Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!

ನಾಲ್ಕು ದಿನಗಳ ಫಲಪುಷ್ಪ ಪ್ರದರ್ಶನ ಕದ್ರಿ ಪಾರ್ಕ್ ನಲ್ಲಿ ಆರಂಭಗೊಂಡಿದೆ..!!

nalku dinagala phalapuspa pradarshna kadri parknalli arambhagondide-naadle
Share This:

ಜಿಲ್ಲಾ ಪಂಚಾಯತ್‌ ತೋಟಗಾರಿಕಾ ಇಲಾಖೆ, ಜಿಲ್ಲಾಡಳಿತ ಹಾಗೂ ಸಿರಿ ತೋಟಗಾರಿಕಾ ಸಂಘದ ಸಂಯುಕ್ತ ಆಶ್ರಯದಲ್ಲಿ ಕದ್ರಿ ಪಾರ್ಕ್‌ನಲ್ಲಿ ನಡೆಯುವ ಫಲಪುಷ್ಪ ಪ್ರದರ್ಶನ ಜ.26ರಿಂದ 29ರ ವರೆಗೆ ನಡೆಯಲಿದೆ. ನಾಲ್ಕು ದಿನಗಳ ಕಾಲ ಪುಷ್ಪ ಪ್ರದರ್ಶನ, ಆಹಾರ ಮೇಳ, ಅನೇಕ ಕಾರ್ಯಕ್ರಮಗಳ ಮೂಲಕ ನಗರದ ಜನರನ್ನು ಪಾರ್ಕ್‌ ಸೆಳೆಯಲಿದೆ.nalku dinagala phalapuspa pradarshna kadri parknalli arambhagondide-naadle

Upcoming and Ongoing events

View More Events

Want to Promote your Event, contact Naadle at 9035030300 or Email us at info@naadle.com

ಈ ಸಂದರ್ಭದಲ್ಲಿ ಜಿಲ್ಲೆಯ ಆಯ್ದ 5 ರೈತ ಮಹಿಳೆ, ಸಣ್ಣ- ಅತಿ ಸಣ್ಣ, ಪರಿಶಿಷ್ಟ ಜಾತಿ- ಪಂಗಡದ ತೋಟಗಾರಿಕಾ ರೈತರಿಗೆ ಸಮ್ಮಾನ ಹಾಗೂ ಹೂವು ಜೋಡಣೆ, ರಂಗೋಲಿ, ತರಕಾರಿ ಕೆತ್ತನೆ ಸ್ಪರ್ಧೆಗಳು, ಉದ್ಯಾನ ಸ್ಪರ್ಧೆ ಆಯೋಜಿಸಲಾಗಿದ್ದು, ಸ್ಪರ್ಧೆಯಲ್ಲಿ 30 ಜನ ಸಾರ್ವಜನಿಕರು ಭಾಗವಹಿಸಲಿದ್ದಾರೆ. ಸುಮಾರು 12 ತಂಡಗಳಿಂದ ಪ್ರತಿ ದಿನ ಸಂಜೆ 5.30ರಿಂದ ರಾತ್ರಿ 8.30ರ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಪ್ರವೇಶ ಶುಲ್ಕ ಹಿರಿಯರಿಗೆ 20 ರೂ. ಮತ್ತು ಮಕ್ಕಳಿಗೆ 10 ರೂ. ಆಗಿರುತ್ತದೆ. ಶಿಕ್ಷಕರ ಜತೆಗೆ ಬರುವ ಶಾಲಾ ಮಕ್ಕಳಿಗೆ, ವಿಶಿಷ್ಟ ಮಕ್ಕಳಿಗೆ ಪ್ರವೇಶ ಉಚಿತವಾಗಿರುತ್ತದೆ.nalku dinagala phalapuspa pradarshna kadri parknalli arambhagondide-naadleಪ್ರದರ್ಶನದಲ್ಲಿ ಜೇನು ಬೇಸಾಯದ ಬಗ್ಗೆ ಮಾಹಿತಿ ಹಾಗೂ ಜೇನಿನ ಮೌಲ್ಯ ವರ್ಧಿತ ಉತ್ಪನ್ನಗಳ ಮಾರಾಟ, ಕೈತೋಟ ಮತ್ತು ತಾರಸಿ ತೋಟದ ಪ್ರಾತ್ಯಕ್ಷಿಕೆ, ತೋಟಗಾರಿಕೆ ಇಲಾಖೆ ಬೆಳೆಸಿದ ವಿವಿಧ ಹೂವು, ಹಣ್ಣು, ತರಕಾರಿಗಳ ಪ್ರದರ್ಶನ, ಬೋನ್ಸಾಯಿ, ಅಂಥೂರಿಯಂ, ಆರ್ಕಿಡ್‌ ಗಿಡಗಳು ಮತ್ತು ಇತರ ಆಕರ್ಷಕ ಗಿಡಗಳ ಪ್ರದರ್ಶನ, ವಿವಿಧ ನರ್ಸರಿ ಮತ್ತು ಬೀಜ ಮಾರಾಟಗಾರರಿಂದ ಮಳಿಗೆಗಳು, ಸಾವಯವ ಉತ್ಪನ್ನಗಳ ಪ್ರದರ್ಶನ, ಆಹಾರ ಮೇಳ ಆಗಮಿಸುವವರನ್ನು ಆಕರ್ಷಿಸಲಿದೆ.nalku dinagala phalapuspa pradarshna kadri parknalli arambhagondide-naadleಫಲಪುಷ್ಪ ಪ್ರದರ್ಶನದಲ್ಲಿ ಬಣ್ಣ ಬಣ್ಣದ ಕಾರ್ನೇಶನ್‌ ಮತ್ತು ಗುಲಾಬಿ ಹೂವುಗಳಿಂದ ಅಲಂಕರಿಸಿದ ‘ಮಂಗಳೂರು ಕ್ಲಾಕ್‌ ಟವರ್‌’ ಪ್ರಮುಖ ಆಕರ್ಷಣೆಯಾಗಲಿದೆ. ಜಿಲ್ಲೆಯ ಪ್ರಮುಖ ಸ್ಮಾರಕಗಳಲ್ಲಿ ಒಂದಾದ ಕ್ಲಾಕ್‌ ಟವರ್‌ನ್ನು ಫಲ ಪುಷ್ಪ ಪ್ರದರ್ಶನದಲ್ಲಿ ನಿರ್ಮಿಸಿ ಜನರನ್ನು ಸೆಳೆಯುವ ಚಿಂತನೆ ಮಾಡಲಾಗಿದೆ. 14 ಅಡಿ ಎತ್ತರ ಮತ್ತು 5 ಅಡಿ ಅಗಲದ ಈ ಕ್ಲಾಕ್‌ ಟವರ್‌ ನಿರ್ಮಾಣಕ್ಕೆ 150 ಕೆ.ಜಿ. ಹೂವುಗಳನ್ನು ಜೋಡಿಸಲಾಗುತ್ತದೆ.
naadle If you like this article, click on the button below

Offers

Want to Add your Offers, contact Naadle at 9035030300 or Email us at info@naadle.com