ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾರ್ಥಿಗಳಿಗೆ ನ್ಯಾಷನಲ್ ಜಿಯೋಗ್ರಾಫಿಕ್ ಎಕ್ಸ್‌ಪ್ಲೋರರ್ ಅವಾರ್ಡ್..!!

uppinangadi indraprasta vidhyarthigalige national geographic explorer award-naadle
Share This:

ಅಮೆರಿಕದ ಕ್ಯಾಲಿಪೋರ್ನಿಯಾದ ಗೂಗಲ್‌ ಕೇಂದ್ರ ಕಚೇರಿಯಲ್ಲಿ ನಡೆದ ಗೂಗಲ್‌ ಸೈನ್ಸ್‌ ಫೇರ್‌ 2018-19ರಲ್ಲಿ ನ್ಯಾಶನಲ್‌ ಜಿಯೋಗ್ರಾಫಿಕ್‌ ಎಕ್ಸ್‌ ಪ್ಲೋರರ್‌ ಅವಾರ್ಡ್‌ ಅನ್ನು ಉಪ್ಪಿನಂಗಡಿ ಇಂದ್ರಪ್ರಸ್ಥ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿಗಳಾದ ಎ.ಯು. ನಚಿಕೇತ್‌ ಕುಮಾರ್‌ ಹಾಗೂ ಅಮನ್‌ ಕೆ.ಎ. ಅವರ ತಂಡ ಗೆದ್ದುಕೊಂಡಿದೆ. ಇನ್ಸ್‌ಫ‌ಯರಿಂಗ್‌ ಎಜುಕೇಟರ್‌ ಅವಾರ್ಡ್‌ ಅದೇ ಸಂಸ್ಥೆಯ ವಿಜ್ಞಾನ ಶಿಕ್ಷಕಿ, ತಂಡದ ಮಾರ್ಗದರ್ಶಿ ಶಿಕ್ಷಕಿ ನಿಶಿತಾ ಕೆ. ಅವರಿಗೆ ಲಭಿಸಿದೆ.uppinangadi indraprasta vidhyarthigalige national geographic explorer award-naadleಜಗತ್ತಿನ ವಿವಿಧೆಡೆಗಳಿಂದ ಆಗಮಿಸಿದ ಒಟ್ಟು 20 ಗ್ಲೋಬಲ್ ಫೈನಲಿಸ್ಟ್‌ಗಳ ಪೈಕಿ ಭಾರತದಿಂದ ಒಟ್ಟು ನಾಲ್ಕು ತಂಡಗಳು ಭಾಗವಹಿಸಿದ್ದವು. ನಚಿಕೇತ್ ಪತ್ರಕರ್ತ ಉಪ್ಪಿನಂಗಡಿಯ ಯು.ಎಲ್.ಉದಯಕುಮಾರ್ ಹಾಗೂ ವಿನಯಾ ದಂಪತಿ ಪುತ್ರ. ಅಮನ್ ಅಗ್ನಿಶಾಮಕ ದಳ ಉದ್ಯೋಗಿ, ಮಾಜಿ ಸೈನಿಕ ಉಪ್ಪಿನಂಗಡಿಯ ಅಬ್ದುಲ್ ಅಜೀಜ್ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ರೆಹಮತ್ ಬೇಗಂ ದಂಪತಿ ಪುತ್ರ.

Upcoming and Ongoing events

View More Events

Want to Promote your Event, contact Naadle at 7090787344 or Email us at info@naadle.com

ಪರಿಸರದಲ್ಲಿನ ಸಂಶೋಧನೆಗಾಗಿ ನೀಡಲಾಗುವ ನ್ಯಾಶನಲ್‌ ಜಿಯೋಗ್ರಫಿಕ್‌ ಎಕ್ಸ್‌ ಪ್ಲೋರರ್‌ ಪ್ರಶಸ್ತಿಯು (15 ಸಾವಿರ ಅಮೆರಿಕನ್‌ ಡಾಲರ್‌) ಭಾರತವನ್ನು ಪ್ರತಿನಿಧಿಸಿದ ಇಂದ್ರಪ್ರಸ್ಥ ಕಾಲೇಜಿನ ತಂಡದ ಪಾಲಾಗಿದೆ. ಜಗತ್ತಿನ ವಿವಿಧೆಡೆಗಳ ಒಟ್ಟು 20 ಗ್ಲೋಬಲ್‌ ಫೈನಲಿಸ್ಟ್‌ಗಳಲ್ಲಿ ಭಾರತದ 4 ತಂಡಗಳು ಇದ್ದವು. ನಚಿಕೇತ್ ಹಾಗೂ ಅಮನ್ ಅಪ್ರಾಪ್ತ ವಯಸ್ಕ ವಿದ್ಯಾರ್ಥಿಗಳಾಗಿದ್ದರಿಂದ ಅವರೊಂದಿಗೆ ಗಾರ್ಡಿಯನ್ ಆಗಿ ತೆರಳಲು ಹೆತ್ತವರಿಗೆ ಗೂಗಲ್ ಸಂಸ್ಥೆ ವ್ಯವಸ್ಥೆ ಕಲ್ಪಿಸಿತ್ತು. ಆದರೆ ಸಕಾಲದಲ್ಲಿ ವೀಸಾ ದೊರೆಯದ ಕಾರಣ ವಿದ್ಯಾರ್ಥಿಗಳ ಹೆತ್ತವರಿಗೆ ಅಮೆರಿಕ ಪ್ರಯಾಣ ಸಾಧ್ಯವಾಗಿರಲಿಲ್ಲ. ಈ ವೇಳೆ ನಚಿಕೇತ್ ಸಂಬಂಧಿ, ನಿವೃತ್ತ ಪೊಲೀಸ್ ಸಿಬ್ಬಂದಿ ದಿನೇಶ್ ಕುಮಾರ್ ಎಂ. ನಚಿಕೇತನ ಗಾರ್ಡಿಯನ್ ಆಗಿ ಅಮೆರಿಕಕ್ಕೆ ತೆರಳಿದ್ದರು. ಅಮನ್ ತಂದೆಯ ಸ್ನೇಹಿತ ಸಾಮ್ಯುಯೆಲ್ ಜೋಸ್ ಅಮನ್ ಗಾರ್ಡಿಯನ್ ಆಗಿ ಅಮೆರಿಕಕ್ಕೆ ತೆರಳಿದ್ದರು. ಜಾಗತಿಕ ಮಟ್ಟದಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ ಹೆಗ್ಗಳಿಕೆ ಉಪ್ಪಿನಂಗಡಿಯಂತಹ ಗ್ರಾಮೀಣ ಪ್ರದೇಶದ ವಿದ್ಯಾಲಯದ್ದಾಗಿರುವುದು ವಿಶೇಷ.

 

Offers

Want to Add your Offers, contact Naadle at 7090787344 or Email us at info@naadle.com