ಮಹಾಮಳೆಗೆ ನಡುಗಿದ ಕರಾವಳಿ ಜಿಲ್ಲೆಗಳು, ಅಪಾಯದ ಮಟ್ಟ ತಲುಪಿದ ಪ್ರಮುಖ ನದಿಗಳು…!!

mahamalege nadugida karavali jillegalu-naadle
Share This:

ಕರಾವಳಿಯಾದ್ಯಂತ ರವಿವಾರ ಮಳೆಯ ಪ್ರಮಾಣ ಕಡಿಮೆಯಾದರೂ ನೆರೆ ನೀರು ಪೂರ್ತಿಯಾಗಿ ಇಳಿಕೆಯಾಗದೆ ತಗ್ಗು ಪ್ರದೇಶಗಳಲ್ಲಿ ಆತಂಕದ ಸ್ಥಿತಿ ಮುಂದುವರಿದಿದೆ. ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯಾದ್ಯಂತ ಹಾಗೂ ಉಡುಪಿ ಜಿಲ್ಲೆಯ ಉಡುಪಿ ಮತ್ತು ಕಾಪು ತಾಲೂಕು ವ್ಯಾಪ್ತಿಯಲ್ಲಿ ಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಿಗೆ ಸೋಮವಾರ ರಜೆ ಘೋಷಿಸಲಾಗಿದೆ. ಮಂಗಳೂರು ತಾಲೂಕಿನ ವಿವಿಧೆಡೆ ರವಿವಾರ ಬಿಟ್ಟು ಬಿಟ್ಟು ಮಳೆಯಾಗಿದೆ. ದ.ಕ. ಜಿಲ್ಲೆಯ ಗ್ರಾಮಾಂತರದಲ್ಲಿ ಮಳೆ ಸ್ವಲ್ಪ ಹೆಚ್ಚಿತ್ತು. mahamalege nadugida karavali jillegalu-naadle

Upcoming and Ongoing events

View More Events

Want to Promote your Event, contact Naadle at 9035030300 or Email us at info@naadle.com


ಮಳೆಯಿಂದಾಗಿ ಹಲವೆಡೆ ಭೂಕುಸಿತ ಸಂಭವಿಸಿದೆ, ತಗ್ಗು ಪ್ರದೇಶ ಹಾಗೂ ನದಿ ತೀರದ ಮನೆಗಳಿಗೂ ನೀರು ನುಗ್ಗಿದ್ದು ಅಪಾರ ಹಾನಿ ಸಂಭವಿಸಿದೆ. ಮಂಗಳೂರು ನಗರದ ಹೊರ ವಲಯದಲ್ಲಿ ಇತ್ತೀಚೆಗೆ ಸೇತುವೆ ಕುಸಿತ ಸಂಭವಿಸಿದ ಮೂಲರ ಪಟ್ಣದಲ್ಲಿ ತೂಗು ಸೇತುವೆಗೆ ಸಂಪರ್ಕಿಸುವ ರಸ್ತೆ ಜಲಾಮಯವಾಗಿತ್ತು. ಸೂರಿಂಜೆ ಮತ್ತು ಶಿಬರೂರು ಪ್ರದೇಶಗಳಲ್ಲಿ ನಂದಿನಿ ನದಿಯ ನೀರು ಉಕ್ಕಿ ಹರಿದ ಪರಿಣಾಮ ಹಲವು ಮನೆಗಳು ಜಲಾವೃತವಾಗಿದ್ದು, 16 ಮಂದಿಯನ್ನು ಅಗ್ನಿ ಶಾಮಕ ದಳ ಮತ್ತು ಪೊಲೀಸರು ದೋಣಿಯಲ್ಲಿ ರಕ್ಷಿಸಿದರು.mahamalege nadugida karavali jillegalu-naadleನೇತ್ರಾವತಿ ನದಿ ನೀರಿನ ಅಪಾಯ ಮಟ್ಟ 31.5 ಮೀ. ಆಗಿದ್ದು, ಶನಿವಾರ 27ಕ್ಕೆ ತಲುಪಿದೆ. ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಾಲಯದಲ್ಲಿ ಕುಮಾರಧಾರ ಮತ್ತು ನೇತ್ರಾವತಿ ನದಿಗಳು ಸಂಗಮವಾಗಿದೆ. ಶಾಂಭವಿ ನದಿಯು ತುಂಬಿ ಹರಿಯುತ್ತಿದು ಬಪ್ಪನಾಡು ದುರ್ಗಾಪರಮೇಶ್ವರಿ ದೇವಾಲಯದ ಪ್ರಾಂಗಣದಲ್ಲಿ ನೀರು ತುಂಬಿಕೊಂಡಿದೆ. ರಾಷ್ಟ್ರೀಯ ವಿಕೋಪ ನಿರ್ವಹಣಾ ಪಡೆಯ 30 ಮಂದಿಯ ಎರಡು ತಂಡ ಜು.8ರಂದು ಮಂಗಳೂರಿಗೆ ತುಲುಪಿದ್ದೂ. ಒಂದು ತಂಡ ದಕ್ಷಿಣ ಕನ್ನಡ ಮತ್ತು ಇನ್ನೊಂದು ಉಡುಪಿಯಲ್ಲಿ ಪರಿಹಾರ ಕಾರ್ಯ ನಡೆಸಲಿವೆ ಮತ್ತು ಅವರಿಗೆ ಜಿಲ್ಲಾಡಳಿತ ಮಾರ್ಗದರ್ಶನ ನೀಡಲಿದೆ.
naadle If you like this article, click on the button below

Offers

Want to Add your Offers, contact Naadle at 9035030300 or Email us at info@naadle.com