳೆಯುವುದು ಸಹಜ ಆದರೆ ನಿರ್ಜೀವ ವಸ್ತುಗಳು ಬೆಳೆಯುವುದು ಅಸಜ ಆದರೆ ಯಾವತ್ತಿಗೂ ಕೂಡ ಅದು ನಂಬಲು ಕಷ್ಟ ಸಾದ್ಯವಾದ ಮಾತು.ಆದ್ರೆ ಉಡುಪಿಯಲ್ಲೊಂದು ಮರದಿಂದ ಕೆತ್ತಿರೋ ಪುರಾತನ ಕುದುರೆಯೊಂದಿದೆ, ಆ ಕುದುರೆ ವರುಷದಿಂದ ವರುಷಕ್ಕೆ ಇಂಚಿಂಚಾಗಿ ಬೆಳೆಯುತ್ತಲೇ ಬಂದಿದೆ.varshadinda varshakke beleyutte kaupina brahmabaidarkalada marada kudure-naadle

Upcoming and Ongoing events

View More Events

Want to Promote your Event, contact Naadle at 7090787344 or Email us at info@naadle.com


ಈ ರೀತಿ ಇಂಚಿಂಚಾಗಿ ಬೆಳೆಯುತ್ತಿರುವ ಕುದುರೆ ಉಡುಪಿ ಕಾಪುವಿನ ಬ್ರಹ್ಮ ಬೈದರ್ಕಳ ಪೊಯ್ಯ ಪೊಡಿಕಲ್ಲ ಗರಡಿಯಲ್ಲಿಯಲ್ಲಿದೆ. ಅಂದಹಾಗೆ ಈ ಗರಡಿಯಲ್ಲಿ ತುಳುನಾಡಿನ ವೀರಪುರುಷರಾದ ಕೋಟಿಚೆನ್ನಯ್ಯರನ್ನು ಆರಾಧಿಸುತ್ತಾ ಬರಲಾಗಿದೆ. ಗರೋಡಿಯಲ್ಲಿ ಕೋಟಿ ಚೆನ್ನಯ್ಯರಿಗೆ ಇರುವಷ್ಟೇ ಪ್ರಾಧಾನ್ಯತೆ ಮರದ ಕುದುರೆಗೂ ಇದೆ. ಗರಡಿಗೆ ಆಗಮಿಸೋ ಭಕ್ತರು ಕುದುರೆಗೂ ಭಕ್ತಿಯಿಂದ ಕೈ ಮುಗಿಯುತ್ತಾರೆ. ಅಂದಹಾಗೆ ಈ ಕುದುರೆಗೂ ಹಲವು ವರುಷಗಳ ಪುರಾಣ ಇತಿಹಾಸವಿದೆ. ಹಲವಾರು ವರುಷಗಳ ಹಿಂದೆ ಈ ಊರಿನ ಮಂದಿ ಅದೆಲ್ಲೋ ವ್ಯಾಪಾರಕ್ಕೆ ತೆರಳಿದ್ದ ವೇಳೆ ಈ ಮರದ ಕುದುರೆಯನ್ನು ಸಂತೆಯಲ್ಲಿ ಕಾಣುತ್ತಾರೆ. ಅದನ್ನು ಪೊಯ್ಯ ಪೊಡಿಕಲ್ಲ ಗರಡಿಯಲ್ಲಿ ಇಡಲೆಂದು ಖರೀದಿಸೋದಕ್ಕೂ ಮುಂದಾಗ್ತಾರೆ. ಆದ್ರೆ ಅದಾಗಲೇ ಆ ಮರದ ಕುದುರೆಯನ್ನು ಆ ಊರಿನ ಅರಸ ಖರೀದಿಸಿದ ವಿಷ್ಯ ತಿಳಿದು ವಾಪಾಸು ಹಿಂತಿರುಗಿ ಬರುತ್ತಾರೆ. ಬಳಿಕ ಆ ಊರಲ್ಲಿ ಅರಸನ ಪಾಲಿಗೆ ಎಲ್ಲವೂ ಕೈ ಕೊಟ್ಟು ರಾಜ್ಯವೇ ದಿವಾಳಿಯಾಗುತ್ತಾ ಸಾಗುತ್ತವೆ. ಈ ವೇಳೆ ಆ ಅರಸ ಜ್ಯೋತಿಷಿಯರಲ್ಲಿ ಪ್ರಶ್ನೆಯನ್ನಿಟ್ಟಾಗ ನೀನು ಖರೀದಿಸಿದ ಕುದುರೆ ಗರಡಿಯೊಂದಕ್ಕೆ ಸೇರಬೇಕಾದದ್ದು ಎಂದು ತಿಳಿಸುತ್ತಾರೆ. ಆದ್ರೆ ಅದನ್ನು ಖರೀದಿಸಲು ಬಂದವರಾಗಲೀ, ಗರಡಿ ಎಲ್ಲಿದ್ದಾಗಲೀ ತಿಳಿಯದೇ ಹೋದಾಗ ಅರಸ ಜ್ಯೋತಿಷಿಗಳ ಸಲಹೆಯಂತೆ ಸಮುದ್ರದಲ್ಲಿ ಬಿಡುತ್ತಾನೆ. ಈ ರೀತಿ ಬಿಟ್ಟ ಮರದ ಕುದುರೆ ಕಾಪು ಕಡಲ ಕಿನಾರೆಗೆ ಬಂದು ಮೀನುಗಾರರ ಕೈ ಸೇರಿ ಬಳಿಕ ಬ್ರಹ್ಮ ಬೈದರ್ಕಳ ಗರಡಿಗೆ ಬಂದು ಸೇರುತ್ತೆ.varshadinda varshakke beleyutte kaupina brahmabaidarkalada marada kudure-naadleಆದ್ರೆ ಸಮುದ್ರದಲ್ಲಿ ಬಂದ ಈ ಕುದುರೆಯನ್ನು ಗರಡಿ ಒಳಗಿಡುವುದು ಕಷ್ಟವಾಯಿತು. ಕಾರಣ ಆ ಸಮಯದಲ್ಲಿ ಗರಡಿಯ ಬಾಗಿಲು ಕಿರಿದಾಗಿದ್ದು ಕುದುರೆಯನ್ನು ಒಳಗೆ ಕೊಂಡೊಯ್ಯಲಾಗಲಿಲ್ಲ. ಹಾಗಂತ ಹೊರಗಿಟ್ಟು ಹೋದ ಕುದುರೆ ಮರುದಿನ ಮತ್ತೊಂದು ಅಚ್ಚರಿ ನೀಡಿತ್ತು. ಹೊರಗಿದ್ದ ಕುದುರೆ ತಾನಾಗಿಯೇ ಗರಡಿಯನ್ನು ಸೇರಿತ್ತು.ಇದರಿಂದಾಗಿ ಜನ ಕುದುರೆಯನ್ನು ಭಕ್ತಿಯಿಂದ ಆರಾದಿಸತೊಡಗಿದರು. ಇಂದಿಗೂ ಆ ಕುದುರೆಯನ್ನು ಬೆಳೆಯುವ ಕುದುರೆ ಎಂದು ಜನ ನಂಬಿದ್ದಾರೆ. ಈಗಿರುವ ಗುರಿಕಾರರ ಹಿರಿಯರ ಪ್ರಕಾರ ಅಂದು ಇದ್ದ ಕುದುರೆಗೂ ಇಂದು ಇರುವ ಕುದುರೆಗೂ ಬಹಳ ವ್ಯತ್ಯಾಸವಿದೆ ಎನ್ನುತ್ತಾರೆ. ಇಂದಿಗೂ ಪ್ರತಿ ಪರ್ವ ಸಂದರ್ಭದಲ್ಲಿ ಈ ಕುದುರೆಗೆ ಪೂಜೆ ಸಲ್ಲುತ್ತದೆ.
SOURCE: https://tulunadunews.com/tnn15758
naadle If you like this article, click on the button below

Offers

Want to Add your Offers, contact Naadle at 7090787344 or Email us at info@naadle.com