ತುಳುನಾಡಲ್ಲಿ ಆಟಿ ಅಮಾವಾಸ್ಯೆ ಆಚರಣೆ..!!

tulunadinalli-aati-amavashye-celebration-naadle
Share This:

ಆಟಿ ತಿಂಗಳು ಎಂದಾಕ್ಷಣ ಯಾವುದೇ ಶುಭ ಸಮಾರಂಭಗಳು ನಡೆಯುವುದಿಲ್ಲ ಎಂಬ ವಾಡಿಕೆ ಇದೆ. ತುಳುನಾಡಿನ ಜಾನಪದ ಸಾಂಸ್ಕೃತಿಕ ಆಚರಣೆಗಳಲ್ಲಿ ಆಟಿ (ಆಷಾಢ) ತಿಂಗಳಿಗೆ ವಿಶಿಷ್ಟ ರೀತಿಯ ಮಾನ್ಯತೆ ಇದೆ. ಆಟಿ ಕಷಾಯಕ್ಕೂ ಅಗ್ರ ಸ್ಥಾನ ದೊರೆತಿದೆ. ಹಿಂದಿನ ಕಾಲದಲ್ಲಿ ಆಟಿ ತಿಂಗಳಿನಲ್ಲಿ ವಿಪರೀತ ಮಳೆ. ಮಳೆಗಾಲದ ಈ ತಿಂಗಳು ಒಂದು ಹೊತ್ತಿನ ಊಟಕ್ಕೂ ಕಷ್ಟವಿತ್ತಂತೆ. ಮಳೆಯಿಂದಾಗಿ ಶರೀರದಲ್ಲಿ ಕಫ ವೃದ್ಧಿಸಿ ಆರೋಗ್ಯ ಕುಂಠಿತವಾಗುತ್ತದೆ. ಅಪೌಷ್ಟಿಕತೆಯಿಂದ ರೋಗಗಳೂ ಹೆಚ್ಚು. ಆದ್ದರಿಂದ ಈ ಮಾಸದಲ್ಲಿ ಆಟಿ ಕಳಂಜ ದೈವವು ಅಮಾವಾಸ್ಯೆಯಂದು ಅನೇಕ ಬಗೆಯ ಔಷಧೀಯ ಗುಣಗಳನ್ನು ತಂದು ಮರದಲ್ಲಿರಿಸುತ್ತದೆ. ಯಾರು ತೊಗಟೆಯ ರಸವನ್ನು ನಂಬಿಕೆಯಿಂದ ಸೇವಿಸುತ್ತಾರೆಯೋ ಅವರು ವರ್ಷಪೂರ್ತಿ ಆರೋಗ್ಯವಾಗಿರುತ್ತಾರೆ ಎಂಬ ನಂಬಿಕೆಯೂ ಬಲವಾಗಿದೆ.tulunadinalli-aati-amavashye-celebration-naadle

Upcoming and Ongoing events

View More Events

Want to Promote your Event, contact Naadle at 9035030300 or Email us at info@naadle.com

ಹಾಲೆ ಮರದ ತೊಗಟೆಯನ್ನು ತೆಗೆದು ಅದನ್ನು ಜಜ್ಜಿ ಕಷಾಯ ತಯಾರಿಸಲಾಗುತ್ತದೆ. ಕಹಿಯಾದ ಈ ಕಷಾಯ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂಬುದು ಜನರ ನಂಬಿಕೆ. ವೈದ್ಯರು ಸಹ ಇದನ್ನು ಒಪ್ಪುತ್ತಾರೆ. ಹಾಲೆ ಮರದ ಎಲೆಯು ಸಾಮಾನ್ಯವಾಗಿ ದಪ್ಪವಾಗಿದ್ದು ಒಂದು ಗೊಂಚಲಿನಲ್ಲಿ 7 ರಿಂದ 9 ಪತ್ರಗಳಿರುತ್ತವೆ. ಎಲೆಗಳ ಅಗಲ ಒಂದರಿಂದ ಎರಡು ಇಂಚು ಇದ್ದು, ಉದ್ದ 6 ರಿಂದ 12ಇಂಚು ಇರುತ್ತದೆ.ಬೆಳ್ಳಂಬೆಳಗ್ಗೆ ಅಂದರೆ ಸೂರ‌್ಯೋದಯಕ್ಕೆ ಮೊದಲೇ ಒಂದು ಚೂಪಾದ ಕಲ್ಲಿನಿಂದ ಮರದ ತೊಗಟೆಯನ್ನು ತೆಗೆದು ಯಾವುದೇ ರೀತಿಯ ಕಬ್ಬಿಣದ ವಸ್ತುವನ್ನು ತಾಗಿಸದೆ ಮನೆಗೆ ತರಬೇಕು. ಮನೆಯಲ್ಲಿ ತೊಗಟೆಯನ್ನು ಚೆನ್ನಾಗಿ ಗುದ್ದಿ ರಸ ತೆಗೆಯಬೇಕು, ಜೀರಿಗೆ, ಬೆಳ್ಳುಳ್ಳಿ ಮತ್ತು ಕಾಳುಮೆಣಸನ್ನು ಕಷಾಯಕ್ಕೆ ಸೇರಿಸಲಾಗುತ್ತದೆ ನಂತರ ಬೊಳ್ಳುಕಲ್ಲನ್ನು (ಬಿಳಿಕಲ್ಲು) ಬೆಂಕಿಯಲ್ಲಿ ಕಾಯಿಸಿ ಚೆನ್ನಾಗಿ ಕಾದ ಮೇಲೆ ಕಷಾಯಕ್ಕೆ ಮುಳುಗಿಸಿ ತೆಗೆಯಬೇಕು. ಈ ಪ್ರಕ್ರಿಯೆಗೆ ತುಳುವಿನಲ್ಲಿ ಅಡ್ಡದೀಪಿನಿ ಎಂದು ಹೇಳಲಾಗುತ್ತದೆ. ಈ ಕಷಾಯವನ್ನು ಕುಡಿಯುವುದರಿಂದ ಶೀತ ವಾತಾವಾರಣವನ್ನು ತಡೆದುಕೊಳ್ಳುವ ಶಕ್ತಿ ಬರುತ್ತದೆ ಹುಳ ಬಾಧೆಯಿಂದ ಜೀರ್ಣಾಂಗವ್ಯೂಹವನ್ನು ಶುದ್ಧಗೊಳಿಸುತ್ತದೆ. ಈ ಕಷಾಯದ ಔಷಧೀಯ ಉಪಯೋಗದಿಂದ ಇದು ಜಾನಪದ ಔಷಧಿಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

 

Offers

Want to Add your Offers, contact Naadle at 9035030300 or Email us at info@naadle.com