ಸರಣಿ ಗೆದ್ದು ಇತಿಹಾಸ ನಿರ್ಮಿಸಿದ ಭಾರತೀಯ ವನಿತೆಯರು..!!

sarani geddu ithihasa nirmisida bharatha da vanitheyaru-naadle
Share This:

ಭಾರತದ ಮಹಿಳೆಯರ ಕ್ರಿಕೆಟ್ ತಂಡ ಪುರುಷರ ತಂಡದಂತೆ ಕಿವೀಸ್ ನೆಲದಲ್ಲಿ ಸರಣಿ ಗೆದ್ದ ಸಾಹಸ ಮಾಡಿದೆ. ನ್ಯೂಜಿಲ್ಯಾಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಎಂಟು ವಿಕೆಟ್ ಗಳ ಭರ್ಜರಿ ಜಯ ಸಾಧಸಿದೆ.sarani geddu ithihasa nirmisida bharatha da vanitheyaru-naadle

Upcoming and Ongoing events

View More Events

Want to Promote your Event, contact Naadle at 7090787344 or Email us at info@naadle.com

ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ ಮಿಥಾಲಿ ರಾಜ್ ನೇತೃತ್ವದ ಭಾರತೀಯ ತಂಡ ನ್ಯೂಜಿಲ್ಯಾಂಡ್ ತಂಡವನ್ನು 161 ರನ್ ಗಳಿಗೆ ಆಲ್ ಔಟ್ ಮಾಡಿತು. ಕಿವೀಸ್ ನಾಯಕಿ ಆಮಿ ಸ್ಯಾಟ್ಟರ್ ವೇಟ್ 71 ರನ್ ಗಳಿಸಿ ತಂಡದ ಪರ ಗರಿಷ್ಠ ರನ್ ಗಳಿಸಿದರು. ಬೇರೆ ಯಾವುದೇ ಅಟಗಾರರು ಬೌಲರ್ ಗಳ ಎದುರು ಕ್ರೀಸ್ ಕಚ್ಚಿ ನಿಲ್ಲಲು ಪರದಾಡಿದರು. ಭಾರತದ ಪರ ಅನುಭವಿ ಬೌಲರ್ ಜೂಲನ್ ಗೋಸ್ವಾಮಿ ಮೂರು ವಿಕೆಟ್ ಪಡೆದರೆ, ಏಕ್ತಾ ಬಿಶ್ಟ್, ದೀಪ್ತಿ ಶರ್ಮಾ, ಪೂನಂ ಯಾದವ್ ತಲಾ ಎರಡು ವಿಕೆಟ್ ಪಡೆದರು.sarani geddu ithihasa nirmisida bharatha da vanitheyaru-naadle

ಬೇ ಓವೆಲ್ ಮೈದಾನದಲ್ಲಿ ಮಂಗಳವಾರ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡ, ಸ್ಪೋಟಕ ಬ್ಯಾಟುಗಾರ್ತಿ ಸ್ಮೃತಿ ಮಂದಾನ (90*ರನ್, 83 ಎಸೆತ, 13 ಬೌಂಡರಿ, 1 ಸಿಕ್ಸರ್) ಹಾಗೂ ನಾಯಕಿ ಮಿಥಾಲಿ ರಾಜ್ (63 ರನ್, 111 ಎಸೆತ, 4 ಬೌಂಡರಿ, 2 ಸಿಕ್ಸರ್) ಜೋಡಿಯ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಆತಿಥೇಯ ನ್ಯೂಜಿಲೆಂಡ್ ವಿರುದ್ಧ 2ನೇ ಏಕದಿನ ಪಂದ್ಯದಲ್ಲಿ 8 ವಿಕೆಟ್​ಗಳಿಂದ ಜಯ ದಾಖಲಿಸಿತು. ನೂತನ ಕೋಚ್ ಡಬ್ಲ್ಯುವಿ ರಾಮನ್ ಮಾರ್ಗದರ್ಶನದ ಮೊದಲ ಸರಣಿಯಲ್ಲೇ ಮಿಥಾಲಿ ಪಡೆ ಯಶ ಸಾಧಿಸಿದೆ. ಜತೆಗೆ 24 ವರ್ಷಗಳ ಬಳಿಕ ನ್ಯೂಜಿಲೆಂಡ್​ನಲ್ಲಿ ಏಕದಿನ ಸರಣಿ ಗೆದ್ದುಕೊಂಡಿತು.

 

Offers

Want to Add your Offers, contact Naadle at 7090787344 or Email us at info@naadle.com