Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!

ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸೇರಿಸಲು ಹಮ್ಮಿಕೊಂಡ ಟ್ವಿಟರ್ ಅಭಿಯಾನಕ್ಕೆ ಪ್ರಚಂಡ ಬೆಂಬಲ..!!

Share This:

ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸಬೇಕು ಎಂಬ ಬೇಡಿಕೆ ಇಂದು ನಿನ್ನೆಯದಲ್ಲ. ತುಳುವನ್ನು ಕೇರಳ, ಕರ್ನಾಟಕದ ಆಡಳಿತ ಭಾಷೆಗಳಲ್ಲೊಂದಾಗಿ ಘೋಷಿಸಬೇಕು ಹಾಗೂ ಎಂಟನೇ ಪರಿಚ್ಛೇದಕ್ಕೆ ಸೇರಿಸಬೇಕು ಎಂಬ ಬೇಡಿಕೆ ಮುಂದಿರಿಸಿಕೊಂಡು ಭಾನುವಾರವಿಡೀ ಟ್ವಿಟರ್ ವೇದಿಕೆಯಲ್ಲಿ ಭರ್ಜರಿ ಅಭಿಯಾನ ನಡೆದಿದೆ. ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಬೇಕೆಂದು ಅಗ್ರಹಿಸಿ #Tulu, #TuluTo8thSchedule , #TuluOfficialinKA_KL ಎಂಬೆಲ್ಲಾ ಹ್ಯಾಶ್‌ ಟ್ಯಾಗ್‌ ಮೂಲಕ ಟ್ವೀಟರ್‌ ನಲ್ಲಿ ಅಭಿಯಾನ ನಡೆಯುತ್ತಿದೆ. ವಿಶ್ವದೆಲ್ಲೆಡೆ 1ಕೋಟಿಗೂ ಹೆಚ್ಚು ಜನ ತುಳು ಮಾತನಾಡುವವರು ಇದ್ದರೂ, ಇಲ್ಲಿಯತನಕ ಆ ಭಾಷೆಗೆ ಸಿಗಬೇಕಾದ ಸಾಂವಿಧಾನಿಕ ಮಾನ್ಯತೆ ಹಾಗು ಗೌರವ ಸಿಕ್ಕಿಲ್ಲ. ಗಾಢವಾದ ಸಂಸ್ಕೃತಿ, ಸಂಪ್ರದಾಯ ಆಚರಣೆಗಳ ಶ್ರೀಮಂತ ಭಾಷೆಯಾಗಿರುವ ತುಳುವನ್ನು ಲಕ್ಷಾಂತರ ಮಂದಿ ತುಳುವರು ವ್ಯವಹಾರದ, ಮನೆಯ ಭಾಷೆಯಾಗಿ ಪರಿಗಣಿಸಿದ್ದಾರೆ, ಗೌರವಿಸುತ್ತಿದ್ದಾರೆ, ಕೋಸ್ಟಲ್‌ವುಡ್ ಕೂಡಾ ಜನಪ್ರಿಯಗೊಂಡಿದೆ, ಸಾವಿರಾರು ಸಂಖ್ಯೆಯ ಗ್ರಂಥಗಳು ರಚನೆಯಾಗಿವೆ. tulu-bhasheyannu-samvidhanada-8ne-paricchedadalli-serisalu-hammikonda-twitter-abhiyanakke-prachanda-bembala-naadle

Upcoming and Ongoing events

View More Events

Want to Promote your Event, contact Naadle at 7090787344 or Email us at info@naadle.com

ಸೆ.7ರಂದು ತಡರಾತ್ರಿ 12 ಗಂಟೆಯಿಂದ 8ರಂದು ತಡರಾತ್ರಿ 12 ಗಂಟೆ ವರೆಗೆ ಟ್ವೀಟ್‌ ಅಭಿಯಾನ ನಡೆಯಿತು. ಭಾನುವಾರ ತಡರಾತ್ರಿ ವೇಳೆಗೆ ಸುಮಾರು 86 ಸಾವಿರಕ್ಕೂ ಹೆಚ್ಚು ಮಂದಿ ಟ್ವೀಟ್‌ ಮಾಡುವ ಮೂಲಕ ತುಳು ಭಾಷೆಗಾಗಿ ಮತ್ತೆ ಕೈ ಎತ್ತಿದ್ದಾರೆ. ಸುಮಾರು 10ಸಾವಿರ ಲೈಕ್ಸ್‌ ಬಂದಿವೆ.ಆಗಸ್ಟ್ ತಿಂಗಳಿಂದಲೇ ಈ ಅಭಿಯಾನದ ಬಗ್ಗೆ ಸಿದ್ಧತೆ ಹಾಗೂ ಪ್ರಚಾರ ನಡೆಸಲಾಗಿದ್ದು, ಭಾನುವಾರ ಟ್ವಿಟರ್ ಬೆಂಗಳೂರು ಟ್ರೆಂಡಿಂಗ್‌ನಲ್ಲಿ #TuluOfficialinKA_KL ಅಗ್ರಸ್ಥಾನದಲ್ಲಿತ್ತು. ಟ್ವೀಟ್‌ ಮಾಡಿದವರಲ್ಲಿ ಸಂಸದರಾದ ನಳಿನ್‌ ಕುಮಾರ್‌ ಕಟೀಲ್‌, ಶೋಭಾ ಕರಂದ್ಲಾಜೆ, ಶಾಸಕರಾದ ಡಿ. ವೇದವ್ಯಾಸ ಕಾಮತ್‌, ಡಾ. ವೈ. ಭರತ್‌ ಶೆಟ್ಟಿ, ಉಮಾನಾಥ ಕೋಟ್ಯಾನ್‌, ರಾಜೇಶ್‌ ನಾಯ್ಕ್, ಸುನಿಲ್‌ ಕುಮಾರ್‌, ರಘುಪತಿ ಭಟ್‌, ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌, ಬಿಜೆಪಿ ನಾಯಕ ಬ್ರಿಜೇಶ್‌ ಚೌಟ, ಕಾಂಗ್ರೆಸ್‌ ರಾಜ್ಯ ವಕ್ತಾರೆ ಲಾವಣ್ಯ ಬಳ್ಳಾಲ್‌, ನವರಸ ನಟ ಜಗ್ಗೇಶ್‌, ನಟರಾದ ನಿರೂಪ್‌ ಭಂಡಾರಿ, ಅನೂಪ್‌ ಭಂಡಾರಿ, ಕಲಾವಿದ ವಿಲಾಸ್‌ ನಾಯಕ್‌, ಕೋಸ್ಟಲ್‌ವುಡ್‌ ನಟ ರೂಪೇಶ್‌ ಶೆಟ್ಟಿ, ಖ್ಯಾತ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ಸೇರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ, ಕರ್ನಾಟಕ ಹಾಗೂ ಕೇರಳದ ಮುಖ್ಯಮಂತ್ರಿಗಳಾದ ಬಿ.ಎಸ್‌. ಯಡಿಯೂರಪ್ಪ ಹಾಗೂ ಪಿಣರಾಯಿ ವಿಜಯನ್‌ ಮುಂತಾದವರಿಗೆ ಟ್ಯಾಗ್‌ ಮಾಡಲಾಗಿದೆ.

 

Offers

Want to Add your Offers, contact Naadle at 7090787344 or Email us at info@naadle.com