Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!

ನವದುರ್ಗೆಯರ ವೈಭವದ ಶೋಭಾಯಾತ್ರೆ..!!

navadurgeyara vaibhavada shobhayatre-naadle
Share This:

ಬೀದಿಯುದ್ದಕ್ಕೂ ಝಗಮಗಿಸುವ ಬೆಳಕು, ಸರ್ವಾಲಂಕೃತ ವಾಹನದಲ್ಲಿ ಸಾಗಿ ಬರುವ ಶಾರದೆ ಸಹಿತ, ಮಂದಸ್ಮಿತ ನವದುರ್ಗೆಯರು, ಗಣಪತಿ ಮೂರ್ತಿ. ತಾಸೆ ಪೆಟ್ಟಿಗೆ ಕುಣಿಯುವ ಹುಲಿ ವೇಷಧಾರಿಗಳ ತಂಡ, ವಿವಿಧ ಕಲಾ ತಂಡಗಳು, ಪೌರಾಣಿಕ ಲೋಕಕ್ಕೆ ಕೊಂಡೊಯ್ಯುವ ಸ್ತಬ್ಧಚಿತ್ರಗಳ ಸಾಲು, ದಾರಿಯುದ್ದಕ್ಕೂ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು. ಈ ಎಲ್ಲಾ ದೃಶ್ಯಗಳು ಕಂಡುಬಂದಿದ್ದು ಬಹು ವಿಶೇಷತೆ ಹಾಗೂ ಅತ್ಯಂತ ವಿಜೃಂಭಣೆಯ ಮೂಲಕ ಜನಾಕರ್ಷಣೆಗೆ ಕಾರಣವಾಗಿರುವ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ “ಮಂಗಳೂರು ದಸರಾ’ ಶೋಭಾಯಾತ್ರೆಯಲ್ಲಿ.

Upcoming and Ongoing events

View More Events

Want to Promote your Event, contact Naadle at 7090787344 or Email us at info@naadle.com

navadurgeyara vaibhavada shobhayatre-naadleಮಂಗಳೂರು ದಸರಾದ ಶೋಭಾಯಾತ್ರೆ ಸರಿಯಾಗಿ ಸಂಜೆ ನಾಲ್ಕು ಗಂಟೆಗೆ ಗಣಪತಿ ದೇವರಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು. ಈ ಬಳಿಕ ಶಾರದಾ ಮಾತೆಯನ್ನು ಸಂಜೆ 6.30ಕ್ಕೆ ಮೆರವಣಿಗೆ ಮೂಲಕ ಕುದ್ರೋಳಿ ಕ್ಷೇತ್ರದಿಂದ ಹೊರಗಡೆ ತರುವ ಮೂಲಕ ಶೋಭಾಯಾತ್ರೆಗೆ ಅಣಿಗೊಳಿಸಲಾಯಿತು. ಶಾರದಾ ಮಂಟಪದಿಂದ ಶಾರದಾ ಮಾತೆಯನ್ನು ಹೊತ್ತುಕೊಂಡು ಬರುವ ವಿಚಾರದಲ್ಲಿಮುಖ್ಯ ಸ್ಥಾನದಲ್ಲಿ ನಿಲ್ಲುತ್ತಿದ್ದ ಮಾಜಿ ಸಚಿವ ಜನಾರ್ದನ ಪೂಜಾರಿ ಅವರು ಈ ಬಾರಿ ಅನಾರೋಗ್ಯದ ಕಾರಣದಿಂದ ಗೈರಾಗಿದ್ದರು. ಶೋಭಾಯಾತ್ರೆಯಲ್ಲಿ ವೀಣಾಪಾಣಿಯಾದ ಶಾರದಾ ಮಾತೆ ಕುಂಕುಮದ ವರ್ಣದ ಎಡಗೈಯಲ್ಲಿಪುಸ್ತಕ ಹಾಗೂ ಬಲಗೈಯಲ್ಲಿ ಜಪಮಣಿಯನ್ನು ಹಿಡಿದುಕೊಂಡು ಸಾಗುವ ದೃಶ್ಯವಂತೂ ಭಕ್ತರಿಗೆ ಹೊಸ ಅನುಭವವನ್ನು ಕಟ್ಟಿಕೊಟ್ಟಿತು. ಶಾರದಾ ಮಾತೆಯ ವಿಗ್ರಹದ ಜತೆಯಲ್ಲಿಕೇರಳದಿಂದ ಬಂದ ಬಣ್ಣ ಬಣ್ಣದ ಕೊಡೆಗಳ ಸಾಲುಗಳು ನೋಡುಗರಿಗೆ ಖುಷಿಕೊಟ್ಟಿತು. ಕುದ್ರೋಳಿ ಕ್ಷೇತ್ರದ ಮುಂಭಾಗದಲ್ಲಿಬಂದ ಶಾರದಾ ಮಾತೆಯ ವಿಗ್ರಹಕ್ಕೆ ಪೂಜೆ ಸಲ್ಲಿಸಿದ ಬಳಿಕ ಶೋಭಾಯಾತ್ರೆ ಆರಂಭವಾಯಿತು. ಮಂಗಳೂರು ದಸರಾ ಮೆರವಣಿಗೆ ಇತಿಹಾಸದಲ್ಲೇ ಮೊದಲ ಬಾರಿಗೆ ಶಾರದೆ, ಗಣಪತಿ, ನವದುರ್ಗೆಯರನ್ನು ಹೊತ್ತ ಟ್ರಕ್‌ಗಳಿಗೆ ಮೆರವಣಿಗೆಯಲ್ಲಿ ಮೊದಲ ಅವಕಾಶ ನೀಡಲಾಗಿತ್ತು. ವಿವಿಧ ಸ್ತಬ್ಧ ಚಿತ್ರಗಳ ಟ್ಯಾಬ್ಲೋಗಳು ಬಳಿಕ ಮೆರವಣಿಗೆಯಲ್ಲಿ ಹಿಂಬಾಲಿಸಿದವು. ಕರಾವಳಿಯ ಜಾನಪದ ನೃತ್ಯ, ಕಲಾಪ್ರಕಾರಗಳ ಜತೆ ವಿಭಿನ್ನ ರೀತಿಯ ಸ್ತಬ್ಧಚಿತ್ರಗಳು ಶೋಭಾ ಯಾತ್ರೆಯಲ್ಲಿ ಗಮನಸೆಳೆಯಿತು. 100ಕ್ಕೂ ಅಧಿಕ ಕೊಡೆಗಳು ಮೆರವಣಿಗೆಯಲ್ಲಿತ್ತು. ಪದುವಾ ಫ್ರೆಂಡ್ಸ್‌ ಈ ಬಾರಿ ಅಂಬಾರಿ- ರಾಜಮನೆತನದ ದೃಶ್ಯದೊಂದಿಗೆ “ಮೈಸೂರು ದಸರಾ ವೈಭವ’ ಪ್ರಸ್ತುತಪಡಿಸಿದ ಸ್ತಬ್ಧಚಿತ್ರ ಆಕರ್ಷಕವಾಗಿತ್ತು. ಹುಲಿ ವೇಷದ ಟ್ಯಾಬ್ಲೋ ಜತೆಗೆ “ಡೆವಿಲ್‌ ವರ್ಲ್ಡ್ ಶೋ’ ಪ್ರದರ್ಶನ ಈ ಬಾರಿಯ ಮೆರವಣಿಗೆಯ ವಿಶೇಷತೆಯಾಗಿತ್ತು. ಉಳಿದಂತೆ ಶೋಭಾಯಾತ್ರೆಯಲ್ಲಿ ಹಲವು ಹುಲಿವೇಷದ ಟ್ಯಾಬ್ಲೋ, ನಾಸಿಕ್‌ ತಂಡ, ಕೇರಳ ಚೆಂಡೆ, ಬ್ರೆಜಿಲ್‌ನ ನೃತ್ಯದ ಟ್ಯಾಬ್ಲೋ, ಕುಂಭಕರ್ಣ ವಧೆ ಮಾಡುವ ಸನ್ನಿವೇಶ, ಅನರ್ಕಲ್ಲಿ ಟ್ಯಾಬ್ಲೋ, ದಸರಾ ಡ್ಯಾನ್ಸ್‌ ಪಾರ್ಟಿಯ ಅನರ್ಕಲ್ಲಿ, ಹಳೆಯ ನಾಗರಿಕತೆಯನ್ನು ಬಿಂಬಿಸುವ ವಿಶಿಷ್ಟ ಟ್ಯಾಬ್ಲೋ, ಡ್ರ್ಯಾಗನ್‌, ಅಘೋರಿಗಳ ಟ್ಯಾಬ್ಲೋ, ವೀರಾಂಜನೇಯ ಟ್ಯಾಬ್ಲೋ ಗಮನಸೆಳೆಯಿತು.

 

Offers

Want to Add your Offers, contact Naadle at 7090787344 or Email us at info@naadle.com