ಮಂಗಳೂರು ವಿಶ್ವವಿದ್ಯಾಲಯದಲ್ಲಿ ತುಳು ಸ್ನಾತಕೋತ್ತರ ಪದವಿ ಆರಂಭ..!!!

Share This:

ಮಂಗಳೂರು ವಿಶ್ವವಿದ್ಯಾಲಯವೂ ತುಳು ಸ್ನಾತಕೋತ್ತರ ಪದವಿ ಆರಂಭಿಸಲು ಯೋಜನೆ ರೂಪಿಸಿದ್ದು, ಇದರ ಮೊದಲ ಹೆಜ್ಜೆಯಾಗಿ ಪ್ರಾಯೋಗಿಕವಾಗಿ ಹಂಪನಕಟ್ಟೆಯಲ್ಲಿರುವ ವಿವಿ ಸಂಧ್ಯಾ ಕಾಲೇಜಿನಲ್ಲಿ ತುಳು ಸ್ನಾತಕೋತ್ತರ ಪದವಿ ತರಗತಿ ಆಗಸ್ಟ್ 27 ರಂದು ಪ್ರಾರಂಭಗೊಂಡಿದ್ದು. ಮಂಗಳೂರು ವಿ.ವಿ.ಯು  ತುಳು ಎಂಎ ಪದವಿ ಆರಂಭಿಸುತ್ತಿದ್ದು, ತುಳು ಭಾಷಾ ಅಧ್ಯಾಪಕರ ಕೊರತೆ ಭವಿಷ್ಯದಲ್ಲಿ ನೀಗಲಿದೆ.ಅವಿಭಜಿತ ದ.ಕ. ಜಿಲ್ಲೆಯ 40 ಶಾಲೆಗಳಲ್ಲಿ 6ರಿಂದ 10 ತರಗತಿವರೆಗೆ ತುಳುವನ್ನು ಐಚ್ಛಿಕ ಭಾಷಾ ವಿಷಯವಾಗಿ ಬೋಧಿಸಲಾಗುತ್ತಿದೆ. ಕೆಲವೆಡೆ 4 ವರ್ಷಗಳ ಹಿಂದೆಯೇ ತುಳು ತರಗತಿ ಆರಂಭವಾಗಿದ್ದು, ವಿದ್ಯಾರ್ಥಿಗಳು ಉತ್ತಮ ಫ‌ಲಿತಾಂಶ ಪಡೆಯುತ್ತಿದ್ದಾರೆ. ಆದರೆ ಉಪನ್ಯಾಸಕರ ಕೊರತೆ ಇತ್ತು. ತುಳು ಪರಿಣತರು ಮತ್ತು ಭಾಷಾಧ್ಯಯನದಲ್ಲಿ ಆಸಕ್ತಿ ಇರುವವರನ್ನು ಬಳಸಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವಿ.ವಿ.ಯೊಂದಿಗೆ ಮಾತುಕತೆ ನಡೆಸಿದ ಪರಿಣಾಮ ಹಂಪನಕಟ್ಟೆಯ ವಿ.ವಿ. ಸಂಧ್ಯಾ ಕಾಲೇಜಿನಲ್ಲಿ ತುಳು ಸ್ನಾತಕೋತ್ತರ ಎಂಎ ಪದವಿ ಆರಂಭಗೊಂಡಿದೆ.

Upcoming and Ongoing events

View More Events

Want to Promote your Event, contact Naadle at 9035030300 or Email us at info@naadle.com


ಮೊದಲ ವರ್ಷದ ತುಳು ಸ್ನಾತಕೋತ್ತರ ಪದವಿ ತರಗತಿಗೆ 20 ವಿದ್ಯಾರ್ಥಿಗಳ ದಾಖಲಾತಿ ಪೂರ್ಣಗೊಂಡಿದ್ದು, ತುಳು ಸಂಶೋಧಕರು, ವಿದ್ವಾಂಸರಿಂದ ಪಠ್ಯ ಬೋಧನೆ ನಡೆಸಲು ತೀರ್ಮಾನಿಸಲಾಗಿದೆ. ತುಳು ಎಂಎ ಆರಂಭದಿಂದ 2 ವರ್ಷಗಳಲ್ಲಿ ಸ್ನಾತಕೋತ್ತರ ಪದವೀಧರ ಉಪನ್ಯಾಸಕರೇ ತುಳು ಬೋಧಿಸಲಿದ್ದಾರೆ ಆಗ ಅವಿಭಜಿತ ದ.ಕ. ಜಿಲ್ಲೆಯ 100 ಶಾಲೆಗಳಲ್ಲಿ ತುಳು ತರಗತಿ ಆರಂಭಿಸುವ ಉದ್ದೇಶವಿದೆ.mangaluru visvavidyalayadalli tulu snatakottara padavi arambha-naadleಮೊದಲ ವರ್ಷ ಐದು ವಿಷಯಗಳಲ್ಲಿ ಬೋಧನೆ ಮಾಡಲಿದ್ದು, ತುಳು ಭಾಷೆ, ಸಾಹಿತ್ಯ, ಜಾನಪದ, ಕ್ರೀಡೆ-ಕುಣಿತ-ರಂಗಭೂಮಿ, ಸಂಶೋಧನೆ ಬಗ್ಗೆ ಬೋಧಿಸಲಾಗುವುದು. ಎರಡನೇ ವರ್ಷ ತುಳು ಚರಿತ್ರೆ, ಚಳವಳಿಗಳು, ತುಳುವರ ಕುಲಕಸುಬು, ವಾಣಿಜ್ಯ, ಉದ್ಯಮ, ಜ್ಞಾನ-ತಂತ್ರಜ್ಞಾನ, ಯೋಜಿತ ಸಂಪ್ರಬಂಧವನ್ನು ಕಲಿಸಲಾಗುವುದು. ತುಳುನಾಡಿನ ಪುರಾತನ ಸ್ಥಳ, ಸಂಸ್ಕೃತಿ ಬಿಂಬಿಸುವ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಕಾರ್ಯಾಗಾರಗಳನ್ನೂ ಹಮ್ಮಿಕೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
naadle If you like this article, click on the button below

Offers

Want to Add your Offers, contact Naadle at 9035030300 or Email us at info@naadle.com