Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!

ಮೈಕೊರೆಯುವ ಚಳಿಗೆ ಕರಾವಳಿ ಜನ ಗಡ ಗಡ..!!

maikoreyuva chalige karaavali jana gada gada-naadle
Share This:

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಉತ್ತರದಂತೆ ತೀವ್ರ ಚಳಿಯ ಅನುಭವವಾಗುತ್ತಿದೆ. ಬೆಳಗ್ಗೆ ಹಾಗೂ ರಾತ್ರಿ ವೇಳೆ ತೀವ್ರ ಚಳಿಯ ವಾತಾವರಣ ಕಂಡುಬರುತ್ತಿದ್ದು, ಶೀತಗಾಳಿ ಹೆಚ್ಚಾಗಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಮಧ್ಯಾಹ್ನ 11 ಗಂಟೆಯವರೆಗೂ ಚಳಿಗಾಳಿ ಕಚಗುಳಿಯಿಡುತ್ತಿತ್ತು. ಸಾಯಂಕಾಲ 5ಕ್ಕೆ ಚಳಿ ಆರಂಭವಾಗುತ್ತಿದೆ. ದ್ವಿಚಕ್ರ ವಾಹನ ಸವಾರರು, ಬೆಳಗ್ಗೆ ಬೇಗ ಎದ್ದು ಕೆಲಸಕ್ಕೆ ಹೋಗುವವರು ಶೀತಗಾಳಿಯಿಂದ ತತ್ತರಿಸಿದರು.maikoreyuva chalige karaavali jana gada gada-naadle

Upcoming and Ongoing events

View More Events

Want to Promote your Event, contact Naadle at 7090787344 or Email us at info@naadle.com


ಜ.2ರಂದು ಪಣಂಬೂರಿನಲ್ಲಿ 17 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಮತ್ತು 35.7 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಿದೆ. ಕಳೆದ 10 ವರ್ಷಗಳ ದಾಖಲೆಗಳ ಪ್ರಕಾರ 2015ರ ಜನವರಿಯಲ್ಲಿ ಪಣಂಬೂರಿನಲ್ಲಿ 16.9 ಡಿ.ಸೆ. ತಾಪಮಾನವಿತ್ತು. ಆ ನಂತರ ಇದೇ ಮೊದಲ ಬಾರಿ 17 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ಕಂಡುಬಂದಿದೆ. ಜ.1ರಂದು ಮಂಗಳೂರು ವಿಮಾನ ನಿಲ್ದಾಣದಲ್ಲಿ ಕನಿಷ್ಠ ತಾಪಮಾನ 18.9 ಡಿ.ಸೆ. ಮತ್ತು ಗರಿಷ್ಠ 34.1 ಡಿ.ಸೆ. ತಾಪಮಾನ ದಾಖಲಾಗಿದೆ. ಬ್ರಹ್ಮಾವರ ಹವಾಮಾನ ಕೇಂದ್ರದಲ್ಲಿ 33.8 ಗರಿಷ್ಠ ಮತ್ತು 18 ಕನಿಷ್ಠ ತಾಪಮಾನ ದಾಖಲಾಗಿದೆ. ಡಿಸೆಂಬರ್ ತಿಂಗಳಲ್ಲಿ ಪೂರ್ವ ಕರಾವಳಿಯಲ್ಲಿ ಪೆಥಾಯ್ ಚಂಡಮಾರುತದ ಪರಿಣಾಮ ಕಳೆದೆರಡು ದಿನಗಳಿಂದ ಮೋಡ ಕವಿದ ವಾತಾವರಣ ಮತ್ತು ಚಳಿಯ ಪ್ರಮಾಣ ಹೆಚ್ಚಾಗಿತ್ತು. ಮಳೆ ದೂರವಾಗಿದ್ದು ಈಗ ಸಹಜ ಚಳಿಗಾಲದ ಪ್ರಭಾವದಿಂದ ವಾತಾವರಣದಲ್ಲಿ ಶೀತ ಗಾಳಿ ಬೀಸುತ್ತಿದೆ. ಜನವರಿ ತಿಂಗಳು ಪೂರ್ತಿ ಶೀತಗಾಳಿ ಮತ್ತು ಚಳಿಯ ಕಂಡು ಬರಲಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ವಿಜ್ಞಾನಿ ಸುನೀಲ್ ಗವಾಸ್ಕರ್ ಹೇಳಿದ್ದಾರೆ.maikoreyuva chalige karaavali jana gada gada-naadleಗ್ರಾಮಾಂತರದಲ್ಲಿ ಹೆಚ್ಚು: ಪ್ರಸಕ್ತ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ತಾಪಮಾನ ದಾಖಲು ಕೇಂದ್ರಗಳಿರುವುದು ಪಣಂಬೂರು, ಮಂಗಳೂರು ವಿಮಾನ ನಿಲ್ದಾಣ ಮತ್ತು ಬ್ರಹ್ಮಾವರದಲ್ಲಿ ಮಾತ್ರ. ಹಾಗಾಗಿ ಗ್ರಾಮಾಂತರ ಭಾಗದಲ್ಲಿನ ತಾಪಮಾನದ ನಿಖರ ಮಾಹಿತಿ ಸಿಗುತ್ತಿಲ್ಲ. ಆನ್‌ಲೈನ್ ಮೂಲಕ ಕೆಲವು ಸಂಸ್ಥೆಗಳು ಒದಗಿಸುತ್ತಿರುವ ಮಾಹಿತಿಯ ಬಗ್ಗೆ ನಿಖರತೆ ಇಲ್ಲ. ವಾಸ್ತವದಲ್ಲಿ ನಗರಕ್ಕಿಂತ ಗ್ರಾಮಾಂತರ ಭಾಗದಲ್ಲಿ ಅತಿ ಹೆಚ್ಚಿನ ಚಳಿ ಅನುಭವವಾಗುತ್ತಿದೆ.
naadle If you like this article, click on the button below

Offers

Want to Add your Offers, contact Naadle at 7090787344 or Email us at info@naadle.com