Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!

ಮಹಾಲಯ ಅಮಾವಾಸ್ಯೆ – ಇದರ ಮಹತ್ವವೇನು?

mahalaya avavashye idara mahatvavenu-naadle
Share This:

ಭಾದ್ರಪದ ಮಾಸದ ಕೃಷ್ಣಪಕ್ಷವನ್ನು ಪಿತೃಪಕ್ಷವೆಂದು ಕರೆಯಲಾಗುತ್ತದೆ. ಆಡುಭಾಷೆಯಲ್ಲಿ ಇದನ್ನು ‘ಪಕ್ಷ’ವೆಂದೇ ಕರೆಯುವ ರೂಢಿಯಿದೆ. ಇದನ್ನು ‘ಮಹಾಲಯ ಪಕ್ಷ’ವೆಂದೂ ಹೇಳುತ್ತಾರೆ. ಈ ಅಮವಾಸ್ಯೆಯನ್ನು ಇತರ ಅಮಾವಾಸ್ಯೆಗಿಂತ ವಿಶೇಷವಾಗಿ ಆಚರಿಸಲ್ಪಡುತ್ತದೆ. mahalaya avavashye idara mahatvavenu-naadle

Upcoming and Ongoing events

View More Events

Want to Promote your Event, contact Naadle at 7090787344 or Email us at info@naadle.com

ಈ ಭೂಮಿಯ ಮೇಲೆ ಮನುಷ್ಯರು ಮತ್ತು ಅವರ ಪೂರ್ವಜರು ಸುಮಾರು 20 ಮಿಲಿಯನ್ ವರ್ಷಗಳಿಂದ ಜೀವಿಸಿದ್ದಾರೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಇದು ಬಹಳ ದೀರ್ಘ ಸಮಯ. ನಮಗಿಂತ ಈ ಹಿಂದೆ ಈ ಭೂಮಿಯ ಮೇಲೆ ಜೀವಿಸಿದ ಈ ಎಲ್ಲ ನೂರಾರು ಸಾವಿರಾರು ತಲೆಮಾರುಗಳು ನಮಗೆ ಒಂದಲ್ಲ ಒಂದು ಕೊಡುಗೆಯನ್ನು ನೀಡಿದ್ದಾರೆ. ನಾವು ಮಾತನಾಡುವ ಭಾಷೆ, ನಾವು ಕುಳಿತುಕೊಳ್ಳುವ ರೀತಿ, ನಮ್ಮ ವಸ್ತ್ರಗಳು, ನಮ್ಮ ಕಟ್ಟಡಗಳು – ನಮಗೆ ಇಂದು ಗೊತ್ತಿರುವ ಬಹುತೇಕ ಸಂಗತಿಗಳು ನಮ್ಮ ಹಿಂದಿನ ತಲೆಮಾರುಗಳಿಂದ ಬಂದಿವೆ. ಮಹಾಲಯ ಅಮಾವಾಸ್ಯೆ ನಮ್ಮ ಜೀವನ ಸುಗಮವಾಗಿ ನಡೆಯಲು ಅನುಕೂಲ ಮಾಡಿಕೊಟ್ಟ ಹಿಂದಿನ ಎಲ್ಲಾ ತಲೆಮಾರುಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಲು ಮೀಸಲಾದ ವಿಶೇಷ ದಿನವಾಗಿದೆ. ಶ್ರಾದ್ಧ, ತರ್ಪಣಗಳಿಂದ ಪಿತೃ ದೇವತೆಗಳನ್ನು ಆರಾಧಿಸಿದರೆ ಅವರ ಆರ್ಶೀವಾದದಿಂದ ಒಳ್ಳೆಯದು ಆಗುತ್ತದೆ.

ಮಹಾಲಯ ಅಮಾವಾಸ್ಯೆಯ ಪೌರಾಣಿಕ ಹಿನ್ನಲೆ:
ಮಹಾಭಾರತ ಕತೆಯಲ್ಲಿ ಕುಂತಿ ಪುತ್ರನಾದ ಕರ್ಣನು, ಕೌರವರರ ಪಡೆಯ ಕಡೆ ನಿಂತು, ಪಾಂಡವರ ವಿರುದ್ಧ ಹೋರಾಡಿದನು. ಈ ಯುದ್ಧದಲ್ಲಿ ಕರ್ಣನು ಅರ್ಜುನನಿಂದ ಹತನಾದನು. ಹೀಗೆ ಹತನಾದ ಕರ್ಣನನ್ನು ದೇವದೂತರು ಸ್ವರ್ಗಕ್ಕೆ ಕರೆದು ಕೊಂಡು ಹೋಗುವಾಗ ಕರ್ಣನಿಗೆ ತುಂಬಾ ಹಸಿವಾಗುತ್ತದೆ. ಆದರೆ ಮಾರ್ಗ ಮಧ್ಯದಲ್ಲಿ ಕರ್ಣನಿಗೆ ತಿನ್ನಲು ಏನೂ ಸಿಗುವುದಿಲ್ಲ. ಅವನಿಗೆ ಎಲ್ಲೆಲ್ಲೂ ಬಂಗಾರ, ಬೆಳ್ಳಿ ಮುಂತಾದ ಆಭರಣಗಳೇ ಕಾಣುತ್ತವೆ. ಹಸಿವು ತಾಳಲಾರದೆ ಕರ್ಣನು ಯಮಧರ್ಮನನ್ನು ಕುರಿತು ಭಕ್ತಿಯಿಂದ ಪ್ರಾರ್ಥಿಸುತ್ತಾನೆ. ಕರ್ಣನ ಪ್ರಾರ್ಥನೆಗೆ ಯಮನು ಪ್ರತ್ಯಕ್ಷನಾಗಿ ಭಾದ್ರಪದಮಾಸದ ಮಹಾಲಯ ಪಕ್ಷದ ದಿನಗಳಂದು ದಾನವನ್ನು ಮಾಡುವಂತೆ ಹೇಳುತ್ತಾನೆ. ಯಮನ ಆದೇಶದಂತೆ ಕರ್ಣನು ಮತ್ತೆ ಭೂಮಿಗೆ ಹಿಂತಿರುಗಿ ಭಾದ್ರಪದ ಮಾಸದ ಮಹಾಲಯ ಪಕ್ಷದ ದಿನಗಳಂದು ತನ್ನ ಹಿರಿಯರಿಗೆ ಹಾಗೂ ಬಡವರಿಗೆ ಅನ್ನ ಹಾಗು ವಸ್ತ್ರದಾನವನ್ನು ಮಾಡುತ್ತಾನೆ. ಇದರಿಂದ ಸಂತುಷ್ಟರಾದ ಪಿತೃಗಳು ಅವನನ್ನು ಹರಸುತ್ತಾರೆ. ಹಿರಿಯರ ಆರ್ಶೀವಾದ ಪಡೆದ ಕರ್ಣನು ಯಾವುದೇ ತೊಂದರೆಯಿಲ್ಲದೇ ಸ್ವರ್ಗಕ್ಕೆ ಹೋಗುತ್ತಾನೆ ಎಂದು ಪುರಾಣಗಳಲ್ಲಿ ಹೇಳಿದೆ. ಈ ಕತೆಯ ಆಧಾರದ ಮೇಲೆ ಪ್ರತಿವರ್ಷವೂ ಮಹಾಲಯ ಅಮಾವಾಸ್ಯೆಗೆ ನಮ್ಮನ್ನು ಅಗಲಿದ ಹಿರಿಯರನ್ನು ತಪ್ತಿಪಡಿಸಲು ಅವರಿಗೆ ಇಷ್ಟವಾದ ಅಡುಗೆಗಳನ್ನು ಹಾಗೂ ವಸ್ತ್ರಗಳನ್ನು ಇಟ್ಟು ಆರ್ಶೀವಾದ ಕೇಳುವ ಆಚರಣೆ ತಲಾತಲಾಂತರಗಳಿಂದ ಪಾಲಿಸಲಾಗುತ್ತಿದೆ. ಈ ಅಮಾವಾಸ್ಯೆಯ ಮಾರನೆ ದಿನದಿಂದ ನವರಾತ್ರಿ ಹಬ್ಬದ ಸಡಗರ ಪ್ರಾರಂಭವಾಗುವುದು.

 

Offers

Want to Add your Offers, contact Naadle at 7090787344 or Email us at info@naadle.com