SSLC ಫಲಿತಾಂಶ ಪ್ರಕಟ: ಈ ಬಾರಿಯೂ ಬಾಲಕಿಯರೇ ಮೇಲುಗೈ..!!

sslc palithamsha prakata i bariyu balakiyare melugai-naadle
Share This:

ಮಾರ್ಚ್​/ಏಪ್ರಿಲ್​ನಲ್ಲಿ ನಡೆದಿದ್ದ ಎಸ್​ಎಸ್​ಎಲ್​ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಶೇ. 73.7 ರಷ್ಟು ಫಲಿತಾಂಶ ಬಂದಿದ್ದು, ಈ ವರ್ಷ ಒಟ್ಟು 8 ಲಕ್ಷದ 25 ಸಾವಿರದ 468 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು,ಶೇಕಡಾ 79.59ರಷ್ಟು ಬಾಲಕಿಯರು ಮತ್ತು ಶೇಕಡಾ 68.46ರಷ್ಟು ಬಾಲಕರು ತೇರ್ಗಡೆ ಹೊಂದಿದ್ದಾರೆ. ಎಂದಿನಂತೆ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಇಬ್ಬರು ಬಾಲಕಿಯರು 625ಕ್ಕೆ 625 ಅಂಕ ಗಳಿಸಿ ಹೊಸ ದಾಖಲೆ ಬರೆದಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್‌.ಆರ್.ಉಮಾಶಂಕರ್ ಸುದ್ದಿಗೋಷ್ಠಿಯಲ್ಲಿ ಫಲಿತಾಂಶದ ವಿವರ ಪ್ರಕಟಿಸಿದರು.sslc palithamsha prakata i bariyu balakiyare melugai-naadle

Upcoming and Ongoing events

View More Events

Want to Promote your Event, contact Naadle at 7090787344 or Email us at info@naadle.com

ಆನೇಕಲ್‌ನಸೆಂಟ್‌ ಫಿಲೋಮಿನಾ ಶಾಲೆಯ ಸೃಜನಾ ಡಿ. ಮತ್ತು ಕುಮಟಾದ ನಾಗಾಂಜಲಿ ನಾಯಕ್‌ 625 ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನಪಡೆದಿದ್ದಾರೆ. ಹಾಸನ ಮೊದಲ ಸ್ಥಾನ, ರಾಮನಗರ ದ್ವಿತೀಯ, ಬೆಂಗಳೂರು ಗ್ರಾಮಾಂತರ ಮೂರನೇ ಸ್ಥಾನ, ಉತ್ತರಕನ್ನಡ 4 ನೇ ಸ್ಥಾನ, ಉಡುಪಿ 5 ನೇ ಸ್ಥಾನ, ಚಿಕ್ಕೋಡಿ 6 ನೇ ಸ್ಥಾನ ಪಡೆದಿದೆ ಮತ್ತು ದಕ್ಷಿಣ ಕನ್ನಡ 7 ನೇ ಸ್ಥಾನ ಪಡೆದುಕೊಂಡಿದೆ. ನಾಳೆ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಫಲಿತಾಂಶ ಪ್ರಕಟವಾಗಲಿದೆ ಎಂದು ಅವರು ಹೇಳಿದರು ಮತ್ತು ಫ‌ಲಿತಾಂಶವನ್ನು http://kseeb.kar.nic.in/ ನಲ್ಲಿ ಪಡೆಯಬಹುದಾಗಿದೆ.

 

Offers

Want to Add your Offers, contact Naadle at 7090787344 or Email us at info@naadle.com