Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!

ತುಳುಚಿತ್ರರಂಗದಲ್ಲಿ ಹೊಸ ನಿರೀಕ್ಷೆ..!!

tuluchirarangadalli-hosa-nirikshe-naadle
Share This:

ಇತ್ತೀಚಿನ ದಿನಗಳಲ್ಲಿ ಕೋಸ್ಟಲ್ ವುಡ್ ನಲ್ಲಿ ಬಿಡುಗಡೆಯಾದ ಯಾವುದೇ ಸಿನೆಮಾಗಳು ನಿರೀಕ್ಷಿತ ಮಟ್ಟದಲ್ಲಿ ಪ್ರೇಕ್ಷಕರ ಮನಸ್ಸು ತಲುಪುತ್ತಿರಲಿಲ್ಲ, ಇದರಿಂದ ತುಂಬಾ ನಿಧಾನಗತಿಯಲ್ಲಿ ತುಳುಚಿತ್ರರಂಗ ಸಾಗುತ್ತಿತ್ತು, ದಿನದಿಂದ ದಿನಕ್ಕೆ ಚಿತ್ರಮಂದಿರದತ್ತ ಬರುವ ಸಿನಿಪ್ರಿಯರ ಸಂಖ್ಯೆ ಕಡಿಮೆಯಾಗಿತ್ತಲೇ ಇತ್ತು. ಆದರೆ ಒಂದೊಳ್ಳೆ ಸಿನೆಮಾ ಮಾಡಿದರೆ ಪ್ರೇಕ್ಷಕರು ಖಂಡಿತಾ ಕೈ ಬಿಡುವುದಿಲ್ಲ ಎಂಬುದಕ್ಕೆ ಇತ್ತೀಚೆಗೆ ಬಿಡುಗಡೆಯಾದ ಗಿರಿಗಿಟ್ ಚಿತ್ರವೇ ಸಾಕ್ಷಿ. ಮಲಗಿದ್ದ ತುಳುಚಿತ್ರರಂಗವನ್ನು ಎಬ್ಬಿಸಿ, ಪ್ರೇಕ್ಷಕರನ್ನು ಥಿಯೇಟರ್ ನ ಕಡೆಗೆ ಬರುವಂತೆ ಮಾಡಿದ ಕೀರ್ತಿ ಗಿರಿಗಿಟ್ ಚಿತ್ರತಂಡಕ್ಕೆ ಸಲ್ಲುತ್ತದೆ.
ಕೋಸ್ಟಲ್‌ವುಡ್‌ನ‌ಲ್ಲಿ ಗಿರಿಗಿಟ್‌ ಮೂಡಿಸಿದ ಹವಾ ತುಳುನಾಡಿನ ಚಿತ್ರಲೋಕದಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ. ತುಳುನಾಡಿನ ಮನೆಮಂದಿಯೆಲ್ಲ ಸಿನೆಮಾ ನೋಡುವಂತೆ ಮಾಡಿದ ಗಿರಿಗಿಟ್‌ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಸುದೀಪ್ ಅಭಿನಯದ ಪೈಲ್ವಾನ್ ಚಿತ್ರ ಬಿಡುಗಡೆಯಾಗಿದ್ದರು ಗಿರಿಗಿಟ್ ಮಾತ್ರ ತನ್ನದೇ ಚಾರ್ಮ್ ನಲ್ಲಿ ಕರಾವಳಿ- ಬೆಂಗಳೂರು ಮತ್ತು ವಿದೇಶದಲ್ಲಿಯು ಉತ್ತಮ ಪ್ರದರ್ಶನ ಕಾಣುತ್ತಿದೆ. ಅಷ್ಟು ಮಾತ್ರವಲ್ಲದೆ ಇತರ ಚಿತ್ರರಂಗವನ್ನು ಕೋಸ್ಟಲ್ ವುಡ್ ಕಡೆಗೆ ನೋಡುವಂತೆ ಮಾಡಿದೆ.

Upcoming and Ongoing events

View More Events

Want to Promote your Event, contact Naadle at 7090787344 or Email us at info@naadle.com

ತುಳುಚಿತ್ರರಂಗದಲ್ಲಿ ಹೊಸ ಅಲೆಯನ್ನು ಗಿರಿಗಿಟ್ ಚಿತ್ರ ಸೃಷ್ಠಿಸಿದ್ದು, ಪ್ರೇಕ್ಷಕರು ಚಿತ್ರಮಂದಿರದತ್ತ ಬರುತ್ತಿದ್ದು, ಕೋಸ್ಟಲ್ ವುಡ್ ನಲ್ಲಿ ಇನ್ನಷ್ಟು ಚಿತ್ರ ಬಿಡುಗಡೆಯಾಗಲು ಉತ್ತೇಜನ ನೀಡಿದ್ದಂತಾಗಿದೆ. ಜಬರ್ದಸ್ತ್ ಶಂಕರ, ಕುದ್ಕನ ಮದಿಮೆ, ರಾಹುಕಾಲ ಗುಳಿಗಕಾಲ, ಇಲ್ಲ್ ಒಕ್ಕೆಲ್, ಇಂಗ್ಲಿಷ್ ಮತ್ತು ಇತರ ಹಲವು ಸಿನಿಮಾಗಳು ಬಿಡುಗಡೆಗೆ ಸಿದ್ದವಾಗಿದ್ದು ಮತ್ತು ಕೆಲವು ಸಿನೆಮಾಗಳು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು ಈ ಎಲ್ಲ ಸಿನೆಮಾಗಳಿಗೆ ಹೊಸ ಚೈತನ್ಯ ಸಿಕ್ಕಂತಾಗಿದೆ. ತುಳುಚಿತ್ರರಂಗ ಉದ್ದಿಮೆ ದೊಡ್ಡದಾಗಿ ಬೆಳೆಯಬೇಕು, ಹೊಸ ಹೊಸ ಅಭಿರುಚಿಯ ತುಳುನಾಡು-ತುಳುಚಿತ್ರದ ಕಂಪುವನ್ನು ಸಿನಿಮಾಗಳು ಬರಬೇಕು.

 

Offers

Want to Add your Offers, contact Naadle at 7090787344 or Email us at info@naadle.com