ಮರೆಯಾದ ಕಂಬಳದ ಕೆರೆಯಲ್ಲಿನ ಚಿಗರೆಯ ವೇಗದ ಓಟಗಾರ ರಾಕೆಟ್ ಮೋಡ..!!

mareyada kambalada kereyallina chigareya vegada otagara rocket moda-naadle
Share This:

ಕಂಬಳ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದ ರಾಕೆಟ್ ಮೋಡ ಖ್ಯಾತಿಯ ಕಂಬಳದ ಕೋಣ ಇನ್ನು ನೆನಪು ಮಾತ್ರ. ಕಳೆದ ಕೆಲವು ದಿನಗಳಿಂದ ಅಸೌಖ್ಯದಿಂದ ಬಳಲುತ್ತಿದ್ದ ಕಂಬಳದ ಕೋಣ ಮೃತಪಟ್ಟಿದ್ದು, ಕಂಬಳಪ್ರಿಯರಲ್ಲಿ ದುಃಖ ತರಿಸಿದೆ. ಕಂಬಳ ಕ್ಷೇತ್ರದಲ್ಲಿ ಕಿರಿಯ ಮತ್ತು ಹಿರಿಯ ವಿಭಾಗದಲ್ಲಿ ನೂರಾರು ಬಹುಮಾನಗಳನ್ನು ಗೆದ್ದ ಹೆಗ್ಗಳಿಕೆ ಈ ರಾಕೆಟ್ ಮೋಡ ಕೋಣದ್ದಾಗಿತ್ತು.mareyada kambalada kereyallina chigareya vegada otagara rocket moda-naadle

Upcoming and Ongoing events

View More Events

Want to Promote your Event, contact Naadle at 7090787344 or Email us at info@naadle.com


ಅಧುನಿಕ ಕಂಬಳಕ್ಕೆ ವಿಶಿಷ್ಟ ಕೊಡುಗೆ ನೀಡದ ನಂದಳಿಕೆ ಶ್ರೀಕಾಂತ್ ಭಟ್ ಅವರ ಪ್ರೀತಿಯ, 20 ವರ್ಷದ ಕಂಬಳ ಕೋಣ ರಾಕೆಟ್ ಮೋಡವಯೋಸಹಜ ಕಾಯಿಲೆಯಿಂದ ಮಂಗಳವಾರ ಬೆಳಗ್ಗೆ ಮೃತಪಟ್ಟಿದಾನೆ. ಉಡುಪಿ ಕೋಟದ ಪೈರು ತಳಿ ಆಗಿರುವ ರಾಕೆಟ್ ಮೋಡ 2014 ರಲ್ಲಿ ತನ್ನ ಜತೆಗಾರ ಕುಟ್ಟಿಯೊಂದಿಗೆ 144 ಮೀ ನ್ನು 13.57 ಸೆಕೆಂಡ್ ನಲ್ಲಿ ಕ್ರಮಿಸುವ ಮೂಲಕ ಕಂಬಳ ಇತಿಹಾಸದಲ್ಲಿ ಇನ್ನು ಅಳಿಸಲಾಗದ ದಾಖಲೆ ಸೃಷ್ಟಿಸಿದ್ದಾನೆ. ರಾಕೆಟ್ ಈವರೆಗೆ 100ಕ್ಕೂ ಅಧಿಕ ಪದಕ ಪದೆದಿದ್ದು ಕಂಬಳ ಇತಿಹಾಸದಲ್ಲೇ ಅತ್ಯಂತ ದೊಡ್ಡ ಸಾಧನೆ ಮಾಡಿದ ಕೀರ್ತಿ ಪಡೆದಿದ್ದಾನೆ.mareyada kambalada kereyallina chigareya vegada otagara rocket moda-naadleರಾಕೆಟ್‌ ಮೋಡೆ ಸುಕುಮಾರ್‌ ಶೆಟ್ಟಿ ಮತ್ತು ಶ್ರೀಕಾಂತ್‌ ಭಟ್‌ ಅವರ ಮನೆಯ ಸದಸ್ಯನಂತಿದ್ದು, ಎಲ್ಲರಿಗೂ ಅಚ್ಚುಮೆಚ್ಚಾಗಿದ್ದ. ಪ್ರಾರಂಭದಲ್ಲಿ ಚೆನ್ನ ಜತೆ ಓಡಿದ ಮೋಡೆ ಬಳಿಕ ಕುಟ್ಟಿ ಜತೆ ಸ್ಪರ್ಧೆಗೆ ಹೋಗುತ್ತಿದ್ದ. ವಯಸ್ಸು 20 ಆದರೂ ಮೋಡೆ ಮಾತ್ರ ವಿರಾಮ ಬಯಸದೆ ಸ್ಪರ್ಧಿಸುತ್ತಿದ್ದ. ರಾಕೆಟ್‌ ಮೋಡೆ ಮಂಗಳವಾರ ಹಟ್ಟಿಯಲ್ಲಿ ಅಂಗಾತ ಬಿದ್ದಿರುವುದನ್ನು ಕಂಡು ಆತನ ಜತೆಗಾರನಾಗಿದ್ದ ಚೆನ್ನ ಮತ್ತು ಕುಟ್ಟಿ ಕಣ್ಣೀರು ಹಾಕುವ ದೃಶ್ಯ ಮನ ಕಲಕುವಂತಿತ್ತು. ಮೋಡೆಯನ್ನು ನೋಡಲು ಶ್ರೀಕಾಂತ್‌ ಭಟ್‌ ಮನೆಗೆ ಜನಸಮೂಹವೇ ಬಂದಿತ್ತು. ಮೋಡೆ ಸಾಧನೆಯನ್ನು ಕೆಲವರು ಗುಣಗಾನ ಮಾಡುತ್ತಿದ್ದರೆ, ಇನ್ನು ಕೆಲವರು ಮೌನವಾಗಿಯೇ ನಿಂತಿದ್ದರು. ಕಂಬಳ ಕೋಣದ ಅಂತ್ಯಸಂಸ್ಕಾರವನ್ನು ಶಾಸ್ತ್ರಬದ್ಧವಾಗಿ ಮಾಡಿದ್ದು ನೂರಾರು ಮಂದಿ ಕಂಬಳಪ್ರಿಯರು ಸೇರಿದ್ದರು.
naadle If you like this article, click on the button below

Offers

Want to Add your Offers, contact Naadle at 7090787344 or Email us at info@naadle.com