Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!

ತೇಜಸ್ ಅರೆಸ್ಟೆಡ್ ಲ್ಯಾಂಡಿಂಗ್ ಯಶಸ್ವಿ, ಈ ಮೂಲಕ ಯುದ್ಧ ವಿಮಾನದ ಸ್ವದೇಶಿ ನಿರ್ಮಾಣ ಕ್ಷೇತ್ರದಲ್ಲಿ ಭಾರತದ ಮಹತ್ವದ ಸಾಧನೆ..!!

thejas arrested landing yashashwi i mulaka yuddu vimannada swadeshi nirmana kshetradalli bharatada mahatvada saadhane-naadle
Share This:

ಸ್ವದೇಶಿ ನಿರ್ಮಾಣದ ಲಘು ಯುದ್ಧ ವಿಮಾನ ತೇಜಸ್ ವಿಶೇಷ ದಾಖಲೆ ಬರೆದಿದ್ದು, ಶುಕ್ರವಾರ ನಡೆದ ಅರೆಸ್ಟೆಡ್ ಲ್ಯಾಂಡಿಂಗ್ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸುವ ಮೂಲಕ ಈ ಸಾಧನೆ ಮಾಡಿದ ಕೆಲವೇ ಕೆಲವು ದೇಶಗಳ ಪಟ್ಟಿಗೆ ಭಾರತ ಸೇರುವ ಕಾಲ ಸನ್ನಿಹಿತವಾಗಿದೆ. ಹೀಗಾಗಿ ಈ ಪರೀಕ್ಷೆಯಲ್ಲಿ ಯಶಸ್ವಿಯಾದ ದೇಶದ ಮೊದಲ ಯುದ್ಧ ವಿಮಾನ ಎಂಬ ಹೆಗ್ಗಳಿಕೆಗೆ ತೇಜಸ್‌ ಪಾತ್ರವಾಗಿದೆ. ನೌಕಾಪಡೆ ಆವೃತ್ತಿಯ ವಿಮಾನದ ತಳಭಾಗದಲ್ಲಿ ಕೊಂಡಿ ಒಂದನ್ನು ಅಳವಡಿಸಲಾಗಿರುತ್ತದೆ. ವಿಮಾನವು ಇಳಿಯುವ ಜಾಗದಲ್ಲಿ ಅಡ್ಡವಾಗಿ ಒಂದು ಬಲಿಷ್ಠವಾದ ಹಗ್ಗವನ್ನು ಕಟ್ಟಿರಲಾಗುತ್ತದೆ. ವೇಗವಾಗಿ ಬರುವ ವಿಮಾನವು ಹಡಗಿನ ಮೇಲೆ ಇಳಿದು, ಮುಂದೆ ಸಾಗುತ್ತಿದ್ದಂತೆ ತಳಭಾಗದಲ್ಲಿರುವ ಕೊಂಡಿಯು ಹಗ್ಗಕ್ಕೆ ಸಿಲುಕಿ, ವಿಮಾನದ ವೇಗವನ್ನು ತಡೆದು, ಸ್ವಲ್ಪವೇ ದೂರದಲ್ಲಿ ಅದು ನಿಲ್ಲುವಂತೆ ಮಾಡುತ್ತದೆ. ಇದನ್ನು ಅರೆಸ್ಟ್ ಲ್ಯಾಂಡಿಂಗ್ ಎನ್ನುತ್ತಾರೆ.thejas arrested landing yashashwi i mulaka yuddu vimannada swadeshi nirmana kshetradalli bharatada mahatvada saadhane-naadle

Upcoming and Ongoing events

View More Events

Want to Promote your Event, contact Naadle at 7090787344 or Email us at info@naadle.com

ದೇಶದಲ್ಲೇ ಅಭಿವೃದ್ಧಿಪಡಿಸಲಾದ ಲಘು ಯುದ್ಧ ವಿಮಾನ ‘ತೇಜಸ್‌’ನ ನೌಕಾಪಡೆ ಆವೃತ್ತಿ ಸೇವೆಗೆ ಸಿದ್ಧವಾಗಿದ್ದು, ಈ ಕುರಿತಂತೆ ನಿನ್ನೆ ನಡೆದ ‘ಅರೆಸ್ಟೆಡ್ ಲ್ಯಾಂಡಿಂಗ್‌’ (ನಿರ್ಬಂಧಿತ ಇಳಿಕೆ) ಪರೀಕ್ಷೆಯಲ್ಲಿ ಯಶಸ್ವಿಯಾಗಿದೆ. ಯುದ್ಧ ವಿಮಾನದ ಸ್ವದೇಶಿ ನಿರ್ಮಾಣ ಕ್ಷೇತ್ರದಲ್ಲಿ ಇದೊಂದು ದೊಡ್ಡ ಸಾಧನೆಯಾಗಿದ್ದು, ಈ ಸಾಧನೆಗೈದ ಕೆಲವೇ ಕೆಲವು ರಾಷ್ಟ್ರಗಳ ಪಟ್ಟಿಗೆ ಇದೀಗ ಭಾರತ ಸೇರುವ ತವಕದಲ್ಲಿದೆ. ಈ ಹಿಂದೆ ಯುದ್ದ ವಿಮಾನ ತಯಾರಿಕಾ ದೇಶಗಳಾದ ಅಮೆರಿಕ, ರಷ್ಯಾ, ಬ್ರಿಟನ್, ಫ್ರಾನ್ಸ್ ಈ ಪಟ್ಟಿಯಲ್ಲಿ ಸ್ಥಾನಪಡೆದಿದ್ದವು. ಇತ್ತೀಚೆಗಷ್ಟೇ ಈ ಪಟ್ಟಿಗೆ ಚೀನಾ ಸೇರ್ಪಡೆಯಾಗಿತ್ತು. ಇದೀಗ ತೇಜಸ್ ವಿಮಾನದ ಯಶಸ್ವೀ ಅರೆಸ್ಟೆಡ್ ಲ್ಯಾಡಿಂಗ್ ಮೂಲಕ ಭಾರತ ಕೂಡ ಈ ಪಟ್ಟಿಗೆ ಸೇರ್ಪಡೆಯಾಗಲಿದೆ. ಇನ್ನು ತೇಜಸ್ ಸಾಧನೆ ಮೂಲಕ ಸ್ವದೇಶಿ ಯುದ್ಧ ವಿಮಾನ ನಿರ್ಮಾಣ ಕ್ಷೇತ್ರದಲ್ಲಿ ಭಾರತ ಮಹತ್ವದ ಸಾಧನೆ ಮಾಡಿದ್ದು, ತೇಜಸ್ ಯಶಸ್ಸು ಮುಂದಿನ ದಿನಗಳಲ್ಲಿ ಈ ಕ್ಷೇತ್ರಕ್ಕೆ ದೊಡ್ಡ ಮಟ್ಟದ ಲಾಭ ತರಲಿದೆ ಎಂದು ಹೇಳಲಾಗುತ್ತಿದೆ.

 

Offers

Want to Add your Offers, contact Naadle at 7090787344 or Email us at info@naadle.com