Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!

ತುಳುವರ ತಿಂಗಳು, ಹಬ್ಬ-ಹರಿದಿನಗಳನ್ನು ಪೋಣಿಸಿರುವ ಇಲ್ಲ್ ಒಕ್ಕೆಲ್ ಸಿನಿಮಾದ ಟೈಟಲ್ ಸಾಂಗ್ ಬಿಡುಗಡೆ..!!

tuluvara-tingalu-habba-haridinagalannu-ponisiruva-illl-okkel-cinemada-title-song-bidugade-naadle
Share This:

ತುಳುವರ ಎಲ್ಲಾ ಜಾತ್ರೆ ಹಾಗು ಇತರ ಮಹೋತ್ಸವಗಳು ಎರ್ಮಾಳ್ ನಲ್ಲಿ ಧ್ವಜ ಏರುದರಿಂದ ಪ್ರಾರಂಭವಾಗಿ ಕಂಡೆವುನಲ್ಲಿದೇವಸ್ಥಾನದ ಧ್ವಜ ಇಳಿಯುದರಿಂದ ಮುಕ್ತಯವಾಗುತ್ತದೆ ಅದಕ್ಕಾಗಿ ಎರ್ಮಾಲ್ದ ಜಪ್ಪು, ಕಂಡೆವುಡು ಅಡೆಪೂ ಇದು ತುಳುವರ ನಾಲ್ನುಡಿಯಿದೆ.  ತುಳುವರು ಆಚರಣೆ ಪ್ರಿಯರು, ಮಳೆ ಇರಲಿ ಬೇಸಿಗೆ ಇರಲಿ ಒಂದಲ್ಲ ಒಂದು ಆಚರಣೆಗಳ ಮೂಲಕ ತುಳುವ ಸಂಸ್ಕೃತಿ ರಾರಾಜಿಸುತ್ತದೆ. ನಾಗರಪಂಚಮಿ, ಹಾಳೆಯ ಮದ್ದು ಕುಡಿಯುವ ಆಟಿ ಅಮಾವಾಸ್ಯೆ, ಜನ್ಮಾಷ್ಟಮಿ, ಮೊಸರುಕುಡಿಕೆ, ತೆನೆಹಬ್ಬ, ಗಣೇಶ ಚತುರ್ಥಿ, ದಸರಾ, ದೀಪಾವಳಿ, ದಿಂಡು, ತುಳಸಿ ಪೂಜೆ, ನೇಮ,ಕೋಲ, ತಂಬಿಲ, ಕಂಬಳ, ದೀಪೋತ್ಸವ , ಷಷ್ಠಿ, ಏಳ್ ಅಮಾವಾಸ್ಯೆ(ಸಮುದ್ರ ಸಾನ್ನ), ಕೆಡ್ಡಸ ಹೀಗೆ ಬೆಳೆಯುತ್ತ ಹೋಗುತ್ತದೆ ಹಬ್ಬಗಳ ಸರಮಾಲೆ. ಮುಸ್ಲಿಮರು ಬಕ್ರೀದ್ ಮತ್ತು ರಂಜಾನ್. ಕ್ರಿಶ್ಚಿನರು ಸಂತ್ ಮರಿ, ಕ್ರಿಸ್ ಮಸ್ ಮತ್ತು ಈಸ್ಟರ್ ಗಳನ್ನೂ ಆಚರಿಸುತ್ತಾರೆ. tuluvara-tingalu-habba-haridinagalannu-ponisiruva-illl-okkel-cinemada-title-song-bidugade-naadle

Upcoming and Ongoing events

View More Events

Want to Promote your Event, contact Naadle at 7090787344 or Email us at info@naadle.com

ಇಂಗ್ಲಿಷ್ ಕ್ಯಾಲೆಂಡರ್ಗಿಂತಲೂ ಪುರಾತನವಾದ ತುಳುವರ ಸೌರ ಕ್ಯಾಲೆಂಡರ್ ಅತ್ಯಂತ ವೈಜ್ಞಾನಿಕವಾದದ್ದು ಮತ್ತು ವಿಶಿಷ್ಟವಾದದ್ದು. ಎಲ್ಲರಿಗೂ ಜನವರಿ ತಿಂಗಳು ಹೊಸವರ್ಷವಾದರೆ ತುಳುವರಿಗೆ ಏಪ್ರಿಲ್ 14 ರಂದು ಪಗ್ಗು ತಿಂಗಳಲ್ಲಿ ಬರುವ ಸೌರಯುಗಾದಿಯೇ ಹೊಸವರುಷ ಹಾಗೂ ಮಾರ್ಚ್ ನಲ್ಲಿ ಬರುವ ಸುಗ್ಗಿ ತಿಂಗಳು ವರ್ಷಾಂತ್ಯ. ಪಗ್ಗು, ಬೆಷ, ಕಾರ್ತೆಲ್, ಆಟಿ, ಸೋಣ, ಕನ್ಯಾ, ಬೊಂತೆಲ್, ಜಾರ್ದೆ, ಪೆರಾರ್ದೇ, ಪೊನ್ನಿ, ಮಯಿ, ಸುಗ್ಗಿ ಹೀಗೆ ತುಳುವರಿಗೆ ಅವರದೇ ಅದ ತಿಂಗಳುಗಳಿವೆ ಎಂದು ಹೆಚ್ಚಿನವರಿಗೆ ತಿಳಿದಿಲ್ಲ ಆದರೆ ಎಲ್ಲೊ ಎಲೆ ಮರೇ ಕಾಯಿಯಂತೆ ಹಿರಿತಲೆಮಾರಿನವರು ಈಗಲೂ ಹೇಳುತ್ತಿರುತ್ತಾರೆ. ಆದರೆ ಮುಂದಿನ ಪೀಳಿಗೆಯವರು ಇದನ್ನು ಡಿಕ್ಷನರಿಯಲ್ಲಿ ಮಾತ್ರ ನೋಡುವಂತೆಯಾಗುತ್ತದೇನೋ.tuluvara-tingalu-habba-haridinagalannu-ponisiruva-illl-okkel-cinemada-title-song-bidugade-naadleಆದರೆ ವಿಶೇಷ ಎಂಬಂತೆ ಹಬ್ಬ-ಹರಿದಿನಗಳು ತುಳುವರ ತಿಂಗಳನ್ನು ಅಚ್ಛ್ಕಟ್ಟಾಗಿ ಪೋಣಿಸಿ ಸಾಹಿತ್ಯ ಬರೆದು ಹೊಸ ಹಾಡು ಇಲ್ಲ್ ಒಕ್ಕೆಲ್ ಸಿನಿಮಾದ ಟೈಟಲ್ ಸಾಂಗ್ ಆಗಿ ಬರುತ್ತಿರುವುದು ಸ್ವಾಗತಾರ್ಹ. ಜಾನಪದ ಹಾಗು ಆಧುನಿಕ ರಾಗ ಶೈಲಿಯ ಮಿಶ್ರಣದಲ್ಲಿರುವ ಈ ಹಾಡಿಗೆ ಅಂತಾರಾಷ್ಟ್ರೀಯ ಖ್ಯಾತಿಯ ಫೋಕ್ ಫ್ಯೂಶನ್ ಸಿಂಗರ್ ರಘು ದೀಕ್ಷಿತ್ ಧ್ವನಿಯಾಗಿರುವುದು ವಿಶೇಷ. ಚಿತ್ರದ ನಿರ್ದೇಶಕ ಡಾ. ಸುರೇಶ್ ಚಿತ್ರಾಪು ಬರೆದ ಸಾಹಿತ್ಯ ಅಚ್ಚುಕಟ್ಟಾಗಿದೆ. ಮೆಂಡೋಲಿನ್ ಮತ್ತು ಆಧುನಿಕ ಸಂಗೀತ ಪರಿಕರದ ಲೈವ್ ಸಂಯೋಜನೆಯಿಂದ ಸಾಂಗ್ ಕೇಳಲು ತುಂಬ ಹಿತವಾಗಿದೆ.tuluvara-tingalu-habba-haridinagalannu-ponisiruva-illl-okkel-cinemada-title-song-bidugade-naadleಇಲ್ಲ್ ಒಕ್ಕೆಲ್ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿ ಬಿಡುಗಡೆಯ ಹಾದಿಯಲ್ಲಿದೆ. ಪಡೀಲ್, ಬೋಳಾರ್, ವಾಮಂಜೂರು, ಮಿಜಾರ್, ವಿಸ್ಮಯಿ ವಿನಾಯಕ್, ವಿಜೆ ವಿನೀತ್, ಅಧ್ವಿತಿ ಶೆಟ್ಟಿ, ರೂಪ ವರ್ಕಾಡಿ, ಚಂದ್ರಕಲಾ ಮೋಹನ್ ಹೀಗೆ ಕೋಸ್ಟಲ್ ವುಡ್ ನ ಅತಿರಥ ಮಹಾರಥ ಕಲಾವಿದರ ದಂಡೇ ಈ ಚಿತ್ರದಲ್ಲಿದೆ. ಗ್ರಹಪ್ರವೇಶವಾಗುವ ಸಂದರ್ಭದಲ್ಲಿ ಆಗುವ ಹಾಸ್ಯ ಸನ್ನಿವೇಶಗಳನ್ನು ವಸ್ತು ವಿಷಯವಾಗಿಟ್ಟುಕೊಂಡು ಹೆಣೆದ ಕಥೆ ಹೊಸತನದೊಂದಿಗೆ ಮೂಡಿಬಂದ ಈ ಚಿತ್ರ ತುಳುಚಿತ್ರರಂಗದಲ್ಲಿ ಹೊಸತನಕ್ಕೆ ನಾಂದಿಯಾಗಬಹುದು. ಹಾಸ್ಯ ಚಿತ್ರದಲ್ಲಿ ತುಳು ಸಂಸ್ಕೃತಿಯನ್ನು ಹೇಳುವ ಪ್ರಯತ್ನ ಮಾಡಿರುವುದು ಶ್ಲಾಘನೀಯವಾದದ್ದು. ಆದಷ್ಟು ಬೇಗ ಸಿನಿಮಾ ತೆರೆಗೆ ಅಪ್ಪಳಿಸಿ ಯಶಸ್ವಿಯಾಗಲಿ.tuluvara-tingalu-habba-haridinagalannu-ponisiruva-illl-okkel-cinemada-title-song-bidugade-naadleಈ ಹಾಡು ಜೂನ್ ೧೬ರಂದು ಬೆಂಗಳೂರು ಯುವವಾಹಿನಿ ಘಟಕದ ಬಾಂದವ್ಯ ಕಾರ್ಯಕ್ರಮದಲ್ಲಿ ಬಿಡುಗಡೆಯಾಗಿದ್ದು. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿಯೂ ಬಿಡುಗಡೆಯಾಗಿದೆ.

 

Offers

Want to Add your Offers, contact Naadle at 7090787344 or Email us at info@naadle.com