ಮಣಿಪಾಲದಲ್ಲಿ ಸಾಲು ಮರದ ತಿಮ್ಮಕ್ಕ ವೃಕ್ಷ ಉದ್ಯಾನವನ..!!

manipaladalli salumarada timmakka vruksha udyanavana-naadle
Share This:

ಉಡುಪಿಯ ಮಣಿಪಾಲದಲ್ಲಿ ಸಾಲುಮರದ ತಿಮ್ಮಕ್ಕನ ಹೆಸರಲ್ಲಿ ಒಂದು ವೃಕ್ಷ ಉದ್ಯಾನವನವಿದೆ. ಕರಾವಳಿ ಪ್ರವಾಸಕ್ಕೆಂದು ಬಂದವರ ಪಟ್ಟಿಗೆ ಇದು ಹೊಸ ಆಕರ್ಷಣೆ. ಒಟ್ಟು 6.5 ಎಕರೆಯಲ್ಲಿ, 1 ಕೋಟಿ ರುಪಾಯಿ ವೆಚ್ಚದಲ್ಲಿ ಈ ಉದ್ಯಾನವನ ನಿರ್ಮಿಸಿದ್ದಾರೆ. ಇನ್ನೂ ಆರೇಳು ಎಕರೆ ಅರಣ್ಯ ಇಲಾಖೆ ಭೂಮಿಯಲ್ಲಿ ಇದನ್ನು ವಿಸ್ತರಿಸಿ ಮಂಗಳೂರಿನ ಪಿಲಿಕುಳ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವ ಯೋಜನೆಯೂ ಇದೆ.manipaladalli salumarada timmakka vruksha udyanavana-naadle

Upcoming and Ongoing events

View More Events

Want to Promote your Event, contact Naadle at 7090787344 or Email us at info@naadle.com

ಉದ್ಯಾನವನವನ್ನು ನೈಸರ್ಗಿಕ ಮಾಹಿತಿಯ ಕಣಜದಂತೆ ರೂಪಿಸಲಾಗಿದೆ. ಪ್ರವೇಶದ್ವಾರದಲ್ಲಿ ಮರದಲ್ಲಿ ಮಾನವಾಕೃತಿಯನ್ನು ರಚಿಸಲಾಗಿದೆ. ರಾಷ್ಟ್ರೀಯ ಪಕ್ಷಿ ನವಿಲು, ರಾಜ್ಯ ಪಕ್ಷಿ ನೀಲಕಂಠ, ಹುಲಿ, ಆನೆ, ಕಂಬಳದ ಕೋಣ, ಜಾನಪದ ನೃತ್ಯ ಮುಂತಾದ ಆಕೃತಿಗಳನ್ನು ರಚಿಸಲಾಗಿದೆ. ರಾಷ್ಟ್ರ ವೃಕ್ಷ ಆಲ, ರಾಜ್ಯ ವೃಕ್ಷ ಶ್ರೀಗಂಧದ ಸಸಿಗಳನ್ನು ನೆಡಲಾಗಿದೆ. ಇದರ ಜೊತೆಗೆ ಆಮೆ, ಮುಂಗುಸಿ, ಮೊಸಳೆ ಇತ್ಯಾದಿಗಳ ಮಾಹಿತಿಯನ್ನು ಇಂಗ್ಲಿಷ್‌ ಮತ್ತು ಕನ್ನಡದಲ್ಲಿ ಫ‌ಲಕದಲ್ಲಿ ಬರೆಸಿ ಹಾಕಲಾಗಿದೆ. ಗಿಡಮೂಲಿಕೆಗಳ ಮಹತ್ವ ಸಾರಲು ಋಷಿ ವನ ನಿರ್ಮಿಸಲಾಗಿದೆ. ನೆಟ್ಟ ಬಿದಿರು ಬೆಳೆದಾಗ ಉದ್ಯಾನದ ಅಂದ ಹೆಚ್ಚುತ್ತದೆ. ಕರಾವಳಿ ತೀರದಲ್ಲಿದ್ದು ಪರಿಸರಕ್ಕೆ ಪೂರಕವಾದ ಕಾಂಡ್ಲಾ ಗಿಡದ ಮಹತ್ವ ಸಾರುವ ಫ‌ಲಕವೂ ಇದೆ. ಮಚ್ಚಾನ್‌ ಪೋಸ್ಟ್‌, ಗಜೆಬೊ/ ಪೆರಗೊಲಾ, ಆ್ಯಂಪಿಥಿಯೇಟರ್‌, ಸೆಲ್ಫಿ ಝೋನ್‌, ಆಸನಗಳನ್ನು ರಚಿಸಿರುವುದರಿಂದ ಪ್ರವಾಸಿಗಳು ಖುಷಿಪಡಬಹುದು. ಮಕ್ಕಳ ಆನಂದಕ್ಕಾಗಿ ಜಿಪ್‌ಲೈನರ್‌ ಇದೆ. ಕೃತಕ ಸಣ್ಣ ಜಲಪಾತವನ್ನು ರಚಿಸಲಾಗಿದೆ. ಶುಚಿತ್ವ ಕಾಪಾಡಲು ಸುಸಜ್ಜಿತ ಶೌಚಾಲಯಗಳಿವೆ. ಹಸಿವು ನೀಗಿಸಿಕೊಳ್ಳಲು ಕ್ಯಾಂಟೀನ್‌ ಇದೆ.


ಇರುವೆಗಳು ಎಷ್ಟೇ ಎತ್ತರದಿಂದ ಬಿದ್ದರೂ ಸಾಯುವುದಿಲ್ಲವಂತೆ. ಇದೇ ವೇಳೆ ಪ್ರಪಂಚದ 630 ಕೋಟಿ ಮನುಷ್ಯರಿಗಿಂತ ಹೆಚ್ಚು ತೂಕ ಪ್ರಪಂಚದಲ್ಲಿರುವ ಇರುವೆಗಳದ್ದಂತೆ. ಅಂದರೆ ಇರುವೆಗಳ ಸಂಖ್ಯೆ ಎಷ್ಟಿರಬಹುದು? ಬೆಂಗಳೂರಿನಲ್ಲಿ ಪ್ರತಿ 15-20 ಚದರಡಿಗೆ ಒಂದರಂತೆ ಹಾವುಗಳು ಭೂಮಿಯಡಿ ಇರುತ್ತವೆ ಎಂದು ಅಧ್ಯಯನಗಳು ಹೇಳುತ್ತಿವೆ. ಎಲ್ಲಿಯಾದರೂ ಇಷ್ಟೊಂದು ಸಂಖ್ಯೆಯ ಹಾವುಗಳು ಇಲ್ಲವಾದರೆ ಅಥವಾ ಅವು ಮೂರು ತಿಂಗಳು ಮುಷ್ಕರ ಹೂಡಿದರೆ ಮನುಷ್ಯರಿಗೆ ಊಟ ಮಾಡಲು ಧವಸಧಾನ್ಯಗಳು ಇಲಿಗಳಿಂದಾಗಿ ಇಲ್ಲವಾಗುವ ಸಾಧ್ಯತೆ ಇದೆ. ಚೇಳು ಅಗತ್ಯವಿದ್ದಾಗ ಒಂದು ವಾರ ಉಸಿರಾಡದೆ ಇರುತ್ತದೆ, ಒಂದು ವರ್ಷ ಆಹಾರವಿಲ್ಲದೆಯೂ ಬದುಕಬಲ್ಲದು. ಶಾರ್ಕ್‌ ಮೀನಿಗೆ ಕ್ಯಾನ್ಸರ್‌ ಸಹಿತ ಯಾವುದೇ ಕಾಯಿಲೆ ಬರೋದಿಲ್ಲ. ಸದಾ ನೀರಲ್ಲಿರುವ ಮೊಸಳೆಗೆ ಮರ ಹತ್ತಲೂ ಗೊತ್ತು. ಇಂತಹ ಅಪೂರ್ವ ಮಾಹಿತಿಗಳನ್ನು ಫ‌ಲಕಗಳ ಮೂಲಕ ಪ್ರಚಾರಪಡಿಸಲಾಗುತ್ತದೆ.manipaladalli salumarada timmakka vruksha udyanavana-naadleಉದ್ಯಾನವನ ಪ್ರವೇಶಿಸುವವರಿಗೆ ದೊಡ್ಡವರಿಗೆ 20 ರೂ, ಮಕ್ಕಳಿಗೆ 10 ರೂ. ಕೆಲವು ಬಾರಿ ಮಕ್ಕಳಿಗೆ ವಿನಾಯಿತಿ ಕೊಡುವುದೂ ಇದೆ. ಸೋಮವಾರ ರಜಾ ದಿನ. ಮಣಿಪಾಲದಿಂದ ಅಲೆವೂರು ಮಾರ್ಗದ ರಸ್ತೆಯಲ್ಲಿ ಶಿವಳ್ಳಿ ಕೈಗಾರಿಕಾ ಪ್ರಾಂಗಣದ ಬಳಿ ಮಣಿಪಾಲ ಟಿ.ಎ.ಪೈ ಮ್ಯಾನೇಜ್ಮೆಂಟ್ ಇನ್‌ಸ್ಟಿಟ್ಯೂಟ್‌ಗೆ (ಟ್ಯಾಪ್ಮಿ) ಹೋಗುವ ತಿರುವಿನಿಂದ ಪೂರ್ವ ದಿಕ್ಕಿಗೆ 1.7 ಕಿ.ಮೀ. ಸಾಗಿದರೆ ಟ್ಯಾಪ್ಮಿ ಕಟ್ಟಡದ ಬಳಿಕ ಸಾಲುಮರ ತಿಮ್ಮಕ್ಕ ವೃಕ್ಷ ಉದ್ಯಾನವನ ಸಿಗುತ್ತದೆ.

 
SOURCE : www.udayavani.com

Offers

Want to Add your Offers, contact Naadle at 7090787344 or Email us at info@naadle.com