ಸೇನೆಗೆ ಸಲಾಂ, ಉಗ್ರರ ತಾಣ ನೆಲಸಮಗೊಳಿಸಿದ ಮಿರಾಜ್..!!

salm senege ugrara taanavannu nelesamagolisida miraj-naadle
Share This:

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್​ಪಿಎಫ್​ನ ಯೋಧರ ಮೇಲೆ ಉಗ್ರನೊಬ್ಬ ನಡೆಸಿದ ಆತ್ಮಾಹುತಿ ದಾಳಿಯಲ್ಲಿ 40 ಯೋಧರು ಹುತಾತ್ಮರಾದ ನಂತರದಲ್ಲಿ ಭಾರತ ಪಾಕಿಸ್ತಾನದ ವಿರುದ್ದ ಪ್ರತೀಕಾರ ತೀರಿಸಿಕೊಳ್ಳಲು ನಿರ್ಧರಿಸಿತ್ತು. ಸಮಯಾವಕಾಶಕ್ಕಾಗಿ ಕಾಯುತ್ತಿತ್ತು. ಆ ಸಮಯ ಸೋಮವಾರ ತಡರಾತ್ರಿ 3.30ಕ್ಕೆ ಒದಗಿ ಬಂದಿತು. ಭಾರತೀಯ ವಾಯುಪಡೆಯ 12 ‘ಮಿರಾಜ್​-2000’ ಯುದ್ಧ ವಿಮಾನಗಳು ಸದ್ದಿಲ್ಲದಂತೆ ಹಾರಾಟ ಕೈಗೊಂಡು ಕ್ಷಣಾರ್ಧದಲ್ಲಿ ಗಡಿನಿಯಂತ್ರಣ ರೇಖೆ ತಲುಪಿ, ಅದನ್ನು ದಾಟಿ ಪಾಕಿಸ್ತಾನದ ಖೈಬರ್​ ಪಖ್ತಾನ್ವಾವರೆಗೂ ಹೋಗಿ ಅಲ್ಲಿದ್ದ ಉಗ್ರರ ಲಾಂಚ್​ ಪ್ಯಾಡ್​ಗಳು, ನಿಯಂತ್ರಣ ಕೇಂದ್ರಗಳು ಸೇರಿ ಹಲವು ಕಟ್ಟಡಗಳನ್ನು ಧ್ವಂಸಗೊಳಿಸಿ ಸ್ವದೇಶಕ್ಕೆ ಮರಳಿದವು.

Upcoming and Ongoing events

View More Events

Want to Promote your Event, contact Naadle at 7090787344 or Email us at [email protected]

ಜೆಇಎಂ, ಹಿಜ್ಬುಲ್​ ಮುಜಾಹಿದ್ದೀನ್​ ಮತ್ತು ಲಷ್ಕರ್​ ಎ ತೊಯ್ಬಾ ಸೇರಿ ಎಲ್ಲ ಉಗ್ರ ಸಂಘಟನೆಗಳ ನೆಲೆಗಳ ಮೇಲೆ ಲೇಸರ್​ ನಿಯಂತ್ರಿತ 1 ಸಾವಿರ ಕೆ.ಜಿ. ಬಾಂಬ್​ಗಳನ್ನು ಸಿಡಿಸಿದ ಮಿರಾಜ್​ ವಿಮಾನಗಳು ಸ್ವದೇಶಕ್ಕೆ ಮರಳಿದವು. ಕೇವಲ 21 ನಿಮಿಷಗಳಲ್ಲಿ ಕಾರ್ಯಾಚರಣೆ ಪೂರ್ಣಗೊಂಡಿತು. ಗಡಿನಿಯಂತ್ರಣ ರೇಖೆ ಬಳಿಯ ಬಾಳಾಕೋಟ್​, ಚಾಕೋತಿ ಮತ್ತು ಮುಜಾಫರಾಬಾದ್​ಗಳು ಉಗ್ರರ ಲಾಂಚ್​ ಪ್ಯಾಡ್​ಗಳಾಗಿವೆ. ಇದೀಗ ಈ ಎಲ್ಲ ನೆಲೆಗಳು ಸಂಪೂರ್ಣ ಧ್ವಂಸಗೊಂಡಿವೆ.salm senege ugrara taanavannu nelesamagolisida miraj-naadleಇಂದು ಮುಂಜಾನೆ ಪಾಕಿಸ್ತಾನದ ಎಲ್ ಒಸಿಯೊಳಗೆ ಭಾರತೀಯ ಸೇನೆ ನುಗ್ಗಿ ಬರೋಬ್ಬರಿ ಒಂದು ಸಾವಿರ ಕೆಜಿ ತೂಕದ ಬಾಂಬ್ ದಾಳಿ ನಡೆಸಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಎಲ್ ಒಸಿ ಬಳಿ ಅಡಗಿದ್ದ 200-300 ಉಗ್ರರು ಬಲಿಯಾಗಿದ್ದಾರೆಂದು ತಿಳಿದು ಬಂದಿದೆ. ಪಾಕಿಸ್ತಾನದ 24 ಕಿಲೋ ಮೀಟರ್ ಒಳಗೆ ನುಗ್ಗಿ ಈ ಏರ್ ಸರ್ಜಿಕಲ್ ಸ್ಟ್ರೈಕ್ ನಡೆಸಲಾಗಿದೆ. ಪುಲ್ವಾಮಾದಲ್ಲಿ 40 ಸಿ ಆರ್ ಪಿ ಎಫ್ ಯೋಧರನ್ನು ಉಗ್ರರು ಹತ್ಯೆಗೈದ ಎರಡು ವಾರಗಳ ಬಳಿಕ ಭಾರತ ದಾಳಿ ನಡೆಸುವ ಮೂಲಕ ಪ್ರತೀಕಾರ ತೀರಿಸಿಕೊಂಡಿದೆ.

ಮಿರಾಜ್​ 2000 ಯುದ್ಧ ವಿಮಾನಗಳು ಫ್ರಾನ್ಸ್​​ನ ಡಸಾಲ್ಟ್​ ಏವಿಯೇಷನ್​ ನಿರ್ಮಿಸಿರುವ ಯುದ್ಧವಿಮಾನಗಳು. ಡಸಾಲ್ಟ್​ ಸಂಸ್ಥೆಯ ಮನವಿ ಮೇರೆಗೆ ಹಿಂದೂಸ್ಥಾನ್​ ಏರೋನಾಟಿಕ್ಸ್​ ಲಿಮಿಟೆಡ್​ (ಎಚ್​ಎಎಲ್​) ಈ ವಿಮಾನಗಳನ್ನು ಜೋಡನೆ ಮಾಡಿ, ಭಾರತೀಯ ಸೇನಾಪಡೆಗೆ ನೀಡುತ್ತಿದೆ. ಈ ಯುದ್ಧ ವಿಮಾನಗಳು ಕಾರ್ಗಿಲ್​ ಯುದ್ಧದಲ್ಲೂ ಬಳಕೆಯಾಗಿತ್ತು. ರಷ್ಯಾ ನಿರ್ಮಿತ ಸುಖೋಯ್​ ಮತ್ತು ಮಿಗ್​ ಯುದ್ಧ ವಿಮಾನಗಳು ಇದ್ದ ಹೊರತಾಗಿಯೂ ಭಾರತೀಯ ವಾಯುಪಡೆ ನಿರ್ದಿಷ್ಟವಾದ ಈ ದಾಳಿಯಲ್ಲಿ ಮಿರಾಜ್​ ವಿಮಾನಗಳನ್ನು ಬಳಸಿದ್ದು ಏಕೆ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಈ ಪ್ರಶ್ನೆಗಳಿಗೆಲ್ಲ ಉತ್ತರ ಇಲ್ಲಿದೆ.

ಮಿರಾಜ್​ ಯುದ್ಧವಿಮಾನಗಳು ಭಾರತೀಯ ವಾಯುಪಡೆ ಬಳಸುವ ಅತ್ಯಂತ ಬಲಶಾಲಿ ಹಾಗೂ ನಿಖರವಾಗಿ ದಾಳಿ ಮಾಡಬಲ್ಲ ಸಾಮರ್ಥ್ಯ ಹೊಂದಿರುವ ಯುದ್ಧವಿಮಾನವಾಗಿವೆ. 1985ರಲ್ಲಿ ಈ ಯುದ್ಧ ವಿಮಾನಗಳು ಭಾರತೀಯ ಸೇನಾಪಡೆಯ ಸೇವೆಗೆ ಸೇರ್ಪಡೆಗೊಂಡವು. ಇವುಗಳನ್ನು ಸೇವೆಗೆ ಸೇರ್ಪಡೆಗೊಳಿಸಿಕೊಳ್ಳುವ ಸಂದರ್ಭದಲ್ಲಿ ವಾಯುಪಡೆ ಈ ಯುದ್ಧ ವಿಮಾನಗಳಿಗೆ ವಜ್ರ ಎಂದು ನಾಮಕರಣ ಮಾಡಿತು. ವಜ್ರ ಎಂದರೆ ಕಠಿಣವಾದ, ಯಾವುದಕ್ಕೂ ಜಗ್ಗದ, ಹೆಚ್ಚಿನ ಮೌಲ್ಯ ಹೊಂದಿರುವ ಹಾಗೂ ಸುಳಿವು ಬಿಟ್ಟುಕೊಡದ ರೀತಿಯಲ್ಲಿ ಗಾಜನ್ನು ಅತ್ಯಂತ ಸೂಕ್ಷ್ಮವಾಗಿ ಕತ್ತರಿಸಬಲ್ಲ ವಸ್ತುವಾಗಿದೆ. ಇಂಥದ್ದೇ ಗುಣಗಳನ್ನು ಹೊಂದಿರುವ ಹಿನ್ನೆಲೆಯಲ್ಲಿ ಮಿರಾಜ್​ ಯುದ್ಧ ವಿಮಾನಗಳಿಗೂ ವಜ್ರ ಎಂದು ನಾಮಕರಣ ಮಾಡಲಾಗಿದೆ.salm senege ugrara taanavannu nelesamagolisida miraj-naadleಮಿರಾಜ್​ 2000 ಯುದ್ಧವಿಮಾನಗಳು ಅಂದಾಜು 14.36 ಮೀಟರ್​ ಉದ್ದ ಇವೆ. ಇವುಗಳ ರೆಕ್ಕೆಗಳ ಹರಿವು (ವಿಂಗ್​ ಸ್ಪ್ಯಾನ್​) 9.13 ಮೀಟರ್​ ಆಗಿದೆ. ಕೇವಲ ಇಂಧನ ಇರುವಾಗಿ 7,500 ಕೆ.ಜಿ. ಭಾರವಾಗಿರುವ ಈ ವಿಮಾನಗಳು 17 ಸಾವಿರ ಕೆ.ಜಿ. ಭಾರವಾದ ವಸ್ತುಗಳು ಅಥವಾ ಮದ್ದುಗುಂಡುಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿವೆ ಗರಿಷ್ಠ 2.2 ಮ್ಯಾಕ್​ ವೇಗ (ಗಂಟೆಗೆ 2,336 ಕಿ.ಮೀ. ವೇಗ) ಹೊಂದಿದೆ. ಗರಿಷ್ಠ 17 ಕಿ.ಮೀ. ಎತ್ತರದಲ್ಲಿ (59 ಸಾವಿರ ಅಡಿ) ಸಂಚರಿಸಬಲ್ಲದ್ದಲಾಗಿದೆ. ಬಲಿಷ್ಠವಾದ ರಾಡಾರ್​ನ ಕಣ್ತಪ್ಪಿಸಿ ಸಂಚರಿಸಬಲ್ಲದ್ದಾಗಿದೆ.

ಇದು ಫ್ಲೈ ಬೈ ವೇರ್​ ನಿಯಂತ್ರಣ ಸೌಲಭ್ಯವನ್ನು ಹೊಂದಿದೆ. ಇದರಲ್ಲಿರುವ ಸೆಕ್ಸ್​ಟೆಂಟ್​ ವೆ-130 ಎಚ್​ಯುಡಿ ವಿಮಾನ ಹಾರಾಟ ನಿಯಂತ್ರಣ, ಚಲಿಸುವ ದಿಕ್ಕು, ಗುರಿ ಹಿಡಿಯುವುದು ಮತ್ತು ಸಿಡಿತಲೆಗಳನ್ನು ನಿಖರವಾಗಿ ಗುರಿಯೆಡೆಗೆ ಸಿಡಿಸುವ ಕುರಿತು ನಿಖರ ಮಾಹಿತಿ ನೀಡುತ್ತದೆ. ಲೇಸರ್​ ನಿಯಂತ್ರಿತ ಬಾಂಬ್​ಗಳಲ್ಲದೆ, ಆಕಾಶದಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿಗಳು ಮತ್ತು ಆಕಾಶದಿಂದ ಭೂಮಿಗೆ ಅಪ್ಪಳಿಸುವ ಕ್ಷಿಪಣೆಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಇದಕ್ಕಿದೆ.

 

Offers

Want to Add your Offers, contact Naadle at 7090787344 or Email us at [email protected]