ಒಂದೇ ಜಗತ್ತು, ಬಣ್ಣಗಳು ಹಲವು, ಬಂತು ಬಂತು ಸಂಭ್ರಮದ ಹೋಳಿ…!!

onde jagathu bannagalu halavu bantu bantu sambramada holi-naadle
Share This:

ಫಾಲ್ಗುಣ ಮಾಸದ ಹುಣ್ಣಿಮೆಯ ದಿನ `ಹೋಳಿ’ ಹಬ್ಬವನ್ನು ಆಚರಿಸುವರು.ಈ ಹಬ್ಬವನ್ನು ಎಲ್ಲಾ ಹಬ್ಬದ ಹಾಗೆ ಪೂಜೆ-ಪುರಸ್ಕಾರ, ಉಪವಾಸದ ಹಾಗೆ ಆಚರಣೆ ಮಾಡುವುದಿಲ್ಲ. ಕುಟುಂಬಸ್ಥರು, ಸ್ನೇಹಿತರು, ಸಂಬಂಧಿಕರು ಎಲ್ಲರೂ ಸೇರಿ ಯಾವುದೇ ಭೇದಭಾವ ಇಲ್ಲದಂತೆ ಒಂದೆಡೆ ಸೇರಿ ಆಚರಣೆ ಮಾಡುವಂತಹ ಹಬ್ಬವೇ ಹೋಳಿ.onde jagathu bannagalu halavu bantu bantu sambramada holi

Upcoming and Ongoing events

View More Events

Want to Promote your Event, contact Naadle at 7090787344 or Email us at info@naadle.com

ಎರಡು ದಿನದಿಂದ ತೊಡಗಿ ಒಂದು ವಾರದವರೆಗೆ ವಿವಿಧ ಅವಧಿಯ ಆಚರಣೆಗಳು ಭಾರತದಾದ್ಯಂತ ಪ್ರಚಲಿತದಲ್ಲಿವೆ. ಹೋಳಿಯ ಮುನ್ನಾದಿನ ರಾತ್ರಿ ಕಾಮದಹನದ ಪ್ರತೀಕವಾಗಿ ಅಗ್ನಿಯನ್ನು ರಚಿಸಿ ಅದರ ಸುತ್ತ ಹಾಡಿಕುಣಿದು ಸಂಭ್ರಮಿಸುವ ಪದ್ಧತಿ ಇದೆ. ಮರುದಿನ ಅಂದರೆ ಫಾಲ್ಗುಣ ಮಾಸ ಶುಕ್ಲಪಕ್ಷದ ಪೌರ್ಣಮಿಯ ದಿನ ಹೋಳಿಯ ಆಚರಣೆ. ಹೇಳಿಕೇಳಿ ಬಣ್ಣಗಳ ಹಬ್ಬ. ವಿವಿಧ ಬಗೆಯ ಬಣ್ಣಗಳನ್ನು ಪರಸ್ಪರ ಎರಚಿಕೊಂಡು ಸಂಭ್ರಮದಿಂದ ಓಡಾಡುವ ಓಕುಳಿಯಾಟವೇ ಅದರ ವಿಶೇಷತೆ.onde jagathu bannagalu halavu bantu bantu sambramada holi-naadleಹೋಳಿ ಹಬ್ಬದ ಬಗ್ಗೆ ಕೆಲವು ಪೌರಾಣಿಕ ದಂತ ಕಥೆಗಳಿವೆ.
1.ವಿಷ್ಣು ಭಕ್ತ ಪ್ರಹ್ಲಾದನಿಗೆ ತನ್ನ ತಂದೆಯಾದ ಹಿರಣ್ಯಕಶಿಪು ಮತ್ತು ಅವನ ಸೋದರಿಯ ಹೋಲಿಕಾ ಎಂಬ ರಾಕ್ಷಸಿಯಿಂದ ಹಿಂಸೆಯಾಗುತ್ತದೆ, ಅವನನ್ನು ಸುಟ್ಟುಹಾಕಲು ಬಯಸುವ ಹೋಲಿಕ ತಾನೆ ದಹನವಾದಳು.
2.ತಾರಕಾಸುರನಿಂದ ಪಿಡಿತರಾದ ದೇವತೆಗಳು, ಶಿವನನ್ನು ತಪಸ್ಸುನಿಂದ ಎಬ್ಬಿಸಲು ಕಾಮದೇವನ ಸಹಾಯ ಪಡೆಯುತ್ತಾರೆ. ಪುಷ್ಪಬಾಣನ ಪ್ರಯೋಗದಿಂದ ವಿಚಲಿದನಾದ ಮಹಾದೇವನು ತನ್ನ ಮೂರನೆಯ ಕಣ್ಣನಿಂದ ಅವನನ್ನು ಸುಟ್ಟು ಹಾಕುತ್ತಾನೆ. ಆಗ ಕಾಮದೇವನ ಪತ್ನಿ ರತಿದೇವಿ ಮತ್ತು ದೇವತೆಗಳು ಕ್ಷಮಾಯಾಚನೆ ಮಾಡಿದಾಗ, ಶಿವನು ಕಾಮನನ್ನು ಬದುಕಿಸಿ ರತಿಗೆ ಶಾಶ್ವತ ಸೌಭಾಗ್ಯವನ್ನು ನೀಡುತ್ತಾನೆ.
3.ಕೃಷ್ಣನಿಗೆ ರಾಕ್ಷಸಿ ಪುತಾನಿಯೂ ವಿಷಪ್ರಾಷನ ಮಾಡಿ ಕಪ್ಪು ವರ್ಣದವನಾದನು. ಅತಿ ಸುಂದರವಾದ ಗೋಪ ಗೋಪಿಯರ ನಡುವೆ ಅವನು ಶ್ಯಾಮವರ್ಣದವನು. ಆವನ ತಾಯಿ, ರಾಧೆಗೆ ಇಷ್ಟವಾದ ಯಾವ ಬಣ್ಣವಾದರು ಕೃಷ್ಣನಿಗೆ ಹಚ್ಚಲು ತಿಳಿಸುತ್ತಾರೆ. ಅಂದಿನಿಂದ ರಂಗಪಂಚಮಿ ಆಡುತ್ತಾರೆ.onde jagathu bannagalu halavu bantu bantu sambramada holi-naadleದುಷ್ಟತನವನ್ನು ಭಸ್ಮಮಾಡುವ ಈ ಹೋಳಿಹಬ್ಬದ ದಿನದಂದು ಕೆಟ್ಟ ಆಲೋಚನೆಗಳನ್ನು ಮನಸ್ಸಿನಿಂದ ಇಂದೇ ಸುಟ್ಟು ಹಾಕಿ, ಹೊಸ ಆಲೋಚನೆ, ಧನಾತ್ಮಕ ಚಿಂತನೆಗಳೊಂದಿಗೆ ಮುಂದಿನ ನಮ್ಮ ಜೀವನವನ್ನು ಹೊಸತನದೊಂದಿಗೆ ಆರಂಭಿಸೋಣ.

 

Offers

Want to Add your Offers, contact Naadle at 7090787344 or Email us at info@naadle.com