ಪರಮಶಿವನ ಆರಾಧನೆಯನ್ನು ಅತ್ಯಂತ ಭಕ್ತಿಪೂರ್ಣವಾಗಿ ಮಾಡುವ ವರ್ಷದ ಏಕೈಕ ದಿನವೇ ಈ ಮಹಾಶಿವರಾತ್ರಿ..!!

paramashivana araadhaneyannu atyanta bhaktipoorvakavaagi maduva varshada yekaika dinave shivaraatri-naadle
Share This:

‘ಶಿವ’ ಎಂದರೆ ಮಂಗಳ, ಲೋಕಕ್ಕೆ ಶುಭವನ್ನುಂಟು ಮಾಡುವ, ಶಿವಕರನಾದ ಶಂಕರನ ಧ್ಯಾನ, ಭಜನೆ, ಅರ್ಚನೆ, ಜಾಗರಣೆ, ಉಪವಾಸ, ಚಿಂತನೆ, ಆರಾಧನೆಯ ಉತ್ಸವವೇ ಮಹಾಶಿವರಾತ್ರಿ. ಭಾರತೀಯ ಸನಾತನ ಧರ್ಮಾನುಯಾಯಿಗಳಿಗೆ ಅತ್ಯಂತ ಶ್ರದ್ಧೆಯ ದಿನ ಹಾಗೂ ರಾತ್ರಿಯೇ- ಶಿವರಾತ್ರಿ. ಮಹಾಮಹಿಮನಾದ ಶಿವನ ರಾತ್ರಿ, ಶುಭಕರನಾದ ಮಹೇಶ್ವರನ ಚಿಂತನೆಯನ್ನು ನಡೆಸುವಂಥ ಮಂಗಳಕರವಾದ ರಾತ್ರಿ. ಹೀಗೆ ಸಕಲ ಜಗತ್ತಿನ ಒಳಿತನ್ನು ಬಯಸಿ ಆಚರಿಸುವ ರಾತ್ರಿಯ ಆಚರಣೆ ಇದಾಗಿರುವುದರಿಂದ ಇದನ್ನುಶಿವರಾತ್ರಿ ಎಂದು ಕರೆಯುತ್ತಾರೆ. ಅಂದು ಪೂರ್ಣದಿನ ಮಹೇಶ್ವರನ ಆರಾಧನೆ, ಶಿವನ ಪುಣ್ಯ ಕ್ಷೇತ್ರಗಳ ಸಂದರ್ಶನ, ಭಗವಂತ ಮಹಾಶಿವನ ಧ್ಯಾನ, ಉಪವಾಸ ಇತ್ಯಾದಿಗಳಿಂದ ಕಳೆಯುವುದರಿಂದ ಈ ಶಿವರಾತ್ರಿ ನೈಜಾರ್ಥದಲ್ಲಿ ಮಂಗಳಕರವಾದ ಉತ್ಸವವೆಂದೇ ಖ್ಯಾತವಾಗಿದೆ. ಶ್ರದ್ಧಾವಂತರು, ಶಿವನನ್ನು ಭಜಿಸುವವರು. ಅಂದು ಉಪವಾಸ, ಜಾಗರಣೆ, ಶಿವಧ್ಯಾನ, ಶಿವಕ್ಷೇತ್ರದರ್ಶನ ಮೊದಲಾದ ಧಾರ್ಮಿಕ ಕ್ರಿಯೆಗಳ ಮೂಲಕ ದಿನವನ್ನು ಕಳೆಯುತ್ತಾರೆ.paramashivana araadhaneyannu atyanta bhaktipoorvakavaagi maduva varshada yekaika dinave shivaraatri-naadle

Upcoming and Ongoing events

View More Events

Want to Promote your Event, contact Naadle at 7090787344 or Email us at info@naadle.com

ಮಹಾವಿಷ್ಣುವು ಅಲಂಕಾರ ಪ್ರಿಯನಾದರೆ ಶಿವನು ಅಭಿಷೇಕಪ್ರಿಯ. ಮಂತ್ರಪೂರ್ವಕವಾಗಿ ರುದ್ರಾಭಿಷೇಕ ಮಾಡಿದಾಗ ಸಂತುಷ್ಟನಾಗುವ ಪಶುಪತಿಯು ನಮ್ಮಲ್ಲಿರುವ ಪಶುತ್ವವನ್ನು ದೂರಮಾಡಿ ನಮಗೆ ಮಂಗಳವನ್ನುಂಟು ಮಾಡುತ್ತಾನೆ. ಆದ್ದರಿಂದಲೇ ಅದು ರುದ್ರಾಭಿಷೇಕ. ಜಲಧಾರೆಯಿಂದ ಭಗವಂತನ ಅಭಿಷೇಕವನ್ನು ಮಾಡುವುದು, ಆತನ ಸಂತೃಪ್ತಿಗಾಗಿ ರುದ್ರ ನಮಕ, ಚಮಕಗಳು, ರುದ್ರಸೂಕ್ತ, ಶಿವಸೂಕ್ತ, ಶಿವಪಂಚಾಕ್ಷರೀಮಂತ್ರ, ಶಿವಾಷ್ಟೋತ್ತರ ಶಿವಸಹಸ್ರನಾಮ ಹೀಗೆ ವಿವಿಧ ಮಂತ್ರಗಳ ಪಠಣ ಮಾಡುತ್ತಾ, ಶುದ್ಧ ಸಲಿಲದಿಂದ ಭಗವಂತ ಶಿವನನ್ನು ಅಭಿಷೇಕ ಮಾಡುವಂತಹದ್ದು ಭಗವಂತನಾದ ಶಿವನಿಗೆ ಅಷ್ಟೇ ಪ್ರೀತಿಯನ್ನುಂಟು ಮಾಡುತ್ತದೆ. ಭಕ್ತಿಯಿಂದ ಬೇಡಿದವರಿಗೆ ತಥಾಸ್ತು ಎಂದು ಬೇಡಿದ್ದೆಲ್ಲವನ್ನೂ ಕೊಟ್ಟುಬಿಡುವ ಈತ ಮಾತ್ರ ಸ್ಮಶಾನವಾಸಿ, ಗಜಚರ್ಮಾಂಬರ. ಅರ್ಧನಾರೀಶ್ವರ ಎಂದರೆ ತನ್ನರ್ಧ ದೇಹವನ್ನು ಸತಿಯೊಂದಿಗೆ ಹಂಚಿಕೊಂಡರೂ ಈತ ಮಾತ್ರ ಯೋಗಿಗಳಿಗೆ ಯೋಗಿ. ಶಿವನಿಗೆ ಅತಿ ಪ್ರಿಯವಾದ ಪತ್ರೆ ಬಿಲ್ವ. ಎಷ್ಟೇ ಪುಷ್ಪಗಳನ್ನು ಅರ್ಪಿಸಿದರೂ ಕೊನೆಗೆ ಮೂರು ದಳಗಳುಳ್ಳ ಆ ಬಿಲ್ವ ಪತ್ರೆಯನ್ನಂತು ಶಿವನಿಗೆ ಅರ್ಪಿಸಲೇಬೇಕು. ಏಕೆಂದರೆ ಬಿಲ್ವಪತ್ರೆಯಲ್ಲಿರುವ ಮೂರು ದಳಗಳು ಬ್ರಹ್ಮ, ವಿಷ್ಣು, ಮಹೇಶ್ವರರೆಂಬ ತ್ರಿಮೂರ್ತಿಗಳ ಪ್ರತೀಕ. ಇವು ಶಿವನ ತ್ರಿನೇತ್ರಗಳ ಸಂಕೇತವೂ ಹೌದು. ಸತ್ವಗುಣ, ರಜೋಗುಣ, ತಮೋಗುಣಗಳನ್ನು ಬಿಲ್ವವು ಪ್ರತಿನಿಧಿಸುತ್ತದೆ. ಬಿಲ್ವವು ತ್ರಿಕೋಣಾಕೃತಿಯಲ್ಲಿದೆ ಇದು ಕೂಡ ಮಹೇಶ್ವರನಿಗೆ ಅತ್ಯಂತ ಶ್ರೇಷ್ಠ ಎಂದು ನಂಬಲಾಗಿದೆ. ಹೀಗೆ ಪರಮ ಪವಿತ್ರವಾದ ಬಿಲ್ವಪತ್ರೆಯನ್ನು ಭಕ್ತಿಯಿಂದ ಶಿವನಿಗೆ ಅರ್ಪಿಸುವುದರಿಂದ ಭಕ್ತನು ಹಲವಾರು ಇಷ್ಟಾರ್ಥಗಳನ್ನು ನೆರವೇರಿಸಿಕೊಳ್ಳಬಹುದು.paramashivana araadhaneyannu atyanta bhaktipoorvakavaagi maduva varshada yekaika dinave shivaraatri-naadleಮಹಾಶಿವರಾತ್ರಿ ಆಚರಣೆಗೂ ಹಿನ್ನೆಲೆಯಿದೆ, ಅನೇಕ ಕಥೆಗಳಿವೆ. ಶಿವನು ಪಾರ್ವತಿ ದೇವಿಯನ್ನು ವಿವಾಹವಾದ ದಿನವಾಗಿ ಶಿವರಾತ್ರಿಯೆಂದು ಹೇಳಲಾಗುತ್ತದೆ. ಅಲ್ಲದೆ, ದೇವತೆಗಳು ಹಾಗೂ ಅಸುರರ ನಡುವೆ ಸಮುದ್ರ ಮಂಥನ ನಡೆದು ವಿಷ ಉದ್ಭವವಾದಾಗ, ಅದನ್ನು ಶಿವ ಕುಡಿದ. ವಿಷ ಗಂಟಲೊಳಗಿಂದ ಇಳಿಯದಂತೆ ಪಾರ್ವತಿ ಇಡೀ ರಾತ್ರಿ ತಡೆದಳು ಎನ್ನುತ್ತದೆ ಶಿವಪುರಾಣದ ಇನ್ನೊಂದು ಮಹಿಮೆ. ಜತೆಗೆ, ಭಗೀರಥನ ತಪಸ್ಸಿಗೆ ಮೆಚ್ಚಿ ಇಳೆಗೆ ಇಳಿದು ಬಂದ ಗಂಗೆಯನ್ನು ಶಿವ ತನ್ನ ಜಡೆಯಲ್ಲಿ ತುಂಬಿಸಿಕೊಂಡಿದ್ದ. ಇದರಿಂದ ವಿಚಲಿತನಾದ ಭಗೀರಥ ಗಂಗೆಯನ್ನು ಭೂಮಿಗೆ ಹರಿಸುವಂತೆ ಶಿವನನ್ನು ಪ್ರಾರ್ಥಿಸಿದ. ಆತನ ಭಕ್ತಿಗೆ ಮೆಚ್ಚಿ ಶಿವ ಗಂಗೆಯನ್ನು ಹರಿಯಬಿಟ್ಟಿದ್ದು ಇದೇ ದಿನ ಎನ್ನುತ್ತದೆ ಪುರಾಣ. ಇನ್ನು, ಶಿವನ ಆದಿ ಮತ್ತು ಅಂತ್ಯ ಹುಡುಕಲು ಹೊರಟ ವಿಷ್ಣು ಹಾಗೂ ಬ್ರಹ್ಮನಿಗೆ, ಶಿವರಾತ್ರಿಯಂದು ಶಿವ ಲಿಂಗರೂಪಿಯಾಗಿ ದರ್ಶನ ನೀಡಿದ ಎಂಬುದು ಪ್ರತೀತಿ.

 

Offers

Want to Add your Offers, contact Naadle at 7090787344 or Email us at info@naadle.com