ಟಕಿಲ ಟಕಿಲ ಎಂದು ಹೊಸ ವರ್ಷಕ್ಕೆ ಸದ್ದು ಮಾಡುತ್ತಿರುವ ಇಲ್ಲ್ ಒಕ್ಕೆಲ್ ಸಿನಿಮಾದ ತಪ್ಪಗೊಂಚ್ಚಿ ಹಾಡು..!!

Share This:

ಹೊಸ ವರುಷಕ್ಕೆ ಒಂದುಕಡೆ ಜನರನ್ನು ಹುಚ್ಚೆದ್ದು ಕುಣಿಸುತ್ತಿದ್ದೆ ಟಕಿಲ ಟಕಿಲ ಹಾಡು ಮತ್ತೊಂದು ಕಡೆ ಮೈ ಮನಕ್ಕೆ ರೋಮಾಂಚನ ನೀಡುತ್ತಿದೆ ಊರುಗು ರಂಗ್ ಕೊರ್ಪಿ ಚಕೋರ ಹಾಡು. ಇಲ್ಲ್ ಒಕ್ಕೆಲ್ ಸಿನಿಮಾದ ಈ ಎರಡು ಹಾಡುಗಳು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಬಿಡುಗಡೆಯಾಗಿದ್ದು. ಅತಿಹೆಚ್ಚು ಜನ ಬಿಡುಗಡೆಯಾದೆ ಕೆಲವೇ ಗಂಟೆಗಳಲ್ಲಿ ವೀಕ್ಷಿಸಿದ್ದಾರೆ ಮತ್ತು ಕೋಸ್ಟಲ್ ವುಡ್ ನಲ್ಲಿ ಈ ಹಾಡುಗಳು ಹೊಸ ಸಂಚಲನವನ್ನೇ ಮೂಡಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ವ್ಯೂ ಪಡೆದು ಮುನ್ನುಗ್ಗುತಿದೆ. takila takila yendu hosa varshakke saddu maduttiruva illlokkel cinemada tappagocchi haadu-naadle

ಡಿಸೆಂಬರ್ 29 ರಂದು ಪಣಂಬೂರ್ ಬೀಚ್ ಫೆಸ್ಟಿವಲ್ನಲ್ಲಿ ಇಲ್ಲ್ ಒಕ್ಕೆಲ್ ತುಳು ಸಿನಿಮಾದ ಟಕಿಲ ಟಕಿಲ ಮತ್ತು ಊರುಗು ರಂಗ್ ಕೊರ್ಪಿ ಚಕೋರ ಸಾಂಗ್ ರಿಲೀಸ್ ಆಗಿದ್ದು. ಕಾರ್ಯಕ್ರಮದಲ್ಲಿ ಚಿತ್ರದ ನಿರ್ದೇಶಕರಾದ ಡಾ. ಸುರೇಶ್ ಕೋಟ್ಯಾನ್ ಚಿತ್ರಾಪು, ನಿರ್ಮಾಪಕರಾದ ವಾಸುದೇವ ಯಸ್ ಕೋಟ್ಯಾನ್, ನಟ ವಿಸ್ಮಯ ವಿನಾಯಕ್, ಜಾಸ್ಮಿನ್, ಸಮರ್ಥ್ ಮತ್ತು ಯತೀಶ್ ಬೈಕಂಪಾಡಿ ಉಪಸ್ಥಿತರಿದ್ದರು.

ಈ ಸಿನಿಮಾದ ಊರುಗು ರಂಗ್ ಕೊರ್ಪಿ ಹಾಡನ್ನು ಕಳೆದ ವರ್ಷದ ಪಣಂಬೂರ್ ಬೀಚ್ ಫೆಸ್ಟಿವಲ್ ನ ವಿನ್ನರ್ ರಕ್ಷಿತಾ ಅವರು ಹಾಡಿದ್ದಾರೆ. ಇಲ್ಲ್ ಒಕ್ಕೆಲ್ ಸಿನೆಮಾವು ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡಿ ಎಲ್ಲ ಉದಯೋನ್ಮುಖ ಕಲಾವಿದರು ಮತ್ತು ತಂತ್ರಜ್ಞರನ್ನು ಪ್ರೋತ್ಸಾಹಿಸುತ್ತಿದೆ.
naadle If you like this article, click on the button below