ಪೊಳಲಿಯ ರಾಜರಾಜೇಶ್ವರಿ ದೇವಿಗೆ ವೈಭವದ ಬ್ರಹ್ಮಕಲಶೋತ್ಸವ..!!

Polali Rajarajeshwari devige vaibhavada brahmakalatsava nadeyitu-naadle
Share This:

ಫ‌ಲ್ಗುಣಿ ನದಿಯ ತಟದಲ್ಲಿ ನೆಲೆಯಾಗಿರುವ ಜಗನ್ಮಾತೆ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಿಯ ಸನ್ನಿಧಿಯು ಬುಧವಾರ ಮುಂಜಾನೆ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿ ಯಾಯಿತು. ಒಂದೆಡೆ ತಂತ್ರಿ ವರ್ಗ-ಪುರೋಹಿತರ, ವೈದಿಕರ ಮಂತ್ರೋಚ್ಛಾರ, ಗಂಟೆ ಜಾಗಟೆಗಳ ಮಂಗಳನಾದ ಕೇಳುತ್ತಿದ್ದರೆ.. ಇನ್ನೊಂದೆಡೆ ಚೆಂಡೆ, ಕೊಂಬು ವಾದ್ಯಗಳ ಝೇಂಕಾರ, ಭಕ್ತರ ಜಯಘೋಷ…..ಇದರ ನಡುವೆಯೇ ಶ್ರೀ ರಾಜರಾಜೇಶ್ವರಿ ದೇವಿ ಹಾಗೂ ಪರಿವಾರ ದೇವರ ಸಂಭ್ರಮದ ಬ್ರಹ್ಮಕಲಶಾಭಿಶೇಕ ಮಹೋತ್ಸವ… ಬುಧವಾರ ಮುಂಜಾನೆ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಿ ದೇವಸ್ಥಾನದಲ್ಲಿ ಕಂಡು ಬಂದ ಸನ್ನಿವೇಶವಿದು.Polali Rajarajeshwari devige vaibhavada brahmakalatsava nadeyitu-naadle

Upcoming and Ongoing events

View More Events

Want to Promote your Event, contact Naadle at 7090787344 or Email us at info@naadle.com

40 ವೈದಿಕರು ಮಂಟಪದಿಂದ ಗರ್ಭಗುಡಿಗೆ ಕಲಶ ಸಾಗಾಟ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡರು. 4.55ರ ವೇಳೆಗೆ ರಾಜರಾಜೇಶ್ವರಿ, ದುರ್ಗಾಪರಮೇಶ್ವರಿಗೆ ಕಲಶಾಭಿಷೇಕ ಆರಂಭವಾಯಿತು. ಬಳಿಕ ಪರಿವಾರ ದೇವರಾದ ಶ್ರೀ ಸಿದ್ಧಿವಿನಾಯಕ, ಶ್ರೀ ಸುಬ್ರಹ್ಮಣ್ಯ, ಶ್ರೀ ಭದ್ರಕಾಳಿ ದೇವರಿಗೆ ಕಲಶಾಭಿಷೇಕಗಳು ನೆರವೇರಿತು. ರಾಜರಾಜೇಶ್ವರಿ, ದುರ್ಗಾಪರಮೇಶ್ವರಿಗೆ ತಲಾ 501 ಕಲಶ, ಪರಿವಾರ ದೇವರಿಗೆ ತಲಾ 108 ಕಲಶಗಳಿಂದ ಅಭಿಷೇಕ ನಡೆಸಲಾಯಿತು. ಬಳಿಕ ಪ್ರಧಾನ ಕಲಶವನ್ನು ಮೆರವಣಿಗೆಯಲ್ಲಿ ಕಲಶ ಮಂಟಪದಿಂದ ಗರ್ಭಗಡಿಗೆ ತರಲಾಯಿತು. ಬೆಳಗ್ಗೆ 7.40ರಿಂದ 8.10ರ ಮೀನ ಲಗ್ನದಲ್ಲಿ ಬ್ರಹ್ಮಕಲಶಾಭಿಷೇಕ ಸಂಪನ್ನಗೊಂಡಿತು. ಗರ್ಭಗುಡಿಯಲ್ಲಿ ಬ್ರಹ್ಮಕಲಶ ನಡೆಯುತ್ತಿರುವಾಗ ಆಕಾಶದಲ್ಲಿ ದೇವಳಕ್ಕೆ ಸುತ್ತು ಹಾಕುತ್ತಿದ್ದ ಗರುಡವೊಂದು ಆಸ್ತಿಕ ಭಕ್ತರಲ್ಲಿ ಕುತೂಹಲ ಮೂಡಿಸಿತು.Polali Rajarajeshwari devige vaibhavada brahmakalatsava nadeyitu-naadleಬ್ರಹ್ಮಕಲಶಾಭಿಷೇಕ ಹಿನ್ನೆಲೆಯಲ್ಲಿ ದೇವಸ್ಥಾನವನ್ನು ಹೂವುಗಳಿಂದ ಸುಂದರವಾಗಿ ಅಲಂಕರಿಸಲಾಗಿತ್ತು. ದೇವಸ್ಥಾನದ ಒಳಭಾಗ ಹಾಗೂ ಪ್ರಾಂಗಣದಲ್ಲಿ ಭಕ್ತರು ತುಂಬಿಕೊಂಡಿದ್ದರಿಂದ ಎಲ್‌ಇಡಿ ಪರದೆ ಮೂಲಕ ಅಭಿಷೇಕದ ದೃಶ್ಯಗಳನ್ನು ನೇರ ಪ್ರಸಾರದಲ್ಲಿ ನೋಡಲು ವ್ಯವಸ್ಥೆ ಕಲ್ಪಿಸಲಾಗಿತ್ತು. ಭಕ್ತರು ಎಲ್‌ಇಡಿ ಪರದೆ ಮುಂದೆಯೇ ಭಾವಪರವಶರಾಗಿ ಕೈ ಮುಗಿದು ನಿಂತು ಭಕ್ತಿಯಿಂದ ಬ್ರಹ್ಮಕಲಶಾಭಿಷೇಕ ವೀಕ್ಷಿಸಿದರು. ಬೆಳಗ್ಗೆ ಒಂಬತ್ತೂವರೆಯಿಂದಲೇ ದೇವರ ದರ್ಶನಕ್ಕೆ ಭಕ್ತರು ಸಾಲುಗಟ್ಟಿ ನಿಂತಿದ್ದರು. ಬ್ರಹ್ಮಕಲಶಾಭಿಷೇಕ ಬಳಿಕ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಸರತಿ ಸಾಲಿನಲ್ಲಿ ಸಾಗಿ ಸರ್ವಾಲಂಕೃತಗೊಂಡ ಶೀದೇವಿಯನ್ನು ಕಂಡು ಭಕ್ತಜನ ಪುನೀತರಾದರು.Polali Rajarajeshwari devige vaibhavada brahmakalatsava nadeyitu-naadleಸಂಜೆ 5ಕ್ಕೆ ಮಹಾಪೂಜೆ, ದೊಡ್ಡ ರಂಗಪೂಜೆ, ರಾತ್ರಿ 8ರಿಂದ ಉತ್ಸವ ಬಲಿ, ಚಂದ್ರ ಮಂಡಲ ರಥ, ಬೆಳ್ಳಿ ರಥ, ಸಣ್ಣ ರಥೋತ್ಸವ, ವಸಂತ ಮಂಟಪದಲ್ಲಿ ಪೂಜೆ, ಅಷ್ಟಾವ ಧಾನ ಸೇವೆ, ಪಲ್ಲಕಿ ಉತ್ಸವ, ಮಹಾ ಪೂಜೆ ನಡೆಯಿತು. ರಾತ್ರಿ ಕೊಡಮಣಿತ್ತಾಯ ಮತ್ತು ಅರ್ಕುಳ ಶ್ರೀ ಉಳ್ಳಾಕ್ಲು ಮಗೃಂತಾಯಿ ದೈವಗಳ ನೇಮ ನಡೆದಿದ್ದು, 8 ದಶಕಗಳ ಬಳಿಕ ಪೊಳಲಿಗೆ ಅರ್ಕುಳ ಬೀಡಿನಿಂದ ಭಂಡಾರ ಬಂದು ಶ್ರೀ ಉಳ್ಳಾಕ್ಲು -ಮಗೃಂತಾಯಿ ದೈವಗಳ ನೇಮ ಜರಗಿತು. ಮಾ. 4ರಂದು ಪ್ರಾರಂಭಗೊಂಡಿದ್ದ ಪೊಳಲಿ ಶ್ರೀ ರಾಜರಾಜೇಶ್ವರಿ ದೇಗುಲದ ಪುನಃಪ್ರತಿಷ್ಠೆ, ಅಷ್ಟಬಂಧ, ನೂತನ ಧ್ವಜಸ್ತಂಭ ಪ್ರತಿಷ್ಠಾ ಬ್ರಹ್ಮ ಕಲಶೋತ್ಸವವು ಬುಧವಾರ ಬ್ರಹ್ಮ ಕಲಶಾಭಿಷೇಕದ ಮೂಲಕ ಸಂಪನ್ನ ಗೊಂಡಿದ್ದು, ಮಾ.14ರಂದು ಧ್ವಜಾರೋಹಣಗೊಂಡು ವಾರ್ಷಿಕ ಜಾತ್ರೋತ್ಸವ ಆರಂಭಗೊಳ್ಳಲಿದೆ.

 

Offers

Want to Add your Offers, contact Naadle at 7090787344 or Email us at info@naadle.com