Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!

ತುಳುಚಿತ್ರರಂಗದಲ್ಲಿ ಗಿರಿಗಿಟ್ ತಿರುಗುತ್ತಿರುವ ರಭಸಕ್ಕೆ, ಒಂದೇ ವಾರದಲ್ಲಿ ಒಂದು ಕೋಟಿ ಕ್ಲಬ್ ಸೇರಿದ ಕೋಸ್ಟಲ್ ವುಡ್ ನ ಪ್ರಥಮ ಚಿತ್ರ..!!

Share This:

ಕೋಸ್ಟಲ್ ವುಡ್ ನಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿದ ಗಿರಿಗಿಟ್ ಸಿನಿಮಾ.
ಬಿಡುಗಡೆಗೊಂಡ ಒಂದೇ ವಾರದಲ್ಲಿ ಒಂದು ಕೋಟಿ ಕಲೆಕ್ಷನ್ ಮಾಡಿದ ಕೋಸ್ಟಲ್ ವುಡ್ ನ ಮೊದಲ ತುಳು ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. “ಗಿರಿಗಿಟ್‌’ ಕೋಸ್ಟಲ್‌ವುಡ್‌ನ‌ಲ್ಲಿ ಹೊಸ ಅಧ್ಯಾಯವನ್ನೇ ಬರೆದಿದೆ. ದೇಶ-ವಿದೇಶದಲ್ಲಿಯೂ ಉತ್ತಮ ಸ್ಪಂದನೆ ಸಿಗುತಿದ್ದು. ಒಂದೇ ದಿನದಲ್ಲಿ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 95 ಕ್ಕೂ ಅಧಿಕ ಪ್ರದರ್ಶನಗೊಂಡು ದಾಖಲೆ ನಿರ್ಮಿಸಿದ್ದು, ಒಂದು ಒಳ್ಳೆಯ ಚಿತ್ರ ತೆರೆಕಂಡರೆ ಅದನ್ನು ಅಭಿಮಾನಿಗಳು ಎಂದೂ ಕೈ ಬಿಡುವುದಿಲ್ಲ ಅನ್ನೋ ಮಾತಿಗೆ ಗಿರಿಗಿಟ್ ಸಾಕ್ಷಿಯಾಗಿದ್ದು, ಕರಾವಳಿಯ ಜನರು ಈ ಚಿತ್ರಕ್ಕೆ ಉತ್ತಮ ರೀತಿಯಲ್ಲಿ ಪ್ರೋತ್ಸಾಹಿಸಿದ್ದಾರೆ .tuluchitrarangadaali girigit thirguttiruva rabhasakke onde vaaradalli ondu koti club serida coastal wood na prathama chitra-naadle

Upcoming and Ongoing events

View More Events

Want to Promote your Event, contact Naadle at 7090787344 or Email us at info@naadle.com

ಕರ್ನಾಟಕದ ಬಹುದೊಡ್ಡ ಸಿನೆಮಾ ವಿತರಕ ಸಂಸ್ಥೆ “ಜಯಣ್ಣ ಫಿಲಂಸ್‌’ ಗಿರಿಗಿಟ್‌ ಸಿನೆಮಾವನ್ನು ಬೆಂಗಳೂರಿನಲ್ಲಿ ರಿಲೀಸ್‌ ಮಾಡಿದ್ದು ವಿಶೇಷ. ಕುಡ್ಲದ ಗಿರಿಗಿಟ್‌ ಹವಾ ಮೊದಲೇ ತಿಳಿದುಕೊಂಡಿದ್ದ ಜಯಣ್ಣ ಫಿಲಂಸ್‌ ಬೆಂಗಳೂರಿನಲ್ಲಿ ಶೋ ನಡೆಸಲು ಮುಂದೆ ಬಂದಿದ್ದಾರೆ. ಬೆಂಗಳೂರಿನಲ್ಲಿಯೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು, ಕನ್ನಡ ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತಿದೆ. ನಟ, ನಿರ್ದೇಶಕ ರೂಪೇಶ್ ಶೆಟ್ಟಿ, ರಾಕೇಶ್ ಕದ್ರಿ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರ ಜನರನ್ನು ಮನರಂಜಿಸುವಲ್ಲಿ ಯಶಸ್ವಿಯಾಗಿದೆ. ಧಾರಾವಾಹಿ ನಟಿ, ಶಿಲ್ಪಾ ಶೆಟ್ಟಿ ಅವರು ಈ ಚಿತ್ರದಲ್ಲಿ ರೂಪೇಶ್‌ ಗೆ ಜೋಡಿಯಾಗಿದ್ದು, ಈ ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆ ರೂಪೇಶ್‌ ಶೆಟ್ಟಿ ಅವರೇ ಬರೆದಿದ್ದಾರೆ. ಉಳಿದಂತೆ ಈ ಚಿತ್ರದಲ್ಲಿ ಕೋಸ್ಟಲ್ ವುಡ್ ನ ದಿಗ್ಗಜರಾದ ನವೀನ್ ಡಿ ಪಡೀಲ್, ಅರವಿಂದ್ ಬೋಳಾರ್, ಭೋಜರಾಜ ವಾಮಂಜೂರು, ಪ್ರಸನ್ನ ಶೆಟ್ಟಿ ಬೈಲೂರು, ಉಮೇಶ್‌ ಮಿಜಾರ್‌, ಸಂದೀಪ್‌ ಶೆಟ್ಟಿ ಮಾಣಿಬೆಟ್ಟು ಮುಂತಾದ ಕಲಾವಿದರು ಈ ಚಿತ್ರದಲ್ಲಿದ್ದಾರೆ.

Offers

Want to Add your Offers, contact Naadle at 7090787344 or Email us at info@naadle.com