Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!

ಪಡುಬಿದ್ರಿ, ಹೆಜಮಾಡಿ ಕಡಲತೀರದಲ್ಲಿ ಬೊಳಿಂಜಿರ್ ಮೀನಿನ ಸುಗ್ಗಿ..!!

padubidri hejamadi kadala tiradalli bollenjir minina suggi-naadle
Share This:

ಶ್ರಾವಣ ಮಾಸ ಆರಂಭದೊಂದಿಗೆ ಕಡಲಿಗಿಳಿಯಳುವ ಮೀನುಗಾರರಿಗೆ ಮೀನಿನ ಸುಗ್ಗಿ ಆರಂಭಗೊಳ್ಲುತ್ತದೆ. ಈ ಬಾರಿ ಸಮುದ್ರ ಪೂಜೆ ಬಳಿಕ ಸಮುದ್ರಕ್ಕಿಳಿದ ಮೀನುಗಾರರಿಗೆ ಮೀನಿನ ಸುಗ್ಗಿ ಆರಂಭಗೊಂಡಿದ್ದು,ಬುಧವಾರ ಹೆಜಮಾಡಿ ಕಡಲಿಗಿಳಿದ ಕೈರಂಪಣಿ ಮೀನುಗಾರರಿಗೆ ಬೇಕಾದಷ್ಟು ಬೊಳಿಂಜಿರ್(ಸಿಲ್ವರ್ ಫಿಶ್ ಅಥವಾ ವೈಟ್ ಸಾರ್ಡಿನ್)ಮೀನು ಹೇರಳವಾಗಿ ದೊರಕಿದ್ದು,ಅರ್ಧ ದಿನದೊಳಗೆ ಮೀನಿನ ದರ ಪಾತಾಳಕ್ಕಿಳಿದಿದೆ. ಹೆಜಮಾಡಿ, ಪಡುಬಿದ್ರಿ ಪರಿಸರದಲ್ಲಿ ಬುಧವಾರ ಮೀನುಗಳ ಸುಗ್ಗಿ. ಮೀನುಗಾರರು ಕಡಲಾಳದಿಂದ ಮೀನುಗಳನ್ನು ಹಿಡಿದು ತರುವುದು ಸಾಮಾನ್ಯ. ಆದರೆ ಇಲ್ಲಿ ಮಾತ್ರ ಇದು ತದ್ವಿರುದ್ಧವಾಗಿದೆ. ಕಳೆದೆರಡು ದಿನಗಳಿಂದ ಮೀನುಗಳೇ ಗುಂಪು ಗುಂಪಾಗಿ ತೀರಕ್ಕೆ ಬಂದು ಮೀನುಗಾರರ ಬಲೆಗೆ ಬೀಳುತ್ತಿವೆ. ಬುಧವಾರವಂತೂ ಅವುಗಳ ಪ್ರಮಾಣ ದ್ವಿಗುಣವಾಗಿದೆ.padubidri hejamadi kadala tiradalli bollenjir minina suggi-naadle

Upcoming and Ongoing events

View More Events

Want to Promote your Event, contact Naadle at 7090787344 or Email us at info@naadle.com


ಹೆಜಮಾಡಿಯಿಂದ ಸಸಿಹಿತ್ಲು ಕದಿಕೆ ವರೆಗೂ ಬುಧವಾರ ಸಿಲ್ವರ್‌ಫಿಶ್‌ ಬೇಟೆ ಹೇರಳವಾಗಿದೆ. ಬುಧವಾರ ಎಂದಿನಂತೆ ಕೈರಂಪಣಿ ಹರಡಿದ ಮೂರು ಪ್ರತ್ಯೇಕ ಫಂಡಿನವರಿಗೆ ಬೊಳಿಂಜರ್ ಕೋಟ್ಯಂತರ ಲೆಕ್ಕದಲ್ಲಿ ಬಿದ್ದಿದೆ. ಒಂದೇ ಬಾರಿ ನೀರಿಗೆ ಹಾಕಿದ ಬಲೆಯನ್ನು ಮೇಲೆಳೆಯಲು ಸಂಜೆವರೆಗೂ ಕಾಯಬೇಕಾಯಿತು. ಕೈರಂಪಣಿ ಸದಸ್ಯರಿಗೆ ಬಲೆಯನ್ನು ಮೇಲಕ್ಕೆ ಎಳೆಯಲಾಗದೆ ಸ್ಥಳೀಯರೂ ಕೈಜೋಡಿಸಬೇಕಾಗಿ ಬಂದಿತು. ಮಿತಿಗಿಂತ ಅಧಿಕವಾಗಿ ಬಿದ್ದ ಬೊಳಿಂಜಿರ್ ಮಾರುಕಟ್ಟೆಯಲ್ಲಿ ಏಕಾಏಕಿ ದರ ಕುಸಿತಕ್ಕೆ ಕಾರಣವಾಗಿದೆ. ಬಿಡಿ ಲೆಕ್ಕದಲ್ಲಿ ಮಾರಾಟವಾಗುತ್ತಿದ್ದ ಬೊಳಿಂಜಿರ್‍ ನ ಗೋಣಿ ಲೆಕ್ಕದಲ್ಲಿ ಮಾರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಮುಂಜಾನೆ 100 ಬೊಳಿಂಜಿರ್‍ಗೆ 80ರಿಂದ 100 ರೂ.ದರವಿದ್ದು,ಮಧ್ಯಾಹ್ನ 5ರಿಂದ 10ರೂ.ಗೆ ಇಳಿದಿತ್ತು. ಪರಿಸರದ ಮನೆಗಳಲ್ಲಿ 50 – 60 ಕೆಜಿ ಮೀನು ಸಂಗ್ರಹವಿದೆ. ಸ್ಥಳೀಯರಿಗೂ ಅಪಾರ ಪ್ರಮಾಣದಲ್ಲಿ ಮೀನು ಲಭ್ಯವಾಗಿದ್ದು, ಮಾರಾಟ ಮಾಡಿ 5,000 – 10,000 ರೂ. ವರೆಗೆ ಸಂಪಾದಿಸಿದ್ದಾರೆ. ಬೇಸಗೆಯಲ್ಲಿ 100 ರೂ.ಗೆ 30 ಬೊಳಿಂಜೀರ್‌ ಲಭ್ಯವಾಗುತ್ತಿದ್ದರೆ ಇಂದು ಕೆಜಿಗೆ 10 ರೂ.ಗಳಿಂದ 20 ರೂ.ಗಳಲ್ಲಿ ವಿಕ್ರಯವಾಗಿದೆ. ಪ್ರತಿಯೊಂದು ತಂಡಕ್ಕೆ ತಲಾ ಐದಾರು ಟನ್‌ಗಳಷ್ಟು ಮೀನು ಲಭಿಸಿದೆ. 10 ಲಕ್ಷ ರೂ.ಗೂ ಹೆಚ್ಚಿನ ಮೌಲ್ಯದ ಮೀನು ಲಭಿಸಿದೆ ಎಂದು ಮೀನುಗಾರರು ಹೇಳುತ್ತಾರೆ.padubidri hejamadi kadala tiradalli bollenjir minina suggi-naadleಏನಿದು ಕೈರಂಪಣಿ?: ಸಮುದ್ರಕ್ಕೆ ಅರ್ಧಚಂದ್ರಾಕೃತಿಗೆ ಬಲೆ ಎಸೆದು ತೀರದಿಂದ ಎಳೆಯುವ ಮೀನುಗಾರಿಕೆಯೇ ಕೈರಂಪಣಿ. ಈ ಮೀನುಗಾರಿಕೆಗೆ ಕನಿಷ್ಠ 40 ಜನ ಬೇಕಾಗುತ್ತದೆ. ನಾಡದೋಣಿಯಲ್ಲಿ ಸಾಗಿ ಬೃಹತ್ ಬಲೆಯನ್ನು ಸಮುದ್ರದಲ್ಲಿ ಸ್ವಲ್ಪದೂರಕ್ಕೆ ತೆಗೆದುಕೊಂಡು ಹೋಗಿ ಹಾಕಿದ ಬಳಿಕ ತೀರದಲ್ಲಿ ನಿಂತ ಮೀನುಗಾರರು ಎಳೆಯುತ್ತಾರೆ.padubidri hejamadi kadala tiradalli bollenjir minina suggi-naadleಹೆಜಮಾಡಿಯಲ್ಲಿ ಬೊಳಿಂಜಿರ್ ಸುಗ್ಗಿ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಬಹುಬೇಗ ಪ್ರಸಾರಗೊಂಡು ಸಹಸ್ರಾರು ಮೀನು ಪ್ರಿಯರು ಹೆಜಮಾಡಿಗೆ ಆಗಮಿಸಿ ಬೊಳಿಂಜಿರ್ ಮನೆಗೊಯ್ದರು. ದೂರದ ಪಲಿಮಾರು,ಎಲ್ಲೂರು,ಬೆಳ್ಮಣ್ಣು,ಕಾರ್ಕಳ,ಮೂಲ್ಕಿ,ಕಿನ್ನಿಗೋಳಿ,ಪಡುಬಿದ್ರಿ,ಎರ್ಮಾಳು ಕಡೆಗಳಿಂದಲೂ ಮತ್ಸ್ಯ ಪ್ರಿಯರು ಆಗಮಿಸಿ ಬೊಳಿಂಜಿರ್ ಮನೆಗೊಯ್ದರು. ದೂರದೂರುಗಳಿಂದ ವಾಹನಗಳಲ್ಲಿ ಆಗಮಿಸಿದ ಮತ್ಸ್ಯಪ್ರಿಯರಿಂದ ಹೆಜಮಾಡಿ ಮೀನುಗಾರಿಕಾ ರಸ್ತೆ ಸಂಪೂರ್ಣ ಬ್ಲಾಕ್ ಆಯಿತು. ಮಧ್ಯಾಹ್ನ ಶಾಲಾ ವಾಹನಗಳು ಸುತ್ತುಬಳಸಿ ಕ್ರಮಿಸಬೇಕಾಯಿತು. ಅನೇಕರು ಎರಡು ಮೂರು ಚೀಲದಷ್ಟು ಮೀನು ಮನೆಗೊಯ್ದರು.
SOURCE : http://nammapadubidri.com/
naadle If you like this article, click on the button below

Offers

Want to Add your Offers, contact Naadle at 7090787344 or Email us at info@naadle.com