ತುಳುನಾಡ್ದ ಆಟಿ ತಿಂಗೊಳ್ದ ತಿನಸ್ದ ಕಮ್ಮೆನ..!!

tulunadda aati tingolda tinasda kammena-naadle
Share This:

ಜಾನಪದ ವೈಶಿಷ್ಟ್ಯಗಳಿಂದಲೇ ವಿಭಿನ್ನವಾಗಿ ಗುರುತಿಸಿಕೊಂಡಿರುವ ತುಳುನಾಡಿನಲ್ಲಿ ಅಷಾಢಮಾಸ ಆರಂಭವಾಗಿದೆ. ಅತ್ಯಂತ ವಿಭಿನ್ನ ಸಂಸ್ಕೃತಿ , ಸಂಪ್ರದಾಯಗಳನ್ನು ಹೊಂದಿರುವಂತಹ ತುಳುನಾಡಿನಲ್ಲಿ ಆಟಿ ತಿಂಗಳು ಅಥವಾ ಆಷಾಢ ತಿಂಗಳ ಆಚರಣೆಗೆ ವಿಶಿಷ್ಟ ಮಹತ್ವವಿದೆ. ಆಟಿ ತಿಂಗಳ ತುಳುವರ ತಿನಿಸುಗಳು ಮಾತ್ರ ಎಲ್ಲದಕ್ಕಿಂತಲೂ ಭಿನ್ನ. ಧೋ ಎಂದು ಸುರಿಯುವ ಮಳೆಯ ನಡುವೆ ಚುಮು ಚುಮು ಚಳಿಯಲ್ಲಿ ತುಳುನಾಡಿನ ಪ್ರತಿ ಮನೆಯ ಅಡುಗೆ ಕೋಣೆಯಿಂದ ವಿಶಿಷ್ಟ ತಿನಿಸುಗಳ ಘಮ ಘಮ ಪರಿಮಳ ಪರಿಸರದ ಎಲ್ಲೆಡೆ ಪಸರಿಸುತ್ತದೆ.tulunadda aati tingolda tinasda kammena-naadle

Upcoming and Ongoing events

View More Events

Want to Promote your Event, contact Naadle at 9035030300 or Email us at info@naadle.com


ಮಳೆಗಾಲದಲ್ಲಿ ಬರುವ ಈ ಆಟಿ ತಿಂಗಳಲ್ಲಿ ಆಹಾರ, ಧಾನ್ಯ ದಾಸ್ತಾನುಗಳು ಬೇಗನೇ ಮುಗಿದು, ಆಹಾರದ ಕೊರತೆ ಎದುರಾಗುತ್ತದೆ. ಈ ಹಿನ್ನಲೆಯಲ್ಲಿ ತುಳುನಾಡಿನ ಜನ ಆಟಿಯಲ್ಲಿ ಪ್ರಕೃತಿಯ ಮೊರೆ ಹೋಗಿ, ಅಲ್ಲಿ ಸಿಗುವಂತಹ ಸಸ್ಯ ಚಿಗುರು, ಗಡ್ಡೆ ಗೆಣಸು, ಫಲವಸ್ತುಗಳನ್ನು ಉಪಯೋಗಿಸಿ ಬಗೆ ಬಗೆಯ ತಿನಿಸುಗಳನ್ನು ತಯಾರಿಸಿ ಸೇವಿಸುವುದು ಸಂಪ್ರದಾಯವಾಗಿದೆ.
tulunadda aati tingolda tinasda kammena-naadle
ಮಳೆಗಾಲದಲ್ಲಿಯೇ ಬರುವ ಆಟಿ ತಿಂಗಳಿಗಾಗಿ ತಯಾರಿಸಿದ ಹಪ್ಪಳ , ಸಾಂತಣಿ , ಹಲಸಿನ ಬೀಜ , ಮಾವಿನಕಾಯಿಯನ್ನು ಉಪ್ಪು ನೀರಿನಲ್ಲಿ ನೆನೆಸಿಟ್ಟು ಶೇಖರಿಸಿದ ‘ಉಪ್ಪಡಚ್ಚಿಲ್’, ನೀರಲ್ಲಿ ಹಾಕಿದ ಕುಕ್ಕು, ಮತ್ತು ಇತರ ತಿನಿಸುಗಳನ್ನು ತಯಾರಿಸಿ ಇಡಲಾಗುತ್ತದೆ. ತುಳುನಾಡಿನ ಗ್ರಾಮೀಣ ಪ್ರದೇಶದಲ್ಲಿ ಈ ತಿನಿಸುಗಳನ್ನು ಆಟಿ ತಿಂಗಳಲ್ಲಿ ಬಳಸಲು ಆರಂಭಿಸಲಾಗುತ್ತದೆ. ಅರಿಶಿನ ಎಲೆಯಲ್ಲಿ ತಯಾರಾದ ತಿಂಡಿ, ಹಪ್ಪಳ, ಕಡ್ಲೆ ಬೇಳೆ ಪಾಯಸ, ಎಳೆ ಬಿದಿರಿನ ಉಪ್ಪಿನಕಾಯಿ, ತಜಂಕ್ ಪಲ್ಯ, ಈ ಆಟಿ ತಿಂಗಳಲ್ಲಿ ತಯಾರಾಗುವ ವಿಶೇಷ ತಿನಿಸುಗಳು. ಆಟಿ ತಿಂಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕೃಷಿ ಕಾರ್ಯಗಳಿಗೆ ತೆರಳುವ ಮೊದಲು ತೆಂಗಿನ ಕಾಯಿ ಅಥವಾ ತಾರಾಯಿದ ಗಂಜಿ, ಕಾಯಿ ಹಾಲಿನ ಗಂಜಿ ಸೇವಿಸಿತೆರಳುವ ಪದ್ಧತಿ ಇಂದಿಗೂ ಇದೆ. ಮೋಡೆ, ಅರಸಿನ ಎಲೆಯ ಕಡುಬು, ಹಲಸಿನ ಕಡುಬು , ಪತ್ರೋಡೆ, ಕೆಸುವಿನ ಚಟ್ನಿ, ತಿಮರೆದ ಚಟ್ನಿ, ಮಾವಿನಕಾಯಿ ಚಟ್ನಿ, ಹುರುಳಿಸಾರು, ಚಿಲಿಂಬಿದ ಅಡ್ಡೆ, ಸೌತೆ ಪದಂಗಿ ಗಸಿ, ತಜಂಕ್ ವಡೆ, ಪಚ್ಚಿರ್ ಪಲ್ಯ, ಹಲಸಿನ ಮುಳ್ಕು, ಕಣಿಲೆ ಕಡ್ಲೆ, ತೇವು ಪದಪೆ ಗಸಿ, ಪಜಕಾಯಿ ಚಟ್ನಿ, ಮಾವಿನ ಹಣ್ಣಿನ ಮೆನಸ್ ಕಾಯಿಯ ರುಚಿ ಈ ಆಟಿ ತಿಂಗಳಲ್ಲಿ ಮಾತ್ರ ನೋಡಬಹುದಾಗಿದೆ.
naadle If you like this article, click on the button below

Offers

Want to Add your Offers, contact Naadle at 9035030300 or Email us at info@naadle.com