Me Too ಅಂದರೇನು?

me too andarenu-naadle
Share This:

Me Too ಈ ಟ್ಯಾಗ್​ಲೈನ್​ ಈಗ ದೇಶದಲ್ಲಿ ಸಂಚಲನ ಮೂಡಿಸುತ್ತಿದೆ, ಚಳವಳಿಯಾಗಿ ಮಾರ್ಪಟ್ಟಿದೆ, ಹಲವರ ಎದೆ ನಡುಗಿಸಿದೆ, ದೌರ್ಜನ್ಯಕ್ಕೊಳಗಾದವರಿಗೆ ವೇದಿಕೆ ಎಂಬಂತಾಗಿದೆ. ಚಿತ್ರರಂಗದ ನಟಿಯರು, ಸೆಲೆಬ್ರೆಟಿಗಳು, ಮಹಿಳಾ ಪತ್ರಕರ್ತರು ತಮಗಾದ ವೇದನೆಯನ್ನು Me Too ಅಡಿಯಲ್ಲಿ ನಿವೇದಿಸಿಕೊಳ್ಳುತ್ತಿದ್ದಾರೆ. me too andarenu-naadle

Upcoming and Ongoing events

View More Events

Want to Promote your Event, contact Naadle at 7090787344 or Email us at info@naadle.com


ಈ Me Too ಪೂರ್ವಾಪರ ಬಹುತೇಕರಿಗೆ ಗೊತ್ತಿಲ್ಲ. ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತರಿಗೆ ನೆರವಾಗಲೆಂದು ಟರಾನಾ ಬರ್ಕ್​ ಎಂಬ ನಾಗರೀಕ ಹೋರಾಟಗಾರ್ತಿ 2006ರಲ್ಲಿ Me Too ಅಭಿಯಾನವನ್ನು ಆರಂಭಿಸಿದರು. ಅತ್ಯಂತ ಕೆಳಸ್ತರದ, ದೌರ್ಜನ್ಯಕ್ಕೊಳಗಾದ ಹೆಣ್ಣುಮಕ್ಕಳ ಒಳಿತಿಗಾಗಿ, ಸಮಸ್ಯೆ ಪರಿಹಾರಕ್ಕಾಗಿ ಮತ್ತು ಅವರಿಗೆ ನೈತಿಕ ಸ್ಥೈರ್ಯ ತುಂಬಲು ಟರಾನಾ ಬರ್ಕ್​ ಈ ಚಳವಳಿಗೆ ಮುನ್ನಡಿ ಬರೆದಿದ್ದರು. ಆರಂಭದಲ್ಲಿ Me Too ಎಂಬುದರ ಮೂಲ ಉದ್ದೇಶ ಮಹಿಳಾ ಸಬಲೀಕರಣವಾಗಿತ್ತು. ಅಲ್ಲದೆ, ದೌರ್ಜನ್ಯಕ್ಕೊಳಗಾದವರು ಒಂಟಿಯಲ್ಲ ಎಂಬ ಭಾವನೆ ಮೂಡಿಸುವುದಾಗಿತ್ತು.me too andarenu-naadleಟರಾನಾ ಬುರ್ಕ್​ ಆಫ್ರಿಕನ್​ ಅಮೆರಿಕನ್​ ಮಹಿಳೆ. ನ್ಯೂಯಾರ್ಕ್​ನ ನಾಗರಿಕ ಹಕ್ಕುಗಳ ಹೋರಾಟಗಾರ್ತಿಯೂ ಹೌದು. ನ್ಯೂಯಾರ್ಕ್​ನ ಬ್ರುಕ್ಲಿನ್​ ಮೂಲದ ‘ಲಿಂಗ ಸಮಾನತೆಗಾಗಿ ಹೆಣ್ಣುಮಕ್ಕಳು’ ಎಂಬ ಸಂಸ್ಥೆಯಲ್ಲಿ ಸದ್ಯ ಟರಾನ್​ ಬುರ್ಕ್​ ಅವರು ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದೌರ್ಜನ್ಯಕ್ಕೊಳಗಾದ ಹೆಣ್ಣು ಮಕ್ಕಳ ಪರ ಹೋರಾಡಿದ, ಕಲ್ಯಾಣ ಕಾರ್ಯಕ್ರಮಗಳ ಕೈಗೊಂಡ ಟರಾನಾ ಅವರು 2017ರಲ್ಲಿ ‘ಟೈಮ್​ ವರ್ಷದ ವ್ಯಕ್ತಿ ಪ್ರಶಸ್ತಿಗೆ’ ಪಾತ್ರರಾಗಿದ್ದಾರೆ.

#MeToo ಆರಂಭವಾಗಿದ್ದು ಹೇಗೆ?

ಲೈಂಗಿಕ ದಾಸ್ಯಕ್ಕೊಳಗಾದ ಕೆಳ ಸ್ತರದ ಹೆಣ್ಣು ಮಕ್ಕಳ ಪರವಾಗಿ ಹೋರಾಡಲೆಂದು ಟರಾನಾ ಬರ್ಕ್​ 2003ರಲ್ಲಿ Just Be Inc. ಎಂಬ ಸಂಸ್ಥೆ ಆರಂಭಿಸಿದ್ದರು. ಅದರ ಮೂಲಕ ‘myspace’ ಎಂಬ ವೆಬ್​ ಪೋರ್ಟಲ್​ನಲ್ಲಿ ಹೆಣ್ಣು ಮಕ್ಕಳ ಸಮಸ್ಯೆ ಆಲಿಸುವ, ಅವರಿಗೆ ಸಾಂತ್ವನ ಹೇಳುವ, ಅವರಿಗೆ ಕಾನೂನು ನೆರವು ಕಲ್ಪಿಸುವ ಕಾರ್ಯಕ್ರಮ (ಯೂತ್​ ಕ್ಯಾಂಪ್​ ) ನಡೆಸುತ್ತಿದ್ದರು. ಟರಾನಾ ಅವರು ಅಪ್ರಾಪ್ತ, ಸಂತ್ರಸ್ತ ಹೆಣ್ಣುಮಕ್ಕಳ ಯೋಗಕ್ಷೇಮಕ್ಕಾಗಿ ಯೋಜನೆಗಳನ್ನು ಹಾಕಿಕೊಳ್ಳಲು ಆರಂಭಿಸಿದರು. ಹೆಣ್ಣು ಮಕ್ಕಳ ಸಮಸ್ಯೆಗಳನ್ನು ಆಲಿಸುತ್ತಿದ್ದ ಟರಾನಾ ಅವರಿಗೆ ಒಂದು ಬಾರಿ ಅಪ್ರಾಪ್ತ ಬಾಲಕಿಯೊಬ್ಬಳು ತನ್ನ ತಾಯಿಯ ಪ್ರಿಯಕರ ನೀಡಿದ ಲೈಂಗಿಕ ದೌರ್ಜನ್ಯದ ವೃತ್ತಾಂತ ಹೇಳಿಕೊಂಡಿದ್ದಳು. ಈ ಸನ್ನಿವೇಶ ಟರಾನಾ ಅವರನ್ನು ಮನ ಕಲಕಿತ್ತು. ಸದ್ಯ ಜನಪ್ರಿಯ ಗೊಂಡಿರುವ MeToo ಅಭಿಯಾನ ಹುಟ್ಟಿಕೊಂಡಿದ್ದು ಅಂದೇ. ಕಷ್ಟ ಹೇಳಿಕೊಳ್ಳಲು ಬಂದ ಹೆಣ್ಣು ಮಕ್ಕಳನ್ನು ಸಂತೈಸಲು ಬಳಸಿದ ಪದ MeToo. ಲೈಂಗಿಕ ತೃಷೆಗೆ ನಲುಗಿದ ಆ ಅಪ್ರಾಪ್ತ ಹೆಣ್ಣು ಮಗಳು ತನ್ನ ಸಮಸ್ಯೆ ಹೇಳಿಕೊಳ್ಳುತ್ತಿದ್ದಾಗ ಆಕೆಯನ್ನು ಸಂತೈಸಲು ಟರಾನಾ ಬರ್ಕ್​ ಬಳಿಸಿದ ಪದವೇ MeToo (ನನಗೂ ಹೀಗೆ ಆಗಿದೆ. ನೀನು ಒಂಟಿಯಲ್ಲ ಎಂಬರ್ಥದ ಮಾತು).me too andarenu-naadleಟರಾನಾ ಬರ್ಕ್​ ಅವರು ತಾವು ಹೋದಕಡೆಗಳಲ್ಲೆಲ್ಲ MeToo ಎಂಬ ಪದ ಬಳಸಲಾರಂಭಸಿದರು. ನೀವು ಒಂಟಿಯಲ್ಲ. ಇದು ನನಗೂ ಸಂಭವಿಸಿದ ಸಮಸ್ಯೆ ಎಂದು ಹೇಳಿಕೊಳ್ಳಲಾರಂಭಸಿದರು. ಇದು ಸಂತ್ರಸ್ತರಿಗೆ ಧೈರ್ಯ ತುಂಬುವ ಮಾತಾಗಿತ್ತು. ಕೇವಲ 500 ಟ್ವಿಟರ್​ ಫಾಲೋಯರ್​ಗಳನ್ನು ಹೊಂದಿದ್ದ ಟರಾನಾ ಬರ್ಕ್​ ಅವರು ಸಾಮಾಜಿಕ ಜಾಲತಾಣದಲ್ಲಿ ಈ MeToo ಎಂಬ ಪದವನ್ನು ಪರಿಚಯಿಸಿದರು. ಆದರೆ ಟರಾನಾ ಬರ್ಕ್​ ಅವರ ಸಂದೇಶಕ್ಕೆ ಸಿಗದ ವ್ಯಾಪಕತೆ ನಟಿ ಅಲಿಸ್ಸ ಮಿಲಾನೊ ಅವರು ತಮ್ಮ ಟ್ವಿಟರ್​ ಖಾತೆಯಲ್ಲಿ ಉಲ್ಲೇಖ ಮಾಡುವುದರೊಂದಿಗೆ ಹೆಚ್ಚು ಪ್ರವರ್ಧಮಾನಕ್ಕೆ ಬಂತು. 2017ರಲ್ಲಿ ಅಲಿಸ್ಸ ಮಿಲಾನೊ ಮಾಡಿದ ಟ್ವೀಟ್​ನ ನಂತರ MeToo ಜಗತ್ತಿನಾದ್ಯಂತ ಪ್ರಖ್ಯಾತಿ ಪಡೆದುಕೊಂಡಿದೆ.
naadle If you like this article, click on the button below

Offers

Want to Add your Offers, contact Naadle at 7090787344 or Email us at info@naadle.com