ಪೆರ್ಡೂರು ಶ್ರೀ ಅನಂತ ಪದ್ಮನಾಭ ಸ್ವಾಮಿಗೆ ಬಾಳೆಹಣ್ಣು ಹರಕೆ..!!

perdoor shree ananthapadmanabha swamy ge balehannu harake..!!-naadle
Share This:

ಉಡುಪಿಯಲ್ಲಿರುವ ಈ ದೇವಸ್ಥಾನವು ಬಹಳ ಪುರಾತನವಾದ ದೇವಾಲಯ. ಇಲ್ಲಿನ ವಿಶೇಷತೆ ಎಂದರೆ ನೀವು ಯಾವುದಾದರೂ ಇಚ್ಛೆಯನ್ನು ದೇವರಲ್ಲಿ ಭಕ್ತಿಯಿಂದ ಬೇಡಿಕೊಂಡು ಅದು ನೆರವೇರಿದರೆ ಬಾಳೆಹಣ್ಣನ್ನು ಅರ್ಪಿಸುವುದಾಗಿ ಹರಕೆ ಹೇಳಬೇಕು. ಆಗ ನಿಮ್ಮ ಕೋರಿಕೆ ಈಡೇರುತ್ತದಂತೆ. ಶ್ರೀ ಅನಂತ ಪದ್ಮನಾಭ ಕ್ಷೇತ್ರವು ಉಡುಪಿ ಜಿಲ್ಲೆಯ ಪೆರ್ಡೂರ್ ಎಂಬ ಹಳ್ಳಿಯಲ್ಲಿದೆ. ಪೆರ್ಡೂರು ಉಡುಪಿಯಿಂದ 20 ಕಿ.ಮೀ ದೂರದಲ್ಲಿದೆ ಮತ್ತು ಹೆಬ್ರಿಯಿಂದ 32 ಕಿ.ಮೀ. ದೂರದಲ್ಲಿದೆ. ಅದರ ಪ್ರಾಚೀನ ದೇವಾಲಯ ಶ್ರೀ ಅನಂತ ಪದ್ಮನಾಭ ಸ್ವಾಮಿ. ಉಡುಪಿಯು ಕರ್ನಾಟಕದ ಸಾಂಸ್ಕೃತಿಕ ಕೇಂದ್ರವಾಗಿದ್ದು, ಐತಿಹಾಸಿಕ ಕೃಷ್ಣ ದೇವಸ್ಥಾನದ ಪ್ರಮುಖ ಯಾತ್ರಾ ಸ್ಥಳವಾಗಿದೆ.perdoor shree ananthapadmanabha swamy ge balehannu harake..!!-naadle

Upcoming and Ongoing events

View More Events

Want to Promote your Event, contact Naadle at 7090787344 or Email us at info@naadle.com


ಗೋಪಾಲಕ ಹಸುಗಳನ್ನು ಮೇಯಿಸುತ್ತಿದ್ದಾಗ ಕಪಿಲೆ ಎನ್ನುವ ಹಸು ಕಾಣೆಯಾಗುತ್ತದೆ. ಆ ಹಸುವನ್ನು ಹುಡುಕಿಕೊಂಡು ಹೋದಾಗ ಅದು ಒಂದು ಹುತ್ತಕ್ಕೆ ಹಾಲೆರೆಯುತ್ತಿರುತ್ತದೆ. ಅದನ್ನು ಕಂಡ ಗೋಪಾಲಕ ಪೇರುಂಡು ಪೇರುಂಡು ಎಂದು ಹೇಳಿದ ಎನ್ನಲಾಗುತ್ತದೆ. ಪೇಡುಂಡು ಎಂದರೆ ತುಳು ಭಾಷೆಯಲ್ಲಿ ಹಾಲು ಇದೆ ಎಂದರ್ಥ. ಹೀಗೆ ಈ ಊರು ಪೆರ್ಡೂರು ಆಗಿದೆ ಎನ್ನಲಾಗುತ್ತದೆ. ಇಲ್ಲಿನ ಈ ಅನಂತ ಪದ್ಮನಾಭ ಸ್ವಾಮಿ ದೇವಾಲಯವು ಸುಮಾರು 8೦೦ ವರ್ಷಗಳ ಇತಿಹಾಸ ಹೊಂದಿದೆ. ಸಂಕ್ರಮಣಕ್ಕೆ ಸಾವಿರಾರು ಭಕ್ತರು ಈ ದೇವಾಲಯಕ್ಕೆ ಬರುತ್ತಾರೆ.perdoor shree ananthapadmanabha swamy ge balehannu harake..!!-naadleದೇವಸ್ಥಾನದಲ್ಲಿ ಪವಿತ್ರವಾದ ಶ್ರೀ ಅನಂತ ಪದ್ಮನಾಭ ಸ್ವಾಮಿ ವಿಗ್ರಹವು 2 ಅಡಿ ಎತ್ತರವಾಗಿದ್ದು, ಶಂಖ ಚಕ್ರ ಮತ್ತು ಅಭಯ ಹಸ್ತವನ್ನು ಹೊಂದಿದ್ದು ಬಹಳ ಆಕರ್ಷಕವಾಗಿದೆ. ನಿಂತಿರು ಭಂಗಿಯಲ್ಲಿ ಈ ವಿಗ್ರಹವಿದೆ. ದೇವಸ್ಥಾನದಲ್ಲಿ ಒಂದು ತೀರ್ಥವಿದೆ. ಇದನ್ನು ಪದ್ಮತೀರ್ಥ ಎನ್ನುತ್ತಾರೆ. ಇಲ್ಲಿಗೆ ಬರುವ ಪ್ರತಿಯೊಬ್ಬ ಭಕ್ತರು ಈ ನೀರಿನ್ನು ಚಿಮುಕಿನಿಸಿ ದೇವರ ದರ್ಶನಕ್ಕೆ ಹೋಗುತ್ತಾರೆ. ಈ ನೀರು ಬಹಳ ಪವಿತ್ರವಾದ ನೀರು. ಈ ದೇವಾಲಯ ಭಕ್ತರು ಬಾಳೆಹಣ್ಣಿನ ಹರಕೆಯನ್ನು ನೀಡುತ್ತಾರೆ. ಭಕ್ತರು ಏನನ್ನಾದರೂ ಕೋರಿಕೊಂಡು ದೇವರಿಗೆ ಬಾಳೆಹಣ್ಣಿನ ಹರಕೆ ನೀಡುವುದಾಗಿ ಹೇಳಿದರೆ ಅವರ ಕೋರಿಕೆ ಈಡೇರುತ್ತಂತೆ. ಹಾಗಾಗಿ ಭಕ್ತರು ತಮ್ಮ ಹರಕೆ ಈಡೇರಿದ ಮೇಲೆ ಬುಟ್ಟಿ ತುಂಬಾ ಬಾಳೆಹಣ್ಣನ್ನು ಈ ದೇವಸ್ಥಾನಕ್ಕೆ ಅರ್ಪಿಸ್ತಾರೆ.

Offers

Want to Add your Offers, contact Naadle at 7090787344 or Email us at info@naadle.com