ಪ್ಯಾರಾ ಏಷ್ಯನ್ ಗೇಮ್ಸ್ ಇಂದಿನಿಂದ ಆರಂಭ..!!

para asiad games indininda arambha-naadle
Share This:

ಏಷ್ಯಾಡ್ ಮುಗಿದ ಸುಮಾರು ಒಂದು ತಿಂಗಳ ನಂತರ 3ನೇ ಆವೃತ್ತಿಯ ಪ್ಯಾರಾ ಏಷ್ಯನ್ ಗೇಮ್ಸ್ ಶನಿವಾರ ಇಂಡೋನೇಷ್ಯಾದ ಜಕಾರ್ತದಲ್ಲಿ ಆರಂಭಗೊಳ್ಳಲಿದೆ. ಏಷ್ಯಾಡ್​ನಲ್ಲಿ ಭಾರತ ಸಾರ್ವಕಾಲಿಕ ಗರಿಷ್ಠ ಪದಕ ಮುಡಿಗೇರಿಸಿಕೊಂಡ ಸಾಧನೆಯನ್ನು ಸ್ಪೂರ್ತಿಯಾಗಿರಿಸಿಕೊಂಡು ಪ್ಯಾರಾ ಕ್ರೀಡಾಪಟುಗಳು ಕಣಕ್ಕಿಳಿಯಲಿದ್ದು, ಅಕ್ಟೋಬರ್ 13ರವರೆಗೆ ನಡೆಯಲಿರುವ ಕೂಟದಲ್ಲೂ ಅಂಥದ್ದೇ ದಾಖಲೆ ರಚಿಸುವ ಉತ್ಸಾಹದಲ್ಲಿದ್ದಾರೆ. 2014ರ ಆವೃತ್ತಿಯ ಏಷ್ಯಾಡ್​ನಲ್ಲಿ ಭಾರತ 33 ಪದಕ ಗೆದ್ದಿರುವುದು ಇದುವರೆಗಿನ ಶ್ರೇಷ್ಠ ನಿರ್ವಹಣೆಯಾಗಿದೆ. ಒಟ್ಟಾರೆ 18 ಕ್ರೀಡೆಗಳಲ್ಲಿರುವ 546 ಸ್ಪರ್ಧೆಗಳಲ್ಲಿ 42 ರಾಷ್ಟ್ರಗಳ 2831 ಪ್ಯಾರಾಥ್ಲೀಟ್​ಗಳು ಪದಕಗಳಿಗಾಗಿ ಹೋರಾಡಲಿದ್ದಾರೆ. ಬಲಿಷ್ಠ ತಂಡಗಳಾದ ಚೀನಾ, ದಕ್ಷಿಣ ಕೊರಿಯಾ, ಜಪಾನ್, ಇರಾನ್, ಥಾಯ್ಲೆಂಡ್, ಮಲೇಷ್ಯಾದೊಂದಿಗೆ ಭಾರತ ಪ್ರತಿಸ್ಪರ್ಧೆ ನಡೆಸಲಿದೆ.para asiad games indininda arambha-naadle

Upcoming and Ongoing events

View More Events

Want to Promote your Event, contact Naadle at 7090787344 or Email us at info@naadle.com


ಭಾರತ 13 ಕ್ರೀಡೆಗಳಲ್ಲಿ 193 ಪ್ಯಾರಾಥ್ಲೀಟ್​ಗಳನ್ನು ಕಣಕ್ಕಿಳಿಸುತ್ತಿದೆ. ಇವರೊಂದಿಗೆ 112 ಸಿಬ್ಬಂದಿ ಸೇರಿದಂತೆ ಭಾರತದ ಒಟ್ಟಾರೆ 305 ಸದಸ್ಯರು ಕ್ರೀಡಾಗ್ರಾಮದಲ್ಲಿದ್ದಾರೆ. ಅಥ್ಲೆಟಿಕ್ಸ್, ಆರ್ಚರಿ, ಬ್ಯಾಡ್ಮಿಂಟನ್, ಫೆನ್ಸಿಂಗ್, ಪವರ್ ಲಿಫ್ಟಿಂಗ್, ಈಜು, ಶೂಟಿಂಗ್, ಜುಡೋ, ಟೆನ್​ಪಿನ್ ಬೌಲಿಂಗ್, ಚೆಸ್ ಹಾಗೂ ಬೊಕಿಯಾ ಇಷ್ಟು ಕ್ರೀಡೆಗಳಲ್ಲಿ ಪದಕಗಳ ನಿರೀಕ್ಷೆ ಇದೆ. ಇನ್ನುಳಿದಂತೆ ಕೂಟದಲ್ಲಿ ಗೋಲ್​ಬಾಲ್, ಸಿಟ್ಟಿಂಗ್ ವಾಲಿಬಾಲ್, ವ್ಹೀಲ್​ಚೇರ್ ಬಾಸ್ಕೆಟ್​ಬಾಲ್, ವ್ಹೀಲ್​ಚೇರ್ ಫೆನ್ಸಿಂಗ್, ವ್ಹೀಲ್​ಚೇರ್ ಟೆನಿಸ್ ಕ್ರೀಡೆಗಳಿವೆ. ರಿಯೋ ಪ್ಯಾರಾಲಿಂಪಿಕ್ಸ್ ಸ್ವರ್ಣ ಪದಕ ವಿಜೇತ ಹೈಜಂಪ್ ಪಟು ಮರಿಯಪ್ಪನ್ ತಂಗವೇಲು ಉದ್ಘಾಟನಾ ಸಮಾರಂಭದಲ್ಲಿ ಧ್ವಜಧಾರಿಯಾಗಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.para asiad games indininda arambha-naadleಕರ್ನಾಟಕದಿಂದ ಅಥ್ಲೆಟಿಕ್ಸ್, ಈಜು ಹಾಗೂ ಬ್ಯಾಡ್ಮಿಂಟನ್ ಕ್ರೀಡೆಗಳಲ್ಲಿ ಪ್ಯಾರಾಥ್ಲೀಟ್​ಗಳು ಸ್ಪರ್ಧಿಸಲಿದ್ದಾರೆ. ಇಂಚೋನ್ ಏಷ್ಯಾಡ್​ನ ದಾಖಲೆಯ 6 ಪದಕ ವಿಜೇತ ಈಜುಪಟು ಶರತ್ ಗಾಯಕ್ವಾಡ್, ಮೊಯಿನ್ ಜುನೈದಿ, ನಿರಂಜನ್ ಮುಕುಂದ್, ಪುನೀತ್ ಎನ್, ಶ್ರೀಧರ್, ರೇವತಿ ನಾಯಕ್ ಈಜು ವಿಭಾಗದಲ್ಲಿ ಕಣಕ್ಕಿಲಿಯಲಿದ್ದಾರೆ. ಬ್ಯಾಡ್ಮಿಂಟನ್​ನಲ್ಲಿ ಸುಹಾಸ್ ಲಾಲನ್​ಕೆರೆ ಯತಿರಾಜ್, ಆನಂದ್​ಕುಮಾರ್, ಅಥ್ಲೀಟ್ ಎಚ್ ಎನ್ ಗಿರೀಶ್ ಆಡಲಿದ್ದಾರೆ. ಈಜು ಸ್ಪರ್ಧೆ ಭಾನುವಾರ ಆರಂಭಗೊಳ್ಳಲಿದೆ.
naadle If you like this article, click on the button below

Offers

Want to Add your Offers, contact Naadle at 7090787344 or Email us at info@naadle.com