ಸದೃಢ ದೇಶದ ನಿರ್ಮಾಣಕ್ಕಾಗಿ ಮತ ಚಲಾಯಿಸೋಣ..!!

sdruda deshada nirmanakkagi mata chalahisona-naadle
Share This:

ನಮ್ಮ  ಒಂದು ಮತ ದೇಶದ ಭವಿಷ್ಯವನ್ನು ಬದಲಿಸಬಲ್ಲದು. ಮತದಾನದ ಬಗ್ಗೆ ನಿರ್ಲಕ್ಷ್ಯ ಮಾಡಿದರೆ ಮುಂದೆ ನಾವು ಪಶ್ಚಾತ್ತಾಪ ಪಡಬೇಕಾಗುತ್ತದೆ. ನಮ್ಮನ್ನು ಆಳುವ ನಾಯಕ ಹೇಗಿರಬೇಕು ಎಂದರೆ ಆತ, ನಮ್ಮ ಸಮಸ್ಯೆಗಳಿಗೆ ಸ್ಪಂದಿಸಿ, ನಮ್ಮ ಕ್ಷೇತ್ರದ, ರಾಜ್ಯದ, ದೇಶದ ಅಭಿವೃದ್ಧಿಗೆ ಟೊಂಕಕಟ್ಟಿ ನಿಲ್ಲುವವನಾಗಿರಬೇಕು. ನಮ್ಮ ಒಂದು ಮತ ದೇಶದ ಭವಿಷ್ಯವನ್ನು ಬದಲಿಸಬಲ್ಲದು. ಮತದಾನದ ಬಗ್ಗೆ ನಿರ್ಲಕ್ಷ್ಯ ಮಾಡಿದರೆ ಮುಂದೆ ನಾವು ಪಶ್ಚಾತ್ತಾಪ ಪಡಬೇಕಾಗುತ್ತದೆ. ನಮ್ಮನ್ನು ಆಳುವ ನಾಯಕ ಹೇಗಿರಬೇಕು ಎಂದರೆ ಆತ, ನಮ್ಮ ಸಮಸ್ಯೆಗಳಿಗೆ ಸ್ಪಂದಿಸಿ, ನಮ್ಮ ಕ್ಷೇತ್ರದ, ರಾಜ್ಯದ, ದೇಶದ ಅಭಿವೃದ್ಧಿಗೆ ಟೊಂಕಕಟ್ಟಿ ನಿಲ್ಲುವವನಾಗಿರಬೇಕು. ಮೊದಲ ಹಂತದಲ್ಲಿ 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಈ ಬಾರಿಯ ಚುನಾವಣೆಯಲ್ಲಿ ಮೊದಲ ಬಾರಿಗೆ ಹಕ್ಕು ಚಲಾವಣೆ ಮಾಡುವವರ ಸಂಖ್ಯೆಯೂ ಸಾಕಷ್ಟಿದೆ. sdruda deshada nirmanakkagi mata chalahisona-naadle

Upcoming and Ongoing events

View More Events

Want to Promote your Event, contact Naadle at 7090787344 or Email us at info@naadle.com

ಎ. 18ರಂದು ಬೆಳಗ್ಗೆ 7 ಗಂಟೆಗೆ ಮತದಾನ ಆರಂಭಗೊಳ್ಳಲಿದೆ. ಮತದಾರ ಯಾವುದೇ ಗೊಂದಲಗಳಿಲ್ಲದೆ ವಿದ್ಯುನ್ಮಾನ ಮತದಾನ ಯಂತ್ರ (ಇವಿಎಂ) ಮತ್ತು ವಿವಿಪ್ಯಾಟ್‌ ಬಳಸಿ ನಿರಾಳವಾಗಿ ಮತ ಚಲಾಯಿಸಬಹುದು, ಎಪಿಕ್‌ ಕಾರ್ಡ್‌ ಇಲ್ಲದಿದ್ದಲ್ಲಿ ಯಾವುದನ್ನು ಗುರುತು ದಾಖಲೆಯಾಗಿ ಬಳಸಬಹುದು ಎಂಬುದರ ಬಗ್ಗೆ ಚುನಾವಣ ಆಯೋಗ ಆವಶ್ಯಕ ಮಾಹಿತಿ ನೀಡಿದೆ. ಮತದಾರರ ಫೋಟೋ ಗುರುತಿನ ಚೀಟಿ ಮತ್ತು ಮತದಾನದ ಚೀಟಿಯನ್ನು ಸಿದ್ಧವಾಗಿಟ್ಟುಕೊಂಡು ಸರತಿ ಸಾಲಿನಲ್ಲಿ ನಿಂತುಕೊಳ್ಳಬೇಕು. ಮತಗಟ್ಟೆಯ ಒಂದನೇ ಅಧಿಕಾರಿ ಮತದಾರರ ಪಟ್ಟಿಯಲ್ಲಿ ಮತದಾರನ ಹೆಸರನ್ನು ಮತ್ತು ಗುರುತಿನ ಚೀಟಿಯನ್ನು ಪರಿಶೀಲಿಸುತ್ತಾರೆ. 2ನೇ ಮತಗಟ್ಟೆ ಅಧಿಕಾರಿ ನಿಗದಿತ ಬೆರಳಿಗೆ ಶಾಯಿಯ ಗುರುತು ಹಾಕುತ್ತಾರೆ, ಮತದಾನದ ಚೀಟಿ ನೀಡಿ ಸಹಿ ಪಡೆದುಕೊಳ್ಳುತ್ತಾರೆ. 3ನೇ ಮತಗಟ್ಟೆ ಅಧಿಕಾರಿ 3 ಮತದಾನದ ಚೀಟಿ ಪಡೆದು ಶಾಯಿ ಹಾಕಿರುವ ಬೆರಳನ್ನು ಪರಿಶೀಲಿಸುತ್ತಾರೆ. ಮತಗಟ್ಟೆಯ ಅಧ್ಯಕ್ಷಾಧಿಕಾರಿಯು ಮತದಾನದ ಸ್ಥಳಕ್ಕೆ ಹೋಗಿ ಎಂದು ಹೇಳಿದಾಗ ಅಲ್ಲಿಗೆ ತೆರಳಿ ಮತದಾನ ಮಾಡುವುದಕ್ಕೆ ಯಂತ್ರ ಸಿದ್ಧವಾಗಿರುವುದನ್ನು ಸೂಚಿಸುವ ಹಸುರು ದೀಪ ಉರಿಯುತ್ತಿದೆಯೇ ಎಂದು ನೋಡಬೇಕು. ಆಯ್ಕೆ ಮಾಡಿಕೊಂಡ ಅಭ್ಯರ್ಥಿಯ ಹೆಸರು- ಚಿಹ್ನೆಯ ಎದುರು ಇರುವ ಕೆಂಪು ದೀಪ ಉರಿಯುತ್ತದೆ. ಬ್ಯಾಲೆಟ್‌ ಯೂನಿಟ್‌ನಲ್ಲಿ ಮತದಾರ ತನ್ನ ಆಯ್ಕೆಯ ಅಭ್ಯರ್ಥಿಯ ಹೆಸರು/ ಚಿಹ್ನೆಯ ಎದುರು ಇರುವ ನೀಲಿ ಗುಂಡಿಯನ್ನು ಒತ್ತಬೇಕು. ಆಯ್ಕೆ ಮಾಡಿಕೊಂಡ ಅಭ್ಯರ್ಥಿಯ ಕ್ರಮಸಂಖ್ಯೆ, ಹೆಸರು ಮತ್ತು ಚಿಹ್ನೆಯನ್ನು ಒಳಗೊಂಡಿರುವ ಬ್ಯಾಲೆಟ್‌ ಚೀಟಿಯನ್ನು ವಿವಿಪ್ಯಾಟ್‌ ಮುದ್ರಣ ಯಂತ್ರವು ಮುದ್ರಿಸಿ ಕೊಡುತ್ತದೆ. ಬ್ಯಾಲೆಟ್‌ ಚೀಟಿಯು ಏಳು ಸೆಕೆಂಡ್‌ಗಳವರೆಗೆ ಕಾಣಿಸುತ್ತದೆ. ಅನಂತರ ಅದು ಹರಿದುಕೊಂಡು ಮುದ್ರಣ ಯಂತ್ರದ ಡಬ್ಬದೊಳಗೆ ಬೀಳುತ್ತದೆ. ಆಗ ಬೀಪ್‌ ಶಬ್ದ ಕೇಳಿಸುತ್ತದೆ.sdruda deshada nirmanakkagi mata chalahisona-naadleಮತದಾನ ಮಾಡುವುದು ನಮ್ಮ ಅಸ್ತಿತ್ವದ ಪ್ರತೀಕ. ಈ ಮೂಲಕ ಒಬ್ಬ ಒಳ್ಳೆಯ ಅಭ್ಯರ್ಥಿ ಚುನಾಯಿತನಾದರೆ ದೇಶದ ಅಸ್ತಿತ್ವವೂ ಉಳಿದಂತೆ. ಈ ಮತದಾನದಲ್ಲಿ ನಮ್ಮ ಅಸ್ತಿತ್ವದ ಜೊತೆಗೆ ದೇಶದ ಅಸ್ತಿತ್ವವೂ ಅಡಗಿದೆ. ಇದರಿಂದ ದೇಶವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯುವಲ್ಲಿ ಸಹಕರಿಸಿದಂತಾಗುತ್ತದೆ. ಅಭಿವೃದ್ಧಿಯನ್ನು ಮಾಡುವ ಮನಸ್ಸುಳ್ಳ ಉತ್ತಮ ನಾಯಕ‌ರನ್ನು ಆರಿಸಲು ಮತ ಹಾಕಬೇಕು. ನಮ್ಮ ಮತವನ್ನು ಚಲಾಯಿಸಿ ದೇಶದ ಅಭಿವೃದ್ಧಿಗೆ ಸಹಕರಿಸೋಣ.

 

Offers

Want to Add your Offers, contact Naadle at 7090787344 or Email us at info@naadle.com