ತಾಯ್ನಾಡಿಗೆ ಮರಳಿದ ವೀರಯೋಧ ಅಭಿನಂದನ್, ಭಾರತಕ್ಕೆ ಐಎಎಫ್ ಪೈಲಟ್ ಹಸ್ತಾಂತರ..!!

tayinadige maralida veerayoda abhinandan, bharathakke IAF pilot hastantara-naadle
Share This:

ಭಾರತ-ಪಾಕಿಸ್ತಾನ ನಡುವಿನ ವಹಿವಾಟು, ಸಂಪರ್ಕಕ್ಕೆ ಕೊಂಡಿಯಾಗಿರುವ ವಾಘಾ ಗಡಿ ಶುಕ್ರವಾರ ಸಂಜೆ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಭಾರತದ ವಾಯು ಸೇನೆಯ ವೀರಪುತ್ರ, ಮಿಗ್‌ 21 ಯುದ್ಧ ವಿಮಾನದ ಸಾರಥಿ, ದೇಶವಾಸಿಗಳ ಅಭಿಮಾನದ ಯೋಧ ಅಭಿನಂದನ್‌ ವರ್ಧಮಾನ್‌ ಮರಳಿ ಭಾರತದ ನೆಲವನ್ನು ಪ್ರವೇಶಿಸಿದ್ದಾರೆ. ಭಾರತ-ಪಾಕ್ ನಡುವಿನ ವಾಘಾ ಗಡಿಯಲ್ಲಿ ಸೇರಿದ ಸಹಸ್ರಾರು ಮಂದಿ ಭಾರತಮಾತೆಯ ವೀರಪುತ್ರನನ್ನು ದೇಶ ಭಕ್ತಿಯ ಘೋಷಣೆಗಳೊಂದಿಗೆ ವೀರೋಚಿತವಾಗಿ ಸ್ವಾಗತಿಸಿತು.tayinadige maralida veerayoda abhinandan, bharathakke IAF pilot hastantara-naadleಶುಕ್ರವಾರ ಅಪರಾಹ್ನವೇ ವರ್ಧಮಾನ್‌ ಅವರನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಲಾಗಿತ್ತಾದರೂ ದಾಖಲೆಗಳ ಪರಿಶೀಲನೆ, ಇನ್ನಿತರ ನೆಪವೊಡ್ಡಿ ರಾತ್ರಿ 9.15ರ ವೇಳೆಗೆ ವಾಘಾ ಗಡಿಯ ಬಳಿಗೆ ಕರೆದುಕೊಂಡು ಬಂದಿತು. ಬಿಡುಗಡೆಗೂ ಮುನ್ನ, ತಾವು ಸಿಕ್ಕಿದ್ದು ಹೇಗೆ ಎಂಬಿತ್ಯಾದಿ ವಿಷಯಗಳ ಕುರಿತಂತೆ ಪಾಕಿಸ್ಥಾನ ವೀಡಿಯೋ ಮಾಡಿಕೊಂಡಿದೆ. ಹಸ್ತಾಂತರಕ್ಕೂ ಮುನ್ನ ಪಾಕಿಸ್ಥಾನ ನಡೆಸಿದ ‘ಡ್ರಾಮಾ’ಗಳು ಅಭಿನಂದನ್‌ ಭಾರತಕ್ಕೆ ಬರುವುದು ತಡವಾಯಿತು. ಹಾಗಾಗಿ ಅಪರಾಹ್ನ 2 ಗಂಟೆಗೆ ಹಸ್ತಾಂತರಗೊಳ್ಳಲಿದ್ದಾರೆಂಬ ನಿರೀಕ್ಷೆ ಹುಸಿಯಾಯಿತು. ಅನಂತರ ಸಂಜೆ 5ಕ್ಕೆ ಮತ್ತು ರಾತ್ರಿ 9ಕ್ಕೆ ಮುಂದೂಡಲ್ಪಟ್ಟಿತು. ಅಂತಿಮವಾಗಿ ರಾತ್ರಿ 9.15ರ ಹೊತ್ತಿಗೆ ಅಭಿನಂದನ್‌ ಅವರನ್ನು ಅಟ್ಟಾರಿ-ವಾಘಾ ಗಡಿಯಲ್ಲಿನ ಉಭಯ ದೇಶಗಳ ಗೇಟ್‌ಗಳ ಬಳಿಗೆ ಶಸ್ತ್ರಸಜ್ಜಿತ ನಾಲ್ವರು ಪಾಕ್‌ ಸೈನಿಕರು ಕರೆತಂದರು. ರಾತ್ರಿ 9.20ರ ಸುಮಾರಿಗೆ ಭಾರತದ ಗೇಟ್‌ನ ಬಳಿ ನಿಂತು ಅಭಿನಂದನ್‌ ಅವರನ್ನು ಪಾಕಿಸ್ಥಾನದ ಸೈನಿಕರು, ಭಾರತದ ಸೈನ್ಯಾಧಿಕಾರಿಗಳಿಗೆ ಹಸ್ತಾಂತರಿಸಿದರು. ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಪಾಕ್ ಅಧಿಕಾರಿಗಳ ಜೊತೆ ಭಾರತೀಯ ವಾಯುಸೇನೆ ಸಲಹೆಗಾರ ಜಿಟಿ ಕುರಿಯನ್ ಅವರು ಲಾಹೋರ್ ನಿಂದ ಅಟಾರಿ ವಾಘಾ ಗಡಿಗೆ ಕರೆತಂದಿದ್ದು, ಭಾರತೀಯ ಸೇನಾ ವರಿಷ್ಠರಿಗೆ, ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. ಈ ಸಂದರ್ಭದಲ್ಲಿ ಅಭಿನಂದನ್ ಪೋಷಕರು ಕೂಡಾ ಹಾಜರಿದ್ದರು. ಅವರು ಕಾಲಿಟ್ಟ ಕೂಡಲೇ ಬೆಳಗ್ಗೆಯಿಂದ ಅಲ್ಲಿ ಕಾದು ಕುಳಿತಿದ್ದ ಭಾರತೀಯರು ಹರ್ಷೋದ್ಗಾರಗಳಿಂದ ಅವರನ್ನು ಸ್ವಾಗತಿದರು.tayinadige maralida veerayoda abhinandan, bharathakke IAF pilot hastantara-naadleಫೆ. 27ರಂದು ಭಾರತದ ಗಡಿ ದಾಟಿ ಬಂದ ಪಾಕಿಸ್ತಾನದ ಎಫ್‌-16 ವಿಮಾನವನ್ನು ಮಿಗ್ 21 ಮೂಲಕ ಬೆನ್ನಟ್ಟಿ ಹೊಡೆದುರುಳಿಸುವ ಸಾಹಸಿಕ ಕಾರ್ಯಾಚರಣೆ ವೇಳೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಇಳಿದ ಅಭಿನಂದನ್ ಅವರನ್ನು ಪಾಕಿಸ್ತಾನ ದಿಗ್ಬಂಧನದಲ್ಲಿ ಇರಿಸಿತ್ತು. ಭಾರತದ ಆಗ್ರಹ ಮತ್ತು ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದ ಪಾಕಿಸ್ತಾನ ಒಂದೇ ದಿನದಲ್ಲಿ ಅವರ ಬಿಡುಗಡೆಗೆ ಒಪ್ಪಿತ್ತುಘಿ. ಆದರೆ, ವಿಮಾನ ಮೂಲಕ ಕಳುಹಿಸಿಕೊಡಬೇಕೆಂಬ ಭಾರತದ ಬೇಡಿಕೆಯನ್ನು ತಿರಸ್ಕರಿಸಿ ವಾಘಾ ಗಡಿ ಮೂಲಕವೇ ಹಸ್ತಾಂತರಿಸುವುದಾಗಿ ಪ್ರಕಟಿಸಿತು. ಅಭಿನಂದನ್ ಆಗಮನಕ್ಕಾಗಿ ಇಡೀ ದೇಶ ಶುಕ್ರವಾರ ಬೆಳಗ್ಗಿನಿಂದಲೇ ಕಾಯುತ್ತಿದ್ದರೆ, ಪಾಕಿಸ್ತಾನ ಪಿಳ್ಳೆನೆವಗಳನ್ನು ಹಿಡಿದು ಇಡೀ ದಿನ ಸತಾಯಿಸಿ ಅಂತಿಮವಾಗಿ ರಾತ್ರಿ 9.22ರ ಹೊತ್ತಿಗೆ ಹಸ್ತಾಂತರಿಸಿತು.tayinadige maralida veerayoda abhinandan, bharathakke IAF pilot hastantara-naadleಅಭಿನಂದನ್ ಅವರ ಆಗಮನಕ್ಕಾಗಿ ಜನ ಬೆಳಗ್ಗಿನಿಂದಲೇ ಕಾದು ನಿಂತಿದ್ದರೂ ಅವರು ಆಗಮಿಸಿದ್ದು ರಾತ್ರಿಯಾದ ನಂತರ. ವಾಘಾ ಗಡಿಯಲ್ಲಿ ಹಸ್ತಾಂತರ ನಡೆಯಲಿದೆ ಎಂದು ತಿಳಿದು ಭಾರಿ ಸಂಖ್ಯೆಯಲ್ಲಿ ಜನ ಬೆಳಗ್ಗೆಯೇ ಅಲ್ಲಿಗೆ ಧಾವಿಸಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಗಡಿಯಲ್ಲಿ ನಿತ್ಯ ಸಂಜೆ ನಡೆಯುವ ‘ಧ್ವಜವಂದನೆ’ ಬಳಿಕ ಹಸ್ತಾಂತರ ಮಾಡುವುದಾಗಿ ಪಾಕಿಸ್ತಾನ ಹೇಳಿದ್ದರೂ ಅದಕ್ಕಿಂತ ಮೊದಲೇ ಹಸ್ತಾಂತರಿಸಬೇಕೆಂದು ಭಾರತ ಒತ್ತಡ ಹೇರಿತ್ತು. ಈ ಮಧ್ಯೆ ‘ಬೀಟ್ ದ ರಿಟ್ರೀಟ್’ ಕಾರ್ಯಕ್ರಮವನ್ನೇ ರದ್ದು ಮಾಡಲಾಯಿತು. ಆದರೆ, ಅಭಿನಂದನ್ ಆಗಮನ ಆಗಲೇ ಇಲ್ಲ. ಅಷ್ಟಾದರೂ ಜನ ಕರಗಲೂ ಇಲ್ಲ. ಕೊನೆಗೆ ರಾತ್ರಿ 9.22ರ ಹೊತ್ತಿಗೆ ಅಭಿನಂದನ್ ಬಂದಾಗ ಜನ ಹರ್ಷೋದ್ಗಾರ ಮುಗಿಲು ಮುಟ್ಟಿತು.

 

Offers

Want to Add your Offers, contact Naadle at 7090787344 or Email us at info@naadle.com