Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!

ಶ್ರಾವಣ ಮಾಸದ ಎರಡನೇ ಶುಕ್ರವಾರ ವರಮಹಾಲಕ್ಷ್ಮಿ ವ್ರತ..!!

shravana masada yeradane shukravara varamahalakshmi vrutha-naadle
Share This:

ಶ್ರಾವಣ ಮಾಸದ ಎರಡನೇ ಶುಕ್ರವಾರ ಅಂದರೆ ನಾಳೆ ವರಮಹಾಲಕ್ಷ್ಮಿ ವ್ರತವನ್ನು ಆಚರಿಸಲಾಗುತ್ತದೆ. ಲಕ್ಷ್ಮೀದೇವಿಯನ್ನು ಎಂಟು ರೂಪಗಳ ಸಂಪತ್ತಿಗೆ ಹೋಲಿಕೆ ಮಾಡಲಾಗಿದ್ದು, ಜ್ಞಾನ, ಐಶ್ವರ್ಯ, ಸುಖ, ಆರೋಗ್ಯ, ಧನ, ಧಾನ್ಯ, ಜಯ, ವಿಜಯ ಇವುಗಳನ್ನು ಲಕ್ಷ್ಮೀಯ ಲಕ್ಷಣಗಳೆಂದು ಹೇಳಲಾಗಿದ್ದು ವರಮಹಾಲಕ್ಷ್ಮಿ ವ್ರತವನ್ನಾಚರಿಸಿದರೆ ಜ್ಞಾನ, ಐಶ್ವರ್ಯ, ಸುಖ, ಆರೋಗ್ಯ, ಧನ, ಧಾನ್ಯ, ಜಯ, ವಿಜಯಗಳೆಂಬ ಅಷ್ಟ ಐಶ್ವರ್ಯ ಪ್ರಾಪ್ತಿಯಾಗುತ್ತದೆ ಎಂಬುದು ನಂಬಿಕೆ.shravana masada yeradane shukravara varamahalakshmi vrutha-naadleಭಾರತದ ದಕ್ಷಿಣ ಭಾಗದಲ್ಲಿ ಬಹಳಷ್ಟು ಅದ್ಧೂರಿಯಾಗಿ ಆಚರಿಸುವ ವರಮಹಾಲಕ್ಷ್ಮಿ ಪೂಜೆಯನ್ನು ಉತ್ತರದ ಭಾಗದಲ್ಲಿ ಮಹಾಲಕ್ಷ್ಮಿ ವ್ರತವಿಡುವ ಮೂಲಕ ಆಚರಿಸಲಾಗುತ್ತದೆ. ಆದರೆ ಇವೆರಡೂ ಭಾಗಗಳಲ್ಲಿ ಒಂದೇ ದೇವತೆ ಲಕ್ಷ್ಮಿಯನ್ನು ಕುಟುಂಬದ ಪ್ರಗತಿ ಹಾಗೂ ಸಮೃದ್ಧಿಗಾಗಿ ವಿನಯದಿಂದ ಪೂಜಿಸುತ್ತಾರೆ. ವಿವಾಹಿತ ಮುತ್ತೈದೆಯರು ವರಮಹಾಲಕ್ಷ್ಮಿ ಪೂಜೆ ಮಾಡುತ್ತಾರೆ. ಇನ್ನು ವರ ಎಂದರೆ ದೇವರ ಆಶೀರ್ವಾದ ಎಂದರ್ಥ. ಹೀಗೆ ವರವನ್ನು ನೀಡುವ ದೇವತೆಯ ಹಬ್ಬವನ್ನು ವರಮಹಾಲಕ್ಷ್ಮಿ ಹಬ್ಬ ಎಂದು ಆಚರಿಸಲಾಗುತ್ತದೆ.

Upcoming and Ongoing events

View More Events

Want to Promote your Event, contact Naadle at 7090787344 or Email us at info@naadle.com

ರಾಕ್ಷಸರು ಹಾಗೂ ದೇವತೆಯರು ಅಮೃತ ಪಡೆಯಲು ವಾಸುಕಿಯ ಸಹಾಯದೊಂದಿಗೆ ನಡೆಸಿದ ಸಮುದ್ರ ಮಂಥನದಲ್ಲಿ ಪರಿಶುದ್ಧವಾದ ಲಕ್ಷ್ಮಿ ಶ್ವೇತ ವರ್ಣದಲ್ಲಿ ಉದ್ಭವಿಸುತ್ತಾಳೆ. ಹೀಗಾಗಿ ವರಮಹಾಲಕ್ಷ್ಮಿ ದಿನದಂದು ಲಕ್ಷ್ಮಿಗೆ ಶ್ವೇತವರ್ಣದ ಕೆಂಪು ಅಂಚಿನ ಸೀರೆ ಉಡಿಸುವ ಪದ್ಧತಿಯೂ ಇದೆ. ಇನ್ನು ಲಕ್ಷ್ಮಿ ಮಾತೆ ಶುದ್ಧತೆಯ ಸಂಕೇತವಾಗಿರುವುದರಿಂದ ಅಂದು ಮುಂಜಾನೆ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಮನೆಯನ್ನು ಶುಚಿಗೊಳಿಸಿ, ರಂಗೋಲಿ ಬಿಡಿಸಿ, ಮನೆಯನ್ನು ತಳಿರು ತೋರಣಗಳಿಂದ ಸಿಂಗರಿಸುತ್ತಾರೆ. ಬಳಿಕ ಅಭ್ಯಂಜನ ಮಾಡಿ ಶುಭ್ರ ಬಟ್ಟೆ ಧರಿಸಿ ಮಡಿಯಲ್ಲಿ ನೈವೇದ್ಯ ತಯಾರಿಸುತ್ತಾರೆ. ಒಂದು ಶುದ್ಧವಾದ ಸ್ಥಳದಲ್ಲಿ ಮಂಟಪವನ್ನು ಕಟ್ಟಿ ಅದರ ನಡುವೆ 5 ಬಣ್ಣಗಳಳಿಂದ ಕೂಡಿದ ಎಂಟು ದಳದ ಪದ್ಮವನ್ನು ಬರೆದು ಕಲಶವನ್ನು ಶುದ್ಧಗೊಳಿಸಬೇಕು. ಕಲಶದೊಳಗೆ ನೀರನ್ನು ತುಂಬಿಸಿ, ಅದರೊಳಗೆ ಒಂದು ನಾಣ್ಯ ಹಾಗೂ ಪಂಚಾಮೃತ ಹಾಕಿ ಹೂವುಗಳಿಂದ ಅಲಂಕರಿಸಬೇಕು. ಇದನ್ನು ಗಂಗಾ ಕಲಶ ಎಂದು ಕರೆಯುತ್ತಾರೆ. ಬಳಿಕ ಕಲಶದ ಮೇಲೆ ವೀಳ್ಯದೆಲೆ ಇಟ್ಟು ಅದಕ್ಕೆ ಅರಶಿಣ ಕೊಂಬಿನ ಕಂಕಣ ಹಾಗೂ ಚಿನ್ನದ ಮಾಂಗಲ್ಯ ಕಟ್ಟಿ ಗೆಜ್ಜೆವಸ್ತ್ರದೊಂದಿಗೆ ಅಲಂಕರಿಸಿ ಕಲಶ ಪ್ರತಿಷ್ಟಾಪಿಸಬೇಕು. 12 ಎಳೆಗಳ ಅರಶಿನ ದದಾಳ, 12 ಎಳೆಗಳ ಗೆಜ್ಜೆವಸ್ತ್ರ ಮತ್ತು ವಿವಿಧ ಹೂವು, ಪತ್ರೆ ಹಾಗೂ ಅಕ್ಷತೆಗಳಿಂದ ಲಕ್ಷ್ಮೀಯನ್ನು ಪೂಜಿಸಬೇಕು. ಅಂಗಪೂಜೆ, ಗ್ರಂಥಿ ಪೂಜೆ, ಕುಸುಮ ಪೂಜೆ, ಪತ್ರ ಪೂಜೆ, ಅಷ್ಟೋತ್ತರ ಶತನಾಮ ಪೂಜೆ ಹಾಗೂ ಪಂಚಾಮೃತಾಭಿಚಷೇಕ ಮಾಡುವುದರಿಂದ ಲಕ್ಷ್ಮೀ ಸಂತುಷ್ಳಾಗಿ ಬೇಡಿದ ವರ ನೀಡುತ್ತಾಳೆ.shravana masada yeradane shukravara varamahalakshmi vrutha-naadleಹಿಂದೂ ಧರ್ಮದ ಅತ್ಯಂತ ಶುಭ ವ್ರತಗಳಲ್ಲಿ ಒಂದಾದ ವರಮಹಾಲಕ್ಷ್ಮೀ ವ್ರತವನ್ನು ಶುಕ್ರವಾರದಂದು ಶ್ರಾವಣ ಮಾಸದಲ್ಲಿ ಹುಣ್ಣಿಮೆಗೂ ಮೊದಲು ಆಚರಣೆ ಮಾಡಲಾಗುತ್ತದೆ. ವರಮಹಾಲಕ್ಷ್ಮೀ ಪೂಜೆ ಮಾಡಲು ಬೆಳಗ್ಗೆ 5:51 ರಿಂದ 07: 29, ಬೆಳಗ್ಗೆ 9: 08 ರಿಂದ 10:46, ಮಧ್ಯಾಹ್ನ 3:41 ರಿಂದ ಸಂಜೆ 5:20, ಸಂಜೆ 5: 20 ರಿಂದ ಸಂಜೆ 6:58 ರವರೆಗೆ ಅತ್ಯಂತ ಶುಭ ಸಮಯವಾಗಿದ್ದು, ಮಧ್ಯಾಹ್ನ 02:03 ರಿಂದ 3:41ರವರೆಗೆ ಸಹ ಒಳ್ಳೆಯ ಸಮಯವಾಗಿದೆ.

Offers

Want to Add your Offers, contact Naadle at 7090787344 or Email us at info@naadle.com