ಪಿಲಿಕುಳ ನಿಸರ್ಗಧಾಮಕ್ಕೆ ಹೊಸ ಅತಿಥಿಗಳ ಆಗಮನ..!!

pilikula nisargadhamakke hosa athitigala agamana-naadle
Share This:

ಮಂಗಳೂರಿನ ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಹೊಸ ಅತಿಥಿಗಳ ಆಗಮನವಾಗಿದೆ. ಆಂಧ್ರಪ್ರದೇಶದ ವಿಶಾಖ ಪಟ್ಟಣದಿಂದ ಎರಡು ಗಂಡು ಮತ್ತು ಎರಡು ಹೆಣ್ಣು ಧೋಲ್ ನಾಯಿಗಳನ್ನು ತರಿಸಿಕೊಳ್ಳಲಾಗಿದೆ. ಧೋಲ್‌ ಅನ್ನು ಕಾಡುನಾಯಿ ಅಥವಾ ಚೆನ್ನೆ ನಾಯಿ ಎಂದು ಕರೆಯಲಾಗುತ್ತದೆ. ಇದನ್ನು ಅಳಿವಿನಂಚಿನಲ್ಲಿರು ಪ್ರಾಣಿಗಳ ವಿಭಾಗಕ್ಕೆ ಸೇರಿಸಲಾಗಿದೆ. ಹಿಂದೆ ಅರಣ್ಯಗಳಲ್ಲಿ ಸಾಮಾನ್ಯವಾಗಿ ಕಾಣಿಸುತ್ತಿದ್ದು ಈಗ ವಿನಾಶದ ಅಂಚಿನಲ್ಲಿವೆ. ಇವುಗಳು ಹಿಂಡಿನಲ್ಲಿ ವಾಸಿಸುತ್ತವೆ. ಹಿಂಡಲ್ಲೇ ಬೇಟೆಯಾಡುತ್ತವೆ. ಅತ್ಯಂತ ಚಾಣಾಕ್ಷ ಬೇಟೆಗಾರ ಎಂದು ಗುರುತಿಸಲಾಗುವ ಇವು ಹಿಂಡಿನ ರಣ ತಂತ್ರದೊಂದಿಗೆ ಜಿಂಕೆ, ಕಡವೆಯಂತಹ ಪ್ರಾಣಿಗಳನ್ನು ಸುಲಭವಾಗಿ ಬೇಟೆಯಾಡುತ್ತವೆ. ಒಂಟಿಯಾಗಿ ಸಿಕ್ಕಿದರೆ ಇವು ಹುಲಿಯನ್ನೂ ಬಿಡುವುದಿಲ್ಲ. ಇದಲ್ಲದೇ ಪಿಲಿಕುಳಕ್ಕೆ 5 ಪೈಂಟೆಡ್ ಕೊಕ್ಕರೆ, ದೊಡ್ಡ ಜಾತಿಯ ಐದು ಅಲೆಕ್ಸ್ ಜಾಡ್ರಿಯನ್ ಗಿಳಿಗಳನ್ನು ತರಿಸಲಾಗಿದೆ. ಪ್ರಾಣಿಗಳ ವಿನಿಮಯ ಯೋಜನೆಯನ್ವಯ ಈ ಪ್ರಾಣಿಗಳನ್ನು ತರಲಾಗಿದ್ದು, ಪಿಲಿಕುಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಹುಲಿಗಳ ಗುಂಪಿನಿಂದ ಎರಡು ಗಂಡು ಹುಲಿಗಳು, ನಾಲ್ಕು ಕಾಡು ಕೋಳಿಗಳು ಮತ್ತು ಒಂದು ಮೊಸಳೆಯನ್ನು ವಿಶಾಖಪಟ್ಟಣಂ ಮೃಗಾಲಯಕ್ಕೆ ನೀಡಲಾಗಿದೆ.pilikula nisargadhamakke hosa athitigala agamana-naadle

Upcoming and Ongoing events

View More Events

Want to Promote your Event, contact Naadle at 7090787344 or Email us at info@naadle.com


ಪ್ರಾಣಿಗಳನ್ನು ಕರೆತಂದು ಒಂದು ವಾರದ ವರೆಗೆ ಅವುಗಳು ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವುದಕ್ಕೆ ಅವಕಾಶ ನೀಡಲಾಗಿದೆ. ಆ ಬಳಿಕವೇ ಸಂದರ್ಶಕರಿಗೆ ಈ ಹೊಸ ಪ್ರಾಣಿಗಳನ್ನು ವೀಕ್ಷಿಸುವ ಅವಕಾಶ ನೀಡಲಾಗುವುದು. ಪಿಲಿಕುಳ ಜೈವಿಕ ಉದ್ಯಾನಕ್ಕೆ ಇನ್ನೂ ಹಲವು ಪ್ರಾಣಿಗಳು ಆಗಮಿಸಲಿವೆ. ಚೆನ್ನೈ ವಂಡಲೂರು ಉದ್ಯಾನವನದಿದಂದ ಕಾಡುಕೋಣಗಳು, ಹೈದರಾಬಾದ್‌ನಿಂದ ಇಗ್ವಾನಾ ಸರೀಸೃಪಗಳು, ಕಾನ್ಪುರ ಮೃಗಾಲಯದಿಂದ ಕತ್ತೆಕಿರುಬ ಗಳನ್ನು ತರಲು ಚಿಂತನೆ ನಡೆಸಲಾಗಿದೆ.
naadle If you like this article, click on the button below

Offers

Want to Add your Offers, contact Naadle at 7090787344 or Email us at info@naadle.com