Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!

ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಇನ್ನಿಲ್ಲ ..!!

maji videshanga sachive sushma swaraj innilla-naadle
Share This:

ಕೇಂದ್ರದ ಮಾಜಿ ಸಚಿವೆ, ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್(67) ವಿಧಿವಶರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮಂಗಳವಾರ ರಾತ್ರಿ ತೀವ್ರ ಹೃದಯಾಘಾತಕ್ಕೊಳಗಾದರು. 10.15ಕ್ಕೆ ಏಮ್ಸ್ ಆಸ್ಪತ್ರೆಗೆ ಕರೆತಂದು ತುರ್ತು ನಿಗಾಘಟಕಕ್ಕೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ 10.40ರ ಸುಮಾರಿಗೆ ಸಾವನ್ನಪ್ಪಿದರು. ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಮಾಡಿದ ಕೇಂದ್ರದ ನಿರ್ಧಾರವನ್ನು ಸ್ವಾಗತಿಸಿದ್ದ ಅವರು, ಮಂಗಳವಾರ ಸಂಜೆಯಷ್ಟೇ ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ಹೇಳಿ ಕೊನೆಯ ಟ್ವೀಟ್ ಮಾಡಿದ್ದರು. ಸುಷ್ಮಾ ಅವರು ಮೋದಿ -1 ಸರ್ಕಾರದಲ್ಲಿ ವಿದೇಶಾಂಗ ಸಚಿವೆಯಾಗಿ ಗಮನಸೆಳೆದಿದ್ದರು.maji videshanga sachive sushma swaraj innilla-naadle

Upcoming and Ongoing events

View More Events

Want to Promote your Event, contact Naadle at 7090787344 or Email us at info@naadle.com

2014ರ ಮೋದಿ ಸರಕಾರದಲ್ಲಿ ಅವರು ವಿದೇಶಾಂಗ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಹರಿಯಾಣದ ಅಂಬಾಲಾದ ದಂಡು ಪ್ರದೇಶದಲ್ಲಿ ಅವರು 1953 ಫೆಬ್ರವರಿ 14ರಲ್ಲಿ ಜನಿಸಿದ್ದ ಅವರು 1973 ರಿಂದ ಸುಪ್ರೀಂ ಕೋರ್ಟ್‌ನಲ್ಲಿ ವಕೀಲರಾಗಿ ಕಾರ್ಯ ನಿರ್ವಹಿಸಿದ್ದರು. ಕೇಂದ್ರ ಸಚಿವರಾಗಿದ್ದ ವೇಳೆಯೇ ಅವರು ಕಿಡ್ನಿ ಕಸಿ ಚಿಕಿತ್ಸೆಗೆ ಒಳಗಾಗಿದ್ದರು. ಆ ಬಳಿಕ ಅವರು 2019ರ ಲೋಕಸಭೆ ಚುನಾವಣೆಯಲ್ಲಿ ಉದ್ದೇಶಪೂರ್ವಕವಾಗಿಯೇ ಸ್ಪರ್ಧೆ ಮಾಡಿರಲಿಲ್ಲ.maji videshanga sachive sushma swaraj innilla-naadleತಾವು ವಿದೇಶಾಂಗ ಇಲಾಖೆ ಸಚಿವೆಯಾಗಿದ್ದ ಅವಧಿಯಲ್ಲಿ ಸಾಗರೋತ್ತರ ರಾಷ್ಟ್ರಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರಿಗೆ ಸಹಾಯ ಹಸ್ತವನ್ನು ಚಾಚಿದ್ದರು. ಯಾವುದೇ ದೇಶದಲ್ಲಿ ಭಾರತಿಯರು ಅಪಾಯದಲ್ಲಿ ಇದ್ದಾಗ ಅವರನ್ನು ಸುರಕ್ಷಿತವಾಗಿ ತವರಿಗೆ ಕರೆ ತರುವ ಕೆಲಸವನ್ನು ಸುಷ್ಮಾ ಮಾಡುತ್ತಿದ್ದರು. ವೀಸಾಗಳ ಸಮಸ್ಯೆಯಾದಾಗ ಅವುಗಳನ್ನು ತಕ್ಷಣ ಬಗೆಹರಿಸಿ ಕೊಟ್ಟ ಅದೆಷ್ಟೋ ಉದಾಹರಣೆಗಳಿವೆ. ಭಾರತೀಯರು ವಿದೇಶದಲ್ಲಿ ಅಪಘಾತಕ್ಕೆ ಒಳಗಾಗಿ ಪ್ರಾಣ ಹಾನಿ ಸಂಭವಿಸಿದರೆ, ಕುಟುಂಗಳಿಗೆ ಅಲ್ಲಿಗೆ ತೆರಳಲು ವೀಸಾ, ಮೃತ ಶರೀರವನ್ನು ಭಾರತಕ್ಕೆ ಕರೆ ತರಲು ಶೀಘ್ರವೇ ಪ್ರಯತ್ನಿಸಿದ ಅದೆಷ್ಟೋ ಉದಾಹರಣೆಗಳಿವೆ. ಜನ ಒಂದು ಟ್ವೀಟ್ ಮೂಲಕ ಮನವಿ ಮಾಡಿದರೆ ಸಾಕಿತ್ತು ಅದಕ್ಕೆ ತಕ್ಷಣ ಸ್ಪಂದಿಸಿ ಪರಿಹಾರದತ್ತ ಕಾರ್ಯಪ್ರವೃತರಾಗುತ್ತಿದ್ದರು. ಕರ್ನಾಟಕದ ಜತೆ ನಿಕಟ ಸಂಪರ್ಕ ಹೊಂದಿದ್ದ ಸುಷ್ಮಾ, 1999ರಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಸೋನಿಯಾ ಗಾಂಧಿ ವಿರುದ್ಧ ಸ್ಪರ್ಧಿಸಿದ್ದರು. ಸೋತರೂ ಬಳ್ಳಾರಿ ನಂಟು ಉಳಿಸಿಕೊಂಡಿದ್ದ ಅವರು, ಅನೇಕ ವರ್ಷ ಕಾಲ ವರ ಮಹಾಲಕ್ಷ್ಮೇ ಹಬ್ಬಕ್ಕೆ ಬಳ್ಳಾರಿಗೆ ಆಗಮಿಸುತ್ತಿದ್ದರು.

ಸುಷ್ಮಾ ಸ್ವರಾಜ್ ನಿರ್ವಹಿಸಿದ್ದ ವಿವಿಧ ಹುದ್ದೆಗಳ ಜವಾಬ್ದಾರಿಯುತ ಸ್ಥಾನಗಳು

1977-82ರಲ್ಲಿ ಹರಿಯಾಣಾ ವಿಧಾನಸಭೆಯ ಸದಸ್ಯರಾಗಿ ಚುನಾಯಿತರಾದರು
1977-79 ಕ್ಯಾಬಿನೆಟ್ ಮಂತ್ರಿ, ಕಾರ್ಮಿಕ ಮತ್ತು ಉದ್ಯೋಗ, ಹರಿಯಾಣ ಸರ್ಕಾರ
1987-90 ಹರಿಯಾಣಾ ವಿಧಾನಸಭೆಯ ಸದಸ್ಯರಾಗಿ ಚುನಾಯಿತರಾದರು
1987-90 ಕ್ಯಾಬಿನೆಟ್ ಮಂತ್ರಿ, ಶಿಕ್ಷಣ, ಆಹಾರ ಮತ್ತು ನಾಗರಿಕ ಸರಬರಾಜು, ಹರಿಯಾಣ ಸರ್ಕಾರ
1990-1996 – ರಾಜ್ಯಸಭೆಗೆ ಆಯ್ಕೆ(ಒಂದನೇ ಅವಧಿ)
1996-1997 –  ಹನ್ನೊಂದನೇ ಲೋಕಸಭೆ ಸದಸ್ಯೆ,(ಎರಡನೆಯ ಅವಧಿ)
1996[16 ಮೇ – 1ಜೂನ್] – ಯೂನಿಯನ್ ಕ್ಯಾಬಿನೆಟ್ ಮಂತ್ರಿ, ಮಾಹಿತಿ ಮತ್ತು ಪ್ರಸಾರ
1998-1999 [10ಮಾರ್ಚ್ 1998- 26 ಏಪ್ರಿಲ್ 1999] –  ಹನ್ನೆರಡನೆಯ ಲೋಕಸಭೆ ಸದಸ್ಯೆ,(ಮೂರನೇ ಅವಧಿ)
1998 [19ಮಾರ್ಚ್ – 12ಅಕ್ಟೋಬರ್]  – ಯೂನಿಯನ್ ಕ್ಯಾಬಿನೆಟ್ ಮಂತ್ರಿ, ಮಾಹಿತಿ ಮತ್ತು ಪ್ರಸಾರ ಮತ್ತು ದೂರಸಂಪರ್ಕ
1998 [13 ಅಕ್ಟೋಬರ್ – 3 ಡಿಸೆಂಬರ್] – ದೆಹಲಿಯ ಮುಖ್ಯಮಂತ್ರಿ
1998[ನವೆಂಬರ್] – ದೆಹಲಿ ಅಸೆಂಬ್ಲಿಯ ಹಾಝ್ ಖಾಸ್ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದರು
2000-2006 – ರಾಜ್ಯಸಭೆ ಸದಸ್ಯೆ,(ನಾಲ್ಕನೇ ಅವಧಿ)
2000-2003 [30 ಸೆಪ್ಟೆಂಬರ್ 2000 – 29 ಜನವರಿ 2003] – ಮಾಹಿತಿ ಮತ್ತು ಪ್ರಸಾರ ಮಂತ್ರಿ
2003-2004[29 ಜನವರಿ 2003-22 ಮೇ 2004]  – ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮತ್ತು ಸಂಸದೀಯ ವ್ಯವಹಾರಗಳ ಸಚಿವೆ
2006-2009 – ರಾಜ್ಯಸಭೆ ಸದಸ್ಯೆ,(5 ನೇ ಅವಧಿ)
2009-2014[16 ಮೇ 2009-18ಮೇ 2014] – 15ನೇ ಲೋಕಸಭೆ ಸದಸ್ಯೆ,(6ನೇ ಅವಧಿ)
2009[3 ಜೂನ್ 2009- 21 ಡಿಸೆಂಬರ್ 2009] – ಲೋಕಸಭೆಯಲ್ಲಿ ಪ್ರತಿಪಕ್ಷದ ಉಪ ನಾಯಕಿ
2009-2014[21 ಡಿಸೆಂಬರ್ 2009- 18ಮೇ 2014]-ಲಾಲ್ ಕೃಷ್ಣ ಆಡ್ವಾಣಿ ಬದಲಿಗೆ ಪ್ರತಿಪಕ್ಷ ನಾಯಕಿ
2014[26 ಮೇ] – 16 ನೇ ಲೋಕಸಭೆ ಸದಸ್ಯೆ,(7 ನೇ ಅವಧಿ)
2014 – 2019 ಭಾರತದ ಒಕ್ಕೂಟದ ವಿದೇಶಾಂಗ ಸಚಿವೆ

 

Offers

Want to Add your Offers, contact Naadle at 7090787344 or Email us at info@naadle.com