Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!

ಗಂಡ ಹೆಂಡತಿಯ ಸುಖಕರ ಸಂಸಾರಕ್ಕೆ ಇಲ್ಲಿದೆ ಕೆಲವೊಂದು ಸಲಹೆಗಳು.

Share This:

ಭಾರತೀಯ ಸಾಂಸ್ಕೃತಿಕ ಪರಂಪರೆಯಲ್ಲಿ ವಿವಾಹ ವ್ಯವಸ್ಥೆಗೆ ವಿಶಿಷ್ಟ ಸ್ಥಾನ ಇದೆ. ಆದರೆ ಹತ್ತಾರು ಕಾರಣಗಳಿಂದ ಇಂದು ಆ ವ್ಯವಸ್ಥೆ ಸಡಿಲಗೊಳ್ಳುತ್ತಿದೆ. ದಾಂಪತ್ಯಗೀತೆಯಲ್ಲಿ ಅಪಸ್ವರ ಕೇಳಿಬರುತ್ತಿದ್ದು, ಇದಕ್ಕೆ ಕಾರಣಗಳು ನೂರಾರು. ಆಧುನಿಕ ಜೀವನಶೈಲಿಯಲ್ಲಿ ಕುಟುಂಬದ ಪರಿಕಲ್ಪನೆಯೂ ಬದಲಾಗುತ್ತಿದೆ. ಇದರಿಂದ ಸಾಂಪ್ರದಾಯಿಕ ಆಲೋಚನೆಗಳಿಗೆ ಹಿನ್ನಡೆಯಾಗಿದೆ. ಮದುವೆಯ ತಳಹದಿಯ ಮೇಲೆ ನಿರ್ಮಾಣವಾಗಿರುವ ನಮ್ಮ ಕುಟುಂಬದ ವ್ಯವಸ್ಥೆ ಕಾಪಾಡಿಕೊಳ್ಳಬೇಕು ಎಂದರೆ ಅದಕ್ಕೆ ಗಂಡ-ಹೆಂಡತಿ ಇಬ್ಬರಲ್ಲೂ ಬದ್ಧತೆ ಬೇಕು. ನಮ್ಮ ಜೀವನಶೈಲಿಗೆ ಅನುಗುಣವಾಗಿ ಬೇಕಾದ ಅನಿವಾರ್ಯ ಹೊಂದಾಣಿಕೆ ಮಾಡಿಕೊಳ್ಳಬೇಕು. ಆ ಮೂಲಕ ನಮ್ಮ ಸಂಸಾರವನ್ನು ಉಳಿಸಿಕೊಳ್ಳುವ ಅಗತ್ಯವೂ ಇದೆ.

ಹೊಂದಾಣಿಕೆ ಎಂದರೆ ಅದರಲ್ಲಿ ತಾಳ್ಮೆ, ತ್ಯಾಗ ಎರಡೂ ಸೇರಿರುತ್ತದೆ. ‘ನಾನು’ ಎನ್ನುವುದನ್ನು ಸ್ವಲ್ಪ ಹಿಂದೆ ಬಿಟ್ಟು ನಾವು ಎನ್ನುವತ್ತ ಮುಂದುವರಿಯಬೇಕು. ಎರಡೂ ಕೈ ಸೇರಿದರೆ ತಾನೆ ಚಪ್ಪಾಳೆ ಸಾಧ್ಯ? ಒಂದು ಕೈಯಲ್ಲಿ ಕೇವಲ ಚಿಟಿಕೆ ಹೊಡೆಯಬಹುದಷ್ಟೇ! ನಮ್ಮ ಕುಟುಂಬ ನಮ್ಮ ಅಪ್ಪ ಅಮ್ಮಂದಿರ ಸಂಸಾರದಂತಿಲ್ಲ ಎನ್ನುವುದು ಎಲ್ಲರಿಗೂ ವೇದ್ಯವಾಗಿದೆ. ಇದಕ್ಕೆ ಹೆಣ್ಣಿನ ಆರ್ಥಿಕ ಸ್ವಾವಲಂಬನೆ, ಆಕೆ ಪಡೆದ ಶಿಕ್ಷಣ ಕೂಡ ಪೂರಕ. ವಾಸ್ತವತೆಯ ಅರಿವಿನಲ್ಲಿ ಸಂಸಾರ ನಡೆಯಬೇಕು. ಇಲ್ಲಿ ಯಾರು ಹೆಚ್ಚು ಅನ್ನುವುದಕ್ಕಿಂತ ಯಾವುದು ಹೆಚ್ಚು ಎಂಬ ತಿಳಿವಳಿಕೆ ಅವಶ್ಯವಾಗಿದೆ.

ಅನೇಕ ಮಂದಿ ತಮ್ಮ ಹೆಂಡತಿಯನ್ನು ಪಾಲುದಾರರ ಬದಲಾಗಿ ಎದುರಾಳಿಗಳಂತೆ ವರ್ತಿಸುತ್ತಾರೆ. ತಾನು ಹೇಳಿದ್ದೇ ನಡೆಯಬೇಕು ಎಂಬ ಗಂಡನ ಮನೋಭಾವದಿಂದ ಹೆಂಡತಿ ಕುಗ್ಗುತ್ತಾಳೆ. ಗಂಡ ಹೆಂಡತಿ ಸಂಸಾರ ಸುಗಮವಾಗಿ ಮುನ್ನಡೆಸಲು ಬೇಕಾದ ಕೆಲವೊಂದು ಸಲಹೆಗಳನ್ನು ನಾವಿಲ್ಲಿ ವಿವರಿಸಿದ್ದೇವೆ ನೋಡಿ.

ನಿಮ್ಮ ಭಾವನೆಗಳನ್ನು ಮತ್ತು ಅಗತ್ಯಗಳನ್ನು ತಮ್ಮವರೊಂದಿಗೆ ವ್ಯಕ್ತಪಡಿಸಿ.
ನಿಮಗೆ ಏನಾದರು ಬಯಕೆ ಇದ್ದಲ್ಲಿ ತಮ್ಮ ಗಂಡನೊಡನೆ ಅದನ್ನು ವ್ಯಕ್ತಪಡಿಸಿ, ಏನಾದರು ತಪ್ಪು ಕಂಡಲ್ಲಿ ಅಲ್ಲಿಯೇ ಹೇಳಿ, ನಿಮ್ಮ ಗಂಡನಿಗೆ ಕ್ರೂರ ಶಕ್ತಿಗಳೇನು ಇರುವುದಿಲ್ಲ. ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಬೇಕಾದಲ್ಲಿ ಅವರೊಂದಿಗೆ ಸಕರಾತ್ಮವಾಗಿ ಮಾತನಾಡಿ. ಗಂಡನನ್ನು ಆಲಿಸುವ ಬದಲು ಅವರ ಪ್ರತಿಕ್ರಿಯೆಯನ್ನು ನಿರೀಕ್ಷಿಸಿ.

 

 

ಯಾವುದಾದರು ದೃಢ ನಿರ್ಧಾರ ಮಾಡುವ ಸಂದರ್ಭದಲ್ಲಿ ಇಬ್ಬರೂ ಪಾಲುದಾರರಾಗಿರಿ.
ಯಾವುದೇ ಸಂದರ್ಭವನ್ನು ಇಬ್ಬರೂ ಹಂಚಿಕೊಳ್ಳಿ, ಇದರಿಂದ ಕುಟುಂಬದ ಸಾಮರಸ್ಯ ಹೆಚ್ಚುತ್ತದೆ ಮತ್ತು ತನಗೂ ಕುಟುಂಬ ನಿಭಾಯಿಸುವುದರಲ್ಲಿ ಜವಬ್ದಾರಿ ಇದೆ ಎಂಬ ಮನೋಭಾವ ಇಬ್ಬರಲ್ಲೂ ಹುಟ್ಟುತ್ತದೆ. ತಮ್ಮ ಸಂಗಾತಿಯೊಡನೆ ಕೆಲವೊಂದು ಕೆಲಸಗಳನ್ನು ಹೇಳದೆ ಮಾಡುವುದರಿಂದ ಅವರನ್ನು ನಿರ್ಲಕ್ಷ್ಯ ಮನೋಭಾವದಿಂದ ನೋಡಿದಂತಾಗುತ್ತದೆ.

ತಮ್ಮ ಹೆಂಡತಿಗೆ ಒಳ್ಳೆಯ ಗೆಳೆಯನಾಗಿರಿ.
ನಿಮ್ಮ ಸಂಗಾತಿಯ ಜೀವನದ ಬಗ್ಗೆ ಆಸಕ್ತಿ ತೋರಿಸಿ. ಸಾಮಾನ್ಯವಾಗಿ, ನಾವು ಒಂದೇ ಮನೆಯಲ್ಲಿಯೇ ವಾಸಿಸುತ್ತಿದ್ದರೂ ಪರಸ್ಪರರ ಜೀವನದ ಕುರಿತು ತಿಳಿಯಲು ಬಯಸುವುದಿಲ್ಲ. ಗಂಡ ಹೆಂಡತಿ ಕೆಲವು ವಿಷಯಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದಲ್ಲಿ ಉತ್ತಮ ಜೀವನವನ್ನು ಅನುಭವಿಸಬಹುದು. ನಿಮ್ಮ ಹಿಂದಿನ ಜೀವನದಲ್ಲಿ ಅನುಭವಿಸಿದ ಕೆಲವು ಕ್ಷಣಗಳು, ಹಾಸ್ಯ ಸಂದರ್ಭಗಳನ್ನೆಲ್ಲಾ ಹಂಚಿಕೊಳ್ಳಿ. ನೀವು ಅರ್ಥಪೂರ್ಣ ಸ್ನೇಹವನ್ನು ಕಾಪಾಡಿಕೊಳ್ಳಬೇಕು, ಇದರಿಂದ ನಿಮ್ಮ ಜೀವನ ಪ್ರೀತಿಯಿಂದ ತುಂಬಿರುತ್ತದೆ.

Naadle.com

Vist Naadle to find in and out around you


NAADLE will provide information regarding Point of Interest, Travel Guide, Public Services etc as well.

Visit Naadle Free Register

ಮಾತನಾಡುವಾಗ ಜಾಗರೂಕತರಾಗಿರಿ.
ತಾವು ಕೋಪದಲ್ಲಿರುವ ಸಂದರ್ಭದಲ್ಲಿ ಸ್ವಲ್ಪ ಜಾಗ್ರತರಾಗಿ, ತಮ್ಮವರೊಂದಿಗೆ ಮಾತನಾಡುವ ಮುನ್ನ ಕೋಪ ತನ್ನಗಾಗುವವರೆಗೆ ಏನು ಮಾತನಾಡಬೇಡಿ. ನಾವು ಆಡಿದ ಮಾತು ತಮ್ಮವರಿಗೆ ನೋವನ್ನು ಉಂಟು ಮಾಡಿದರೆ, ಆ ಕ್ಷಣಕ್ಕೆ ಅವರನ್ನು ಸಮಾಧಾನ ಪಡಿಸವುದು ಒಂದು ಕಷ್ಟಕರ ವಿಷಯ. ಮೇಲ್ನೋಟಕ್ಕೆ ಅವರು ಸಮಾಧಾನ ಪಡೆಯಬಹುದು ಆದರೆ, ನಾವಾಡಿದ ಮಾತು ಅವರ ಮನಸ್ಸಿನಲ್ಲಿ ಹಾಗೆಯೇ ಉಳಿಯುತ್ತದೆ. ಅದನ್ನೇ ಮತ್ತೆ ಮತ್ತೇ ಯೋಚಿಸಿ ಕಂಗಾಲಾಗುತ್ತಾರೆ. ಇದಕ್ಕೆ ನೀವು ಯಾವತ್ತೂ ಆಸ್ಪದಿಸಬೇಡಿ.

ಮೆಚ್ಚುಗೆ ವ್ಯಕ್ತಪಡಿಸಿ.
ತಮ್ಮ ಕುಟುಂಬಕ್ಕಾಗಿ ಸರ್ವಸ್ವನ್ನೂ ತ್ಯಾಗ ಮಾಡಿ ಶ್ರಮಿಸುವ ಸಂಗಾತಿಗೆ ಅವರ ಕೆಲಸಕ್ಕಾಗಿ ಒಂದೆರಡು ಒಳ್ಳೆಯ ಹಿತ ನುಡಿಗಳಿಂದ ಮೆಚ್ಚುಗೆ ವ್ಯಕ್ತಪಡಿಸಿದರೆ ಅವರಿಗೂ ತಮ್ಮ ಕೆಲಸ ಮುನ್ನಡೆಸಲು ಸ್ಫೂರ್ತಿ ತುಂಬಿಸಿದಂತಾಗುತ್ತದೆ. ತನ್ನ ಗಂಡ ಕುಟುಂಬಕ್ಕೆ ಸಾಕಷ್ಟು ಒಳ್ಳೆಯದನ್ನು ಮಾಡುತ್ತಿಲ್ಲ ಅಥವಾ ಅವರ ಪ್ರಯತ್ನಗಳಲ್ಲಿ ತೃಪ್ತಿ ಹೊಂದಿಲ್ಲವೆಂದು ಎಂದಿಗೂ ಭಾವಿಸಬೇಡಿ.

ಪರಸ್ಪರ ಸಂವಾದಿಸುವುದು ಮುಖ್ಯ.
ಎಷ್ಟೇ ಹತ್ತಿರದ ಸಂಬಂಧಿಕನಾಗಿರಲಿ ಅಥವಾ ಸ್ನೇಹಿತನಾಗಿರಲಿ, ನಿಮ್ಮ ಗಂಡನ/ಹೆಂಡತಿಯ ಬಗ್ಗೆ ನಕಾರಾತ್ಮಕ ವಿಷಯ ಅಥವಾ ಒಂದು ಚಿಕ್ಕ ದೂರನ್ನೂ ಅವರೊಂದಿಗೆ ಹಂಚಬೇಡಿ. ನೀವು ಮದುವೆಯಾದ ನಂತರ ನಿಮ್ಮ ಗಂಡ/ಹೆಂಡತಿಯೇ ನಿಮ್ಮ ಮೊದಲ ಆದ್ಯತೆ, ನಂತರ ನಿಮ್ಮ ಕುಟುಂಬಿಕರು, ಸ್ನೇಹಿತರು ಸಂಬಂಧಿಕರೆಲ್ಲಾ. ನಿಮ್ಮವರ ಬಗ್ಗೆ ಹಿಂಬದಿಯಿಂದ ಮಾತನಾಡುವುದು ಅಸಹ್ಯಕರ ವಿಷಯವಾಗಿದ್ದು, ಇದರಿಂದ ಯಾವುದೇ ಸಮಸ್ಯೆಗಳು ಪರಿಹರಿಸುವುದಿಲ್ಲ, ಬದಲಿಗೆ ಬೇರೆಯವರ ದೃಷ್ಟಿಯಲ್ಲಿ ನಿಮ್ಮ ಸಂಬಂಧದ ಬಗ್ಗೆ ನಕಾರಾತ್ಮಕ ಭಾವನೆ ಸೃಷ್ಟಿಮಾಡುತ್ತದೆ. ಇದರ ಬದಲಿಗೆ ನಿಮ್ಮೊಳಗೆಯೇ(ಗಂಡ-ಹೆಂಡತಿ) ಮಾತನಾಡಿ ಸಮಸ್ಯೆಗಳನ್ನು ಬಗೆಹರಿಸಬಹುದು.

ತಪ್ಪುಗಳನ್ನು ಒಪ್ಪಿಕೊಳ್ಳುವ ಉದಾರ ಮನಸ್ಸಿನವರಾಗಿರಿ.
ಯಾವ ಮನುಷ್ಯನೂ ಪರಿಪೂರ್ಣನಾಗಿರುವುದಿಲ್ಲ. ತಪ್ಪು ಮಾಡುವುದು ಮನುಷ್ಯನ ಹುಟ್ಟು ಗುಣ. ನಿಮ್ಮ ನಿರೀಕ್ಷೆ ಯಾವತ್ತೂ ಹೆಚ್ಚು ಮಟ್ಟದಲ್ಲಿ ಅಥವಾ ಅವಾಸ್ತವಿಕವಾಗಿರಬಾರದು. ನಿಮ್ಮ ಕಡೆಯಿಂದ ತಪ್ಪಾಗಿದ್ದರೆ ಅದನ್ನು ಒಪ್ಪಿಕೊಳ್ಳಿ. ತಮ್ಮವರು ತಪ್ಪು ಮಾಡಿದ್ದರೆ ಅದನ್ನು ಸರಿಪಡಿಸಿ ಅಥವಾ ಅವರನ್ನು ಕ್ಷಮಿಸುವ ಉದಾರ ಮನಸ್ಸಿನವರಾಗಿರಿ, ಬದಲಿಗೆ ತಮ್ಮವರು ತಪ್ಪು ಮಾಡಿದ್ದಾರೆ ಎಂದು ಅವರೊಂದಿಗೆ ಮಾತನಾಡದೆ ಇರುವುದು ಅಥವಾ ಕೋಪದಲ್ಲಿ ಹೋಗಿ ಮಲಗುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ.

ನಿಮ್ಮವರೊಂದಿಗೆ ಸ್ವಲ್ಪ ಸಮಯ ಕಳೆಯಿರಿ.
ನೀವು ಎಷ್ಟೇ ಕಾರ್ಯನಿರತರಾಗಿರಿ, ನಿಮ್ಮ ಕೆಲಸದಲ್ಲಿ ಎಷ್ಟೇ ಒತ್ತಡಗಳಿರಲಿ, ನಿಮ್ಮ ಸಮಯದಲ್ಲಿ ಸ್ವಲ್ಪ ಸಮಯವಾದರೂ ನಿಮ್ಮವರೊಂದಿಗೆ ಕಳೆಯಿರಿ. ಇದರಿಂದ ಯಾವಾಗಲೂ ಮನೆಗೆಲಸ, ಕುಟುಂಬದವರ ಸೇವೆಯಲ್ಲಿ ತೊಡಗಿರುವ ನಿಮ್ಮ ಸಂಗಾತಿಯ ಮನಸ್ಸು ಹಗುರವಾಗುತ್ತದೆ ಮತ್ತು ತನಗೆ ಆಧಾರವಾಗಿ ತನ್ನ ಗಂಡ ಇದ್ದಾರೆ ಎಂಬ ಭಾವನೆ ಮೂಡುತ್ತದೆ.

ಬದುಕಿಗೆ ಬೇಕಾದ ವಿಶ್ವಾಸ, ನಂಬಿಕೆ ಎಂಬುದು ಅಂಗಡಿಯಿಂದ ಕೊಂಡು ತರುವ ವಸ್ತುವಲ್ಲ. ಅದು ದಿನ ಕಳೆದಂತೆ ಸಾಂಗತ್ಯದಲ್ಲಿ ಒಡಮೂಡಬೇಕು. ತನ್ನ ಇಚ್ಚೆಯಂತೆ ನಡೆಯದ ಮಾತ್ರಕ್ಕೆ ಅಪನಂಬಿಕೆ ಹುಟ್ಟಬಾರದು. ‘ಅಲ್ಲೇನೋ ಇದೆ’ ಎಂಬ ಕುಹಕತನ ಸೃಷ್ಟಿಸಬೇಡಿ. ಎಲ್ಲರಿಗೂ ಇರುವುದು ಒಂದೇ ಬದುಕು, ಅದು ಅವರಿಗೆ ಇಷ್ಟವಾದಂತೆ ಸಾಗಲಿ. ಆದರೆ ಇಚ್ಛೆ ಇನ್ನೊಬ್ಬರ ಬದುಕನ್ನು ಅತಂತ್ರ ಮಾಡಬಾರದು ಎಂಬ ಎಚ್ಚರಿಕೆ ಇರಬೇಕಷ್ಟೇ! ಹಕ್ಕಿಯ ಹಾಡಿನ ಮಾಧುರ್ಯವನ್ನು ಸವಿಯಬೇಕೆಂದರೆ ನಿಮ್ಮಲ್ಲೊಂದಿಷ್ಟು ಸಹನೆ, ಪ್ರೀತಿ ಇರಬೇಕು. ಹಾಗೆಯೇ ಪ್ರೀತಿಯಲ್ಲಿ ಕ್ಷಮೆ ಇರಲಿ. ಅದಿಲ್ಲದಿದ್ದರೆ ಬದುಕು ಮುಂದೆಸಾಗುವುದು ಹೇಗೆ…?
naadle

If you like this article, click on the button below