Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!

ಮೂಲ್ಕಿಯ ಮೆಹಂದಿ ಕಾರ್ಯಕ್ರಮದಲ್ಲಿ ಕುಡಿದು ಕುಣಿದು ಕುಪ್ಪಳಿಸಿದ ಕೋಸ್ಟಲ್ ವುಡ್ ಸ್ಟಾರ್ಸ್..!!

mulkiya mehandi karyakramadalli kudidu kunidu kuppalisida coastal wood stars-naadle
Share This:

ಮಂಗಳೂರು ಸಮೀಪದ ಮೂಲ್ಕಿಯಲ್ಲಿ ಅದ್ದೂರಿ ಮೆಹಂದಿ ನಡೆಯಿತು ಈ ಮೆಹಂದಿಗೆ  ದೊಡ್ಡ ಸೆಟ್ ಹಾಕಲಾಗಿತ್ತು ಇಲ್ಲಿ 300ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು ಮತ್ತು ಎಲ್ಲರಿಗೂ ಅದ್ದೂರಿಯಾದ ಊಟ ತಯಾರಿಸಲಾಗಿತ್ತು. ಆಡಂಬರಕ್ಕೆ ಏನು ಕಡಿಮೆ ಇರಲಿಲ್ಲ ಕೆಮ್ಮುಗೆ ರಮ್ಮು, ಜ್ವರಕ್ಕೆ ಬ್ರಾಂಡಿ, ಉಷ್ಣಕ್ಕೆ ಬಿಯರ್, ಶೀತಕ್ಕೆ ವಡ್ಕ ಜೊತೆಗೆ ಡಿಜೆ, ಅಲ್ಲಲ್ಲಿ ಸೆಟ್ಟಿಂಗ್ , ಚಾಟಿಂಗ್ ಎಲ್ಲವೂ ನಡೆಯುತ್ತಿತ್ತು.  ಈ ಮದುವೆಯಲ್ಲಿ ಕೋಸ್ಟಲ್ ವುಡ್ ಸ್ಟಾರ್ಸ್ ಭಾಗವಹಿಸಿ ಡಿಜೆಗೆ ಸ್ಟೆಪ್ಸ್ ಹಾಕಿದ್ರು.

ಈ ಅದ್ದೂರಿ ಆಡಂಬರ ಎಲ್ಲ ಕಂಡುಬಂದಿದ್ದು ಇಲ್ಲ್ ಒಕ್ಕೆಲ್ ಸಿನಿಮಾದ ಸಾಂಗ್ ಮೇಕಿಂಗ್ ಸೆಟ್ ನಲ್ಲಿ. ಈ ಸಿನಿಮಾದ ಟಕಿಲ ಹಾಡಿನ ಚಿತ್ರೀಕರಣವನ್ನು ಮುಲ್ಕಿಯ ಸಮೀಪ ಅದ್ದೂರಿ ಸೆಟ್ ಹಾಕಿ ಚಿತ್ರೀಕರಿಸಲಾಗುತಿತ್ತು, ಈ ಹಾಡಿಗೆ ಕೋಸ್ಟಲ್ ವುಡ್ ನ ದಿಗ್ಗಜರಾದ ನವೀನ್ ಡಿ ಪಡೀಲ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರ್, ವಿಸ್ಮಯ ವಿನಾಯಕ್, ವಿಜೆ ವಿನೀತ್, ಉಮೇಶ್ ಮಿಜಾರ್ ಮತ್ತು 150ಕ್ಕೂ ಹೆಚ್ಚು ಸಹಕಲಾವಿದರು ಹೆಜ್ಜೆಹಾಕಿದರು. ಈ ಹಾಡಿನ ಸಾಹಿತ್ಯವನ್ನು ಡಾ. ಸುರೇಶ್ ಕೋಟ್ಯಾನ್ ಚಿತ್ರಾಪು ಅವರು ಬರೆದಿದ್ದು ಮತ್ತು ರಾಜ್ ಶಾ ಸಂಗೀತ ನೀಡಿದ್ದಾರೆ. ಮೊದಲ ಬಾರಿಗೆ ಕೋಸ್ಟಲ್ ವುಡ್ ನಲ್ಲಿ ಕಾಲಿವುಡ್ ನ ಪ್ರಸಿದ್ಧ ಗಾಯಕ ಟಿಪ್ಪು ಅವರ ಸಿರಿಕಂಠದಲ್ಲಿ ಈ ಹಾಡು ಮೂಡಿಬಂದಿದೆ. ಈ ಸಿನಿಮಾದ ಮೂಲಕ ತುಳು ಚಿತ್ರರಂಗದಲ್ಲಿ ಪ್ರಪ್ರಥಮವಾಗಿ 5D ಸೌಂಡ್ ಅನ್ನು ಉಪಯೋಗಿಸಿಕೊಂಡು ರೆಕಾರ್ಡ್ ಮಾಡಲಾಗಿದೆ. ಅಕುಲ್ ಮತ್ತು ಸ್ವಪ್ನ ಅಕುಲ್ ನೃತ್ಯ ಸಂಯೋಜಿಸಿದ್ದಾರೆ. ಲೈವ್ ಮ್ಯೂಸಿಕ್ ನೊಂದಿಗೆ ಈ ಹಾಡನ್ನು ಚಿತ್ರೀಕರಿಸಲಾಗಿದೆ. ರಾಜಮೌಳಿ ಮತ್ತು ಎ.ಅರ್ ರೆಹಮಾನ್ ಜೊತೆ ಕೆಲಸಮಾಡಿದ ಬಾಲೇಶ್ ಇವರು ಶನಾಯಿ ನೀಡಿದ್ದಾರೆ. ಸಿತಾರ್ ನಲ್ಲಿ ಶಿವ, ಡ್ರಮ್ಸ್ ಮತ್ತು ಪೆರ್ಕಶ್ಷನ್ಸ್ ನಲ್ಲಿ ವಿಕ್ಕಿ, ಚೆಂಡೆಯಲ್ಲಿ ಹಿರಿಯ ಚೆಂಡೆ ಕಲಾವಿದರಾದ ಮುರಳೀಧರ್ ಭಟ್ ಕಟೀಲ್, ಮೃದಂಗದಲ್ಲಿ ನವೀನ್ ರಾವ್, ಡಿ ವಿಕ್ಕಿ ಟೇಪು ಮತ್ತು ಪಾರ್ಟಿಯೆನ್ಸ್, ಎ. ಆರ್ ರೆಹಮಾನ್ ನ ಟೀಮ್ ನ ನಾಧನ್ ಕೊಳಲು ನುಡಿಸಿದ್ದಾರೆ.mulkiya mehandi karyakramadalli kudidu kunidu kuppalisida coastal wood stars-naadleಈ ಸಿನಿಮಾದ ಚಿತ್ರೀಕರಣ ಸಂಪೂರ್ಣ ಮುಗಿದಿದ್ದು, ಈ ಹಾಡಿನ ಚಿತ್ರೀಕರಣ ಮುಗಿಸುವ ಮೂಲಕ ಕುಂಬಳಕಾಯಿ ಹೊಡೆಯಲಾಯಿತು. ಆದಷ್ಟು ಬೇಗ ಚಿತ್ರವನ್ನು ಬಿಡುಗಡೆ ಮಾಡುವ ತಯಾರಿಯಲ್ಲಿದೆ ಚಿತ್ರತಂಡ. ಅಂದು ಕೊಂಡಂತೆ ಎಲ್ಲ ಕೆಲಸ ಬೇಗ ಮುಗಿದರೆ ಚಿತ್ರವೂ ಏಪ್ರಿಲ್ ನಲ್ಲಿ  ಪ್ರೇಕ್ಷಕರ ಮುಂದೆ ಬರುತ್ತದೆ.mulkiya mehandi karyakramadalli kudidu kunidu kuppalisida coastal wood stars-naadle

ಈ ಸಿನೆಮಾವು ಶ್ರೀ ಗಜನಿ ಪ್ರೋಡಕ್ಷನ್ಸ್ ನಲ್ಲಿ ತಯಾರಾಗುತ್ತಿದ್ದು, ವಾಸುದೇವ ಯಸ್ ಚಿತ್ರಾಪು, ಡಿ. ಯಂ ಶೆಟ್ಟಿ ಮತ್ತು ಡಾ. ಸುರೇಶ್ ಕೋಟ್ಯಾನ್ ಚಿತ್ರಾಪು ನಿರ್ಮಿಸುತ್ತಿದ್ದಾರೆ. ಡಾ. ಸುರೇಶ್ ಕೋಟ್ಯಾನ್ ರವರ ನಿರ್ದೇಶನ, ಕಥೆ ಪೃಥ್ವಿ ಮಾಲೂರು ಮತ್ತು ಮಧು ಗೌಡ ಅವರ ಛಾಯಾಗ್ರಹಣ ಈ ಚಿತ್ರ ಕ್ಕೆ ಇದೆ . ರಾಜ್ ಶಾ ಅವರ ಸಂಗೀತ ಮತ್ತು ಸುರೇಶ್ – ವಿನ್ಯಾಸ್ ರವರ ಹಿನ್ನಲೆ ಸಂಗೀತ ಈ  ಸಿನಿಮಾಕ್ಕೆ ಇದೆ . ಈ ಸಿನಿಮಾದಲ್ಲಿ ಅರವಿಂದ್ ಬೋಳಾರ್, ನವೀನ್ ಡಿ ಪಡೀಲ್, ಭೋಜರಾಜ್ ವಾಮಂಜೂರ್, ವಿಸ್ಮಯ ವಿನಾಯಕ್, ಉಮೇಶ್ ಮಿಜಾರ್, ವಿ.ಜೆ ವಿನೀತ್, ಕುರಿಬಾಂಡ್ ರಂಗ. ಸುನಿಲ್ ನೆಲ್ಲಿಗುಡ್ಡೆ, ಸೀತಾರಾಮ್ ಕಟೀಲ್, ಅದ್ವಿತಿ ಶೆಟ್ಟಿ, ನಿರೀಕ್ಷ ಶೆಟ್ಟಿ, ಭವ್ಯ ರೆಡ್ಡಿ, ಚಂದ್ರಕಲಾ ಮೋಹನ್, ಮೈಂ ರಾಮ್ ದಾಸ್ ಮತ್ತು ಇತರ ಉದಯೋನ್ಮುಖ ಕಲಾವಿದರು ಅಭಿನಯಿಸಿದ್ದಾರೆ.

naadle If you like this article, click on the button below