ವ್ಯಾಲೆಂಟೈನ್ಸ್ ಡೇ : ಇದು ಹೃದಯಗಳ ವಿಷಯ..!!

Share This:

ವರ್ಷದಿಂದ ವರ್ಷಕ್ಕೆ ಪ್ರೇಮಿಗಳ ದಿನಾಚರಣೆಯಲ್ಲಿಯೂ ಒಂದಷ್ಟು ಅದ್ಧೂರಿತನ, ವೈಭವ, ಜಾಲಿತನ ಎಲ್ಲವೂ ಕಂಡು ಬರುತ್ತಿದೆ. ಗುಲಾಬಿ ಹೂಗಳನ್ನು ನೀಡುವ ಕೈನಲ್ಲಿ ಅದ್ಧೂರಿತನವಿದೆಯಾದರೂ ಹೃದಯದಲ್ಲಿ ಪ್ರೀತಿಗೆ ಬರವಿರುವುದು ಎದ್ದು ಕಾಣುತ್ತಿದೆ.valentines day edu hrudayagala vishaya-naadle

Upcoming and Ongoing events

View More Events

Want to Promote your Event, contact Naadle at 7090787344 or Email us at info@naadle.com

ಮಧ್ಯ ರಾತ್ರಿಯಿಂದಲೇ ವಾಟ್ಸ್​ಆಪ್, ಫೇಸ್​ಬುಕ್, ಟ್ವಿಟರ್, ಹೈಕ್ ಮುತಾದ ಸಾಮಾಜಿಕ ಜಾಲತಾಣಗಳಲ್ಲಿ ಪ್ರೇಮ ಸಂದೇಶಗಳ ಮಹಾಪೂರ. ಈ ದಿನ ಪ್ರೇಮ ನಿವೇದನೆ ಮಾಡಬೇಕೆಂದು ಕೆಲ ಗಂಡು ಹೈಕಳು ಚಾತಕಪಕ್ಷಿ ಥರಾ ಕಾಯುತ್ತ ಕುಳಿತಿದ್ದರೆ, ಇನ್ನೊಂದೆಡೆ ಇವತ್ತು ಯಾರು ಬಂದು ಪ್ರಪೋಸ್ ಮಾಡುತ್ತಾರೋ, ಅವರಿಗೆ ಏನು ಹೇಳೋದು, ಆಗಲ್ಲ ಎಂದರೆ ಏನು ಮಾಡುತ್ತಾರೋ ಎಂದು ಹೆಣ್ಣುಮಕ್ಕಳು ತಲೆ ಕೆಡಿಸಿಕೊಂಡಿದ್ದಾರೆ. ಇನ್ನು ಕೆಲವು ಹೆಣ್ಣುಮಕ್ಕಳು ಇವತ್ತಾದರೂ ನಾನು ಪ್ರೀತಿಸಿದ ಹುಡುಗ ಬಂದು ಪ್ರೇಮನಿವೇದನೆ ಮಾಡಿದ್ದರೆ ಎಷ್ಟು ಚೆನ್ನಾಗಿರುತ್ತದೆ ಎಂದು ಹಗಲುಗನಸು ಕಾಣುತ್ತಿದ್ದಾರೆ. ಈ ದಿನ ವಿಶೇಷವಾಗಿ ಮೇಕಪ್​ಗೆ ತುಂಬ ಸಮಯ ಮೀಸಲಿಡುವ ಜನ ಇದ್ದಾರೆ. ಹೊಸಾ ಡ್ರೆಸ್ಸು, ಅದಕ್ಕೆ ಮ್ಯಾಚಿಂಗ್ ಚಪ್ಪಲಿ, ವಾಚು, ಬಳೆ, ಸರ, ಹೇರ್​ಸ್ಟೈಲು, ಕಿವಿ ಓಲೆ ಇತ್ಯಾದಿ ಇತ್ಯಾದಿ.valentines day edu hrudayagala vishaya-naadleಈ ನಡುವೆ, ಹೆಣ್ಣು ಹೆತ್ತವರು ಇವತ್ತು ಮಗಳು ಎಲ್ಲಿಗೆ ಹೋಗುವಳೋ, ರಾತ್ರಿ ಎಷ್ಟು ಗಂಟೆಗೆ ಮರಳುತ್ತಾಳೋ, ಯಾವ ಹುಡುಗನ ಪ್ರೀತಿಯನ್ನು ಒಪ್ಪಿಕೊಂಡು ಬರುತ್ತಾಳೋ ಎಂಬ ಚಿಂತೆಯಲ್ಲಿದ್ದಾರೆ. ಗಂಡು ಹೆತ್ತವರು ಮಗ ಯಾರನ್ನಾದರೂ ಪ್ರೀತಿಸಿಬಿಟ್ಟರೇ… ಕುಲ- ಗೋತ್ರ ಗೊತ್ತಿಲ್ಲದವಳನ್ನು ಸೊಸೆಯಾಗಿ ತಂದುಬಿಟ್ಟರೇ… ನಾವು ಬೇಡ ಅಂದ್ಮೇಲೆ ಮನೆ ಬಿಟ್ಟು ಹೋಗಿಬಿಟ್ಟರೇ ಎಂಬ ಆತಂಕದಲ್ಲಿದ್ದಾರೆ.valentines day edu hrudayagala vishaya-naadleಇದೆಲ್ಲವೂ ಪ್ರೇಮಿಗಳು ಮತ್ತು ಅವರ ಪಾಲಕರ ಚಿಂತೆಯಾದರೆ, ಪ್ರೇಮಿಗಳ ದಿನದ ವಿರೋಧಿಗಳದು ಬೇರೆಯದೇ ಚಿಂತೆ. ಈ ದಿನವನ್ನು ಯಾರೂ ಆಚರಣೆಯೇ ಮಾಡದಂತೆ ಹೇಗೆ ತಡೆಯುವುದು, ಆಚರಿಸಲು ಮುಂದಾದವರನ್ನು ಹೇಗೆ ಹೆದರಿಸುವುದು… ಹೀಗೆ. ಈ ರೀತಿ ಅವರು ಯೋಚಿಸುತ್ತಿದ್ದರೆ, ಇಂತಹ ನೈತಿಕ ಪೊಲೀಸರನ್ನು ಹೇಗೆ ಮಟ್ಟ ಹಾಕುವುದು ಅಂತ ನಿಜವಾದ ಪೊಲೀಸರು ತಲೆಕೆಡಿಸಿಕೊಂಡಿದ್ದಾರೆ. ಪಾರ್ಕ, ಕಾಲೇಜು, ಕ್ಯಾಂಟೀನುಗಳ ಮೇಲೆ ಕಣ್ಣಿಟ್ಟಿದ್ದಾರೆ. ಸುತ್ತಮುತ್ತ ಕಾವಲನ್ನೂ ಹಾಕಿದ್ದಾರೆ. ಕಾಫಿ ಡೇ, ಪಿಜ್ಜಾ ಹಟ್​ಗಳು ಇವತ್ತು ಬರುವ ವಿಶೇಷ ಜೋಡಿಗಳಿಗಾಗಿ ಶೃಂಗಾರ ಮಾಡಿಕೊಂಡು ಕಾಯುತ್ತಿವೆ. ಎಷ್ಟೋ ಟೇಬಲ್​ಗಳು ಮೊದಲೇ ಬುಕ್ ಕೂಡ ಆಗಿವೆ. ಕಿವಿತುಂಬ ಮೆಲುದನಿಯ ಪ್ರೇಮ ಸಂಗೀತ, ಜೋಡಿಹಕ್ಕಿಗಳ ಕಲರವ. ಕೆಲವರಿಗೆ ಇವತ್ತು ಜಾಕ್​ಪಾಟ್ ಹೊಡೆಯಬಹುದು. ಇನ್ನು ಕೆಲವರ ಹೃದಯ ಚೂರಾಗಬಹುದು. ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡಿ. ಯಾವುದಾದರೂ ಸಿಗಬೇಕು ಎಂದಿದ್ದರೆ ಸಿಕ್ಕೇ ಸಿಗುತ್ತದೆ. ಒತ್ತಾಯದಿಂದ ಏನನ್ನೂ ಪಡೆದುಕೊಳ್ಳಲಾಗುವುದಿಲ್ಲ, ಒಂದು ವೇಳೆ ಪಡೆದುಕೊಂಡರೂ ಅದು ಕೊನೆತನಕ ಉಳಿಯುವುದೂ ಇಲ್ಲ. ನಿಮ್ಮ ಪ್ರೀತಿಯ ಪಾರಿವಾಳ ಹಾರಿಹೋಯಿತು ಅಂತ ದೇವದಾಸ ಆಗಬೇಡಿ. ಅದನ್ನು ಅಲ್ಲಿಗೇ ಬಿಟ್ಹಾಕಿ. ಭವಿಷ್ಯದಲ್ಲಿ ಏನಾಗಬೇಕು ಎಂಬ ಬಗ್ಗೆ ಯೋಚಿಸಿ.

Offers

Want to Add your Offers, contact Naadle at 7090787344 or Email us at info@naadle.com