ನಿಮ್ಮ ನಾಳೆಗಳು ಸುಂದರವಾಗಿರಲಿ 2019 ; ಹೊಸ ವರ್ಷದ ಶುಭಾಶಯಗಳು..!!

Share This:

ಹಳೆಯ ಕ್ಯಾಲೆಂಡರ್‌ ಗೋಡೆಯಿಂದ ಜಾರುತ್ತಿದ್ದಂತೆ ಹೊಸ ಕ್ಯಾಲೆಂಡರ್‌ ಆ ಜಾಗ ಪಡೆದುಕೊಂಡಿದೆ. ಹೊಸ ವರ್ಷದ ಆರಂಭದ ಸಂಭ್ರಮಕ್ಕೆ ಈಗ ಮಂಗಳೂರಿನಲ್ಲೂ ಮುನ್ನುಡಿ ಬರೆಯಲಾಗುತ್ತಿದೆ. ಹೊಸ ವರ್ಷಾಚರಣೆ ಸಂಭ್ರಮಾಚರಣೆ ಸೋಮವಾರ ರಾತ್ರಿ ಮಂಗಳೂರು, ಉಡುಪಿ ನಗರ ಹಾಗೂ ಹೊರವಲಯದ ವಿವಿಧೆಡೆಗಳಲ್ಲಿ ಭರ್ಜರಿಯಾಗಿಯೇ ನಡೆಯಿತು. ಯುವ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿ ಆಚರಣೆಯಲ್ಲಿ ತೊಡಗಿಸಿಕೊಂಡಿದ್ದರು. ರಾತ್ರಿ 12 ಗಂಟೆ ವೇಳೆಗೆ ಬಾನಂಗಳಕ್ಕೆ ಪಟಾಕಿಗಳನ್ನು ಹಾರಿ ಬಿಡುವ ಮೂಲಕ 2019ನೇ ವರ್ಷವನ್ನು ಬರ ಮಾಡಿಕೊಳ್ಳಲಾಯಿತು.nimma nalegalu sundaravaagirali 2019 hosa varshada shubhashayagalu-naadle

Upcoming and Ongoing events

View More Events

Want to Promote your Event, contact Naadle at 7090787344 or Email us at info@naadle.com


ಮಂಗಳೂರು, ಉಡುಪಿ, ಮಣಿಪಾಲದ ವಿವಿಧ ಹೋಟೆಲ್, ರೆಸ್ಟೋರೆಂಟ್, ಪಬ್, ಸಂಘ ಸಂಸ್ಥೆಗಳಿಂದ ವಿಶೇಷ ಮನೋರಂಜನಾ ಕಾರ್ಯಕ್ರಮ ಆಯೋಜಿಸಲಾಗಿತ್ತು, ಟಿಕೆಟ್ ವ್ಯವಸ್ಥೆ ಮಾಡಿದ್ದರಿಂದ ಎಲ್ಲ ಭರ್ತಿಯಾಗಿದ್ದವು. ಡಾನ್ಸ್, ಡಿಜೆ, ಮ್ಯಾಜಿಕ್ ಶೋ, ವಿವಿಧ ಆಟಗಳು ಆಯೋಜಿಸಲ್ಪಟ್ಟವು. ಗ್ರಾಹಕರಿಗಾಗಿ ವಿಶೇಷ ರಿಯಾಯಿತಿಯನ್ನೂ ನೀಡಲಾಗಿತ್ತು. ಬೀಚ್‌ಗಳಲ್ಲಿಯೂ ಜನರು ಸೇರಿ ಹೊಸ ವರ್ಷದ ಆಚರಣೆಯಲ್ಲಿ ತೊಡಗಿದ್ದರು. ಮಲ್ಪೆ, ಕಾಪು, ಮರವಂತೆ, ಕೋಡಿ ಬೀಚ್‌ನಲ್ಲಿ ಯುವಜನರು ಪಾರ್ಟಿ ಮಾಡಿ ಸಂಭ್ರಮಿಸಿದರು. ಮನೆ, ಫಾರ್ಮ್‌ಹೌಸ್ ಮತ್ತು ರೆಸಾರ್ಟ್‌ಗಳಲ್ಲಿ ಕುಟುಂಬ ಸಮೇತರಾಗಿ ಕೇಕ್ ಕತ್ತರಿಸುವ ಮೂಲಕ ಹೊಸ ವರ್ಷಕ್ಕೆ ಸ್ವಾಗತ ಕೋರಿದರು.nimma nalegalu sundaravaagirali 2019 hosa varshada shubhashayagalu-naadleನಗರದ ಬಹುತೇಕ ಮದ್ಯದಂಗಡಿಗಳಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಿತ್ತು. ಮಣಿಪಾಲ, ಉಡುಪಿ ರಸ್ತೆಗಳಲ್ಲಿ ಯುವಕರು ಬೈಕ್, ಕಾರುಗಳಲ್ಲಿ ಕೇಕೆ ಹಾಕಿ ಸಂಭ್ರಮಿಸಿ ಹೊಸ ವರ್ಷವನ್ನು ಸಂಭ್ರಮಿಸಿದರು. ಗಾಳಿಪಟ ಉತ್ಸವ ಅಂಗವಾಗಿ ಮಲ್ಪೆ ಬೀಚ್‌ನಲ್ಲಿ ಆಯೋಜಿಸಲಾಗಿದ್ದ ಸುಡುಮದ್ದು ಪ್ರದರ್ಶನ ಮತ್ತು ಎಲ್‌ಇಡಿ ಗಾಳಿಪಟ ಪ್ರದರ್ಶನಕ್ಕೆ ಸಾವಿರಾರು ಮಂದಿ ಸಾಕ್ಷಿಯಾದರು.
naadle If you like this article, click on the button below

Offers

Want to Add your Offers, contact Naadle at 7090787344 or Email us at info@naadle.com