ತುಳುನಾಡಿನ ಸತ್ಯದ ಹೆಣ್ಣುಮಗಳು ಸಿರಿ, ಸಂಪೂರ್ಣ ಕಥೆ: ಭಾಗ-3..!!

tulunadina-sathyada-hennumagalu-siri-sapoorna-kathe-bhaga-3-naadle
Share This:

ಗರ್ಭಿಣಿ ಸಿರಿಯು ಗಂಡನ ಮನೆಯಿಂದ ಸೀಮಂತದ ದಿನ ತನ್ನ ತಂದೆಯ ಮನೆ ಸತ್ಯನಾಪುರಕ್ಕೆ ಬರುತ್ತಾಳೆ, ಅಲ್ಲಿ ಗಂಡು ಮಗುವಿಗೆ ಜನ್ಮ ನೀಡುತ್ತಾಳೆ. ಆದರೆ ಗಂಡ ಕಾಂತು ಪೂಂಜ ತನಗೆ ಸೀಮಂತದ ದಿನ ಸಿರಿ ಮಾಡಿದ ಅವಮಾನಕ್ಕೆ ಪ್ರತೀಕಾರವಾಗಿ ಮಗುವನ್ನು ನೋಡಲು ಹೋಗುವುದಿಲ್ಲ, ಸಿರಿಯ ತಂದೆ ಸತ್ತಾಗಲೂ ಅವಳ ದುಃಖಕ್ಕೆ ಸ್ಪಂದಿಸುದಿಲ್ಲ ಅವಳ ಸಹಾಯಕ್ಕೆ ಯಾರು ಬರದಂತೆ ಮಾಡುತ್ತಾನೆ ಮತ್ತು ತನ್ನ ಗಂಡ ಕೊಡುತ್ತಿದ್ದ ಚಿತ್ರಹಿಂಸೆ ಇದರಿಂದ ಕಂಗೆಟ್ಟ ಸಿರಿ ತನಗೆ ವಿಚ್ಛೇದನೆ ಬೇಕೆಂದು ಕೇಳುತ್ತಾಳೆ, ಇದಕ್ಕೆ ಪತಿ ಒಂದು ಷರತ್ತು ಹೇಳಿ ಇದನ್ನು ನೀನು ಪೂರೈಸಿದರೆ ನಿನಿಗೆ ಅದೇ ವಿಚ್ಛೇದನೆ ಎನ್ನುತ್ತಾನೆ..

ಇಲ್ಲಿಯವರೆಗೆ…

ಮಾಯಶಕ್ತಿಯಿಂದ ಮಾಬುಕಳ ಹೊಳೆ ದಾಟಿದ ನಂತರ ಸಿರಿಗೆ ಇಬ್ಬರುಅಣ್ಣ-ತಮ್ಮಂದಿರಾದ ‘ಬಿಳಿದೇಸಿಂಗರಾಯ ಮತ್ತು ಕರಿಕಾಮರಾಯ’ ಎಂಬವರು ಸಿಗುತ್ತಾರೆ. ತಮ್ಮ ಅರಮನೆಗೆ ಕರೆಯುತ್ತಾರೆ ಸಿರಿಯು ಒಪ್ಪಿಗೆ ಸೂಚಿಸಿ ತನ್ನನ್ನು ಎಲ್ಲರ ಸಮ್ಮುಖದಲ್ಲಿ ನಿಮ್ಮ ತಂಗಿಯಂತೆ ಸ್ವೀಕರಿಸಬೇಕು ಎನ್ನುತ್ತಾಳೆ. ಆಗ ಸಿರಿಯ ಜೊತೆಯಿದ್ದ ದಾರು ನನ್ನನ್ನು ಮಾಯ ಮಾಡಿ ನಾನು ನಿಮ್ಮ ಜೊತೆ ಆ ಅರಮನೆಗೆ ಬರಲಾರೆ ಎಂದು ಹೇಳುತ್ತಾಳೆ ಆಗ ಸಿರಿ ನಿನ್ನಾಸೆಯಂತೆ ನೀನು ಈ ಲೋಕಬಿಟ್ಟು ಮಾಯಾಲೋಕ ಸೇರಿಕೋ ಎಂದು ಮಾಯಾ ಮಾಡುತ್ತಾಳೆ. ಕೊಟ್ಟ ಮಾತಿನಂತೆ ಊರಿನವರ ಸಮ್ಮುಖದಲ್ಲಿ ಸಿರಿಯನ್ನು ತಮ್ಮ ತಂಗಿಯಾಗಿ ಸ್ವೀಕರಿಸುತ್ತಾರೆ. ಹೀಗೆ ತನ್ನ ಅಣ್ಣಂದಿರೊಂದಿಗೆ ಜೀವನ ಮಾಡುತ್ತಿದ್ದ ಸಿರಿಯ ಸೊಬಗು–ಸೌಂದರ್ಯವನ್ನು ಕಂಡು ಕೊಟ್ರಾಡಿಗುತ್ತಿನ ‘ಕೊಡ್ಸರ ಆಳ್ವನೆಂಬ’ ರಾಜ ಮಾರು ಹೋಗುತ್ತಾನೆ. ಈ ವಿಚಾರವನ್ನು ಸಿರಿಯ ಸೋದರರಲ್ಲಿ ಹೇಳುತ್ತಾನೆ. ಹೀಗೆ ಸಿರಿಯ ಸೋದರರು ಈ ವಿಚಾರವಾಗಿ ಸಿರಿಯನ್ನು ಒಪ್ಪಿಸಿ ಕೊಡ್ಸರ ಆಳ್ವನಿಗೆ ಮದುವೆ ಮಾಡುತ್ತಾರೆ. ಮುಂದೆ ಸಿರಿಯು ‘ಕೊಡ್ಸರ ಆಳ್ವನಿಂದ’ ಒಂದು ಹೆಣ್ಣು ಮಗುವನ್ನು ಪಡೆಯುತ್ತಾಳೆ. ಅವಳಿಗೆ ‘ಸೊನ್ನೆ’ ಎಂಬ ನಾಮಕರಣ ಮಾಡುತ್ತಾರೆ. ಸಿರಿಯು ಹೆಣ್ಣು ಮಗುವಿಗೆ ಜನ್ಮ ನೀಡಿದ ಬಳಿಕ ತಾನು ಆ ಮಗುವನ್ನು ಕೊಡ್ಸರ ಆಳ್ವನ ಮೊದಲನೆಯ ಹೆಂಡತಿ ಶಾಮು ಕೈಗೆ ಮಗುವನ್ನು ಕೊಟ್ಟು ತಾನು ಮಾಯಾ ಲೋಕವನ್ನು ಸೇರುತ್ತಾಳೆ.

Upcoming and Ongoing events

View More Events

Want to Promote your Event, contact Naadle at 9035030300 or Email us at info@naadle.com


ಸೊನ್ನೆಯು ತನ್ನ ಬಾಲ್ಯವನ್ನು ನಂದಳಿಕೆಯಲ್ಲಿ ಕಳೆಯುತ್ತಾಳೆ. ಮುಂದೆ ಸೊನ್ನೆಗೆ ವಿವಾಹವನ್ನು ಮಾಡಲಾಗಿ ಅವಳಿಗೆ ಇಬ್ಬರು ಅವಳಿ ಕುವರಿಯರು ಜನಿಸುತ್ತಾರೆ. ಅವರಿಗೆ ‘ಅಬ್ಬಗ-ದಾರಗ’ ಎಂದು ನಾಮಕರಣ ಮಾಡುತ್ತಾರೆ. ಈ ಅವಳಿ ಕುವರಿಯರು ಶ್ರೀಉರಿಬ್ರಹ್ಮದೇವರ ಹರಕೆಯಿಂದ ದೈವಿಸಂಭೂತರಾಗಿ ಜನಿಸಿದವರಾಗಿರುತ್ತಾರೆ. ಮುಂದೆ ಈ ಅವಳಿ ಕುವರಿಯರು ಬೆಳೆದು ಬಂದಾಗೆ ಅವರಿಗೆ ‘ರಾಮ-ಲಕ್ಷ್ಮಣ’ ರೆಂಬ ಅವಳಿ ಕುವರರ ಜೊತೆ ಮದುವೆಮಾಡಲು ನಿಶ್ಚಯಿಸುತ್ತಾರೆ. ಆದರೆ ಈ ವೇಳೆಗಾಗಲೆ ಸೊನ್ನೆ ತನ್ನ ಹರಕೆಯನ್ನು ಮರೆತು ಬಿಡುತ್ತಾಳೆ. ಒಂದು ದಿನ ಶ್ರೀಉರಿಬ್ರಹ್ಮದೇವರ ಸಂಕಲ್ಪದಂತೆ ‘ಅಬ್ಬಗ-ದಾರಗ’ ಚನ್ನೆ-ಮಣೆ ಆಟದಲ್ಲಿ ಮರುಳಾಗಿ ಅದರಿಂದಲೆ ಇಬ್ಬರು ಹೊಡೆದಾಡಿಕೊಂಡು ದಾರುಣ ದುರಾಂತ್ಯವನ್ನು ಕಾಣುತ್ತಾರೆ. ಹೀಗೆ ಇವರ ಅಂತ್ಯದೊಂದಿಗೆ ಇವರಿಬ್ಬರು ದೈವತ್ವಕ್ಕೇರುತ್ತಾರೆ. ತನ್ನ ಕುವರಿಯರ ಮರಣದವಾರ್ತೆಯನ್ನು ತಿಳಿದ ಸೊನ್ನೆಯು ತಾನೂ ಕೂಡಾ ತನ್ನ ತಾಯಿ ಸಿರಿಯನ್ನು ನೆನೆದು ಮಾಯಾಲೋಕ ಸೇರುತ್ತಾಳೆ. ಮುಂದೆ ಸೊನ್ನೆಯ ಮಕ್ಕಳಾದ ಇವರೇಮುಂದೆ ‘ಅಬ್ಬಗ-ದಾರಗೇಶ್ವರಿ’ ಎಂಬ ದೈವಗಳಾಗಿ ಮೆರೆಯುತ್ತಾರೆ. ಈ ಕುವರಿಯರು ತನ್ನ ಅಜ್ಜಿ ಸಿರಿಯೊಂದಿಗೆ ಮಾಯಾಲೋಕ ಸೇರಿದೊಡನೆ ಅಲ್ಲಿ ಸಿರಿಗಳ ಲೋಕ ನಿರ್ಮಾಣವಾಗುತ್ತದೆ.

ಹಿಂದೆ ಈ ಅವಳಿ ಕುವರಿಯ ಅಜ್ಜಿ ಸಿರಿಯು ನಂದಳಿಕೆಯ ಮಹಾಲಿಂಗೇಶ್ವರದೇವರಲ್ಲಿ ಮುಂದೆ ನನ್ನ ಮೊಮ್ಮಕ್ಕಳು ನಿಮ್ಮ ಸಾನಿಧ್ಯಕ್ಕೆ ಬಂದಾಗ ಅವರಿಗೆ ಇಲ್ಲಿ ಆಶ್ರಯ ನೀಡಬೇಕೆಂದು ಕೇಳಿರುತ್ತಾಳೆ. ಅದೇ ರೀತಿಯಲ್ಲಿ ಈ ಕುವರಿಯರು ಮಾಯಾಲೋಕವನ್ನು ಸೇರಿದ ಬಳಿಕ ಕೆಲವೊಂದು ಮಹೋನ್ನತ ಶಕ್ತಿಯ ಉದಯವಾಗುತ್ತದೆ. ಹೀಗೆ ಸಿರಿಯಿಂದ ಆರಂಭಗೊಂಡು ಅವಳ ಮಗಳು, ಮೊಮ್ಮಕ್ಕಳು ಮತ್ತು ಸೇವಕಿಯರನ್ನೊಳಗೊಂಡ ಏಳು ಜನರು ಮಾಯಾಲೋಕದಲ್ಲಿ ಐಕ್ಯವಾಗಿ ಅಲ್ಲಿ ‘ಸಪ್ತಸಿರಿಗಳ’ ಶಕ್ತಿ ಆವರ್ಭವಿಸುತ್ತದೆ. ಈ ಸಪ್ತಸಿರಿಗಳು ಮುಂದೆ ತುಳುವನಾಡಿನ ಕಾರಣೀಕ ‘ಸಪ್ತಮಾತೃಕೇಯ’ ರಾಗುತ್ತಾರೆ. ಅವರುಗಳೆಂದರೆ ಸಿರಿ, ದಾರು, ಸೊನ್ನೆ, ಗಿಂಡೆ, ಸಾಮು ಮತ್ತು ಅಬ್ಬಗ-ದಾರಗ. ಈ ಏಳು ಜನರೆ “ಸಪ್ತಸಿರಿಗಳು.” ಅಂತೆ ಸಪ್ತ ಮಾತೃಕೆಯರೊಂದಿಗೆ ಒಬ್ಬ ‘ಕುಮಾರ’ ನು ಇರುತ್ತಾನೆ.

ಮುಂದುವರೆಯುತ್ತದೆ….

naadle If you like this article, click on the button below

Offers

Want to Add your Offers, contact Naadle at 9035030300 or Email us at info@naadle.com