Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!

ಕುಡ್ಲದ ಮಜಾ ಟಾಕೀಸ್ “OK WITH CK”..!!

Share This:

ಮಜಾ ಟಾಕೀಸ್ ನ ನೀವೆಲ್ಲಾ ಮಿಸ್ ಮಾಡತ್ತಿದ್ದೀರಾ ಹಾಗಾದರೆ ಈಗ ಪ್ರಾರಂಭವಾಗಿದೆ ನೋಡಿ ನಮ್ಮ ಕುಡ್ಲದ ಮಜಾ ಟಾಕೀಸ್ “OK with CK”.  ಮಂಗಳೂರನ್ನು ನಕ್ಕುನಗಿಸಲು ಪ್ರಾರಂಭಗೊಂಡಿದೆ ಓಕೆ(ಒಂತೆ ಕುಸಲ್) ವಿಥ್ ಸಿಕೆ ಕಾಮಿಡಿ ಶೋ ನಿಮ್ಮ ನೆಚ್ಚಿನ “Daijiworld 24×7” ಚಾನೆಲ್ ನಲ್ಲಿ ಪ್ರತಿ ಶನಿವಾರ ರಾತ್ರಿ 9:00 ಹಾಗೂ ಮರುಪ್ರಸಾರ ಭಾನುವಾರ ಮಧ್ಯಾಹ್ನ  1:30 ಕ್ಕೆ .

ಈ ಕಾರ್ಯಕ್ರಮವನ್ನು ಪ್ರಶಾಂತ್ ಸಿಕೆ ಇವರು ನಿರೂಪಣೆ ಮತ್ತು ನಿರ್ದೇಶನ ಮಾಡುತ್ತಿದ್ದು ಇವರು ತುಳು ನಾಟಕ, ತುಳು ಸಿನಿಮಾ ಹಾಗೂ ಯಕ್ಷಗಾನ  ಕಲಾವಿದರು, ಜೊತೆಗೆ ನಾಟಕಗಳ ನಿರ್ದೇಶನವನ್ನು ಮಾಡಿದ್ದಾರೆ. ಈ ಕಾರ್ಯಕ್ರಮವನ್ನು ಕನ್ನಡ ಮಜಾ ಟಾಕಿಸ್ ಹಾಗೂ ಹಿಂದಿಯ ಕಾಮಿಡಿ ನೈಟ್ ವಿಥ್ ಕಪಿಲ್ ಶೋ ದ ರೀತಿಯಲ್ಲಿ ನಿರ್ಮಾಣ ಮಾಡಲಾಗಿದೆ. ಮಂಗಳೂರಿನ ಭಾಷೆಗೆ ತಕ್ಕಂತೆ ಕಾಮಿಡಿ ಹಾಗೂ ಸಂಭಾಷಣೆಯನ್ನು ಬರೆಯಲಾಗಿದೆ. ಪ್ರತಿವಾರವೂ ಬೇರೆ ಬೇರೆ ಸೆಲೆಬ್ರೆಟಿ ಅತಿಥಿಗಳ ಜೊತೆ ನಗು, ಹರಟೆ , ಪಂಚಿಗ್ ಪ್ರಶ್ನೆಗಳು ಹಾಗೂ ಈ ಶೋ ಅಲ್ಲಿ ಬರುವ ಕಲಾವಿದರ ಮಾತು , ನಟನೆ ಎಲ್ಲವೂ ನೋಡುವ ವೀಕ್ಷಕರಿಗೆ  ಮಜಾ ನೀಡುತ್ತದೆ. ಈ ಕಾರ್ಯಕ್ರಮದ ಮುಖ್ಯ ಉದ್ದೇಶವೇ ಜನರಿಗೆ ಮನರಂಜನೆ ನೀಡುವುದು ಹಾಗೂ ಜನರನ್ನು ನಕ್ಕು ನಲಿಸುವುದು.

“OK with CK” ಕಾರ್ಯಕ್ರಮದ ಕಲಾವಿದರ ಬಗ್ಗೆ ಹೇಳುದಾದರೆ ಇವರೆಲ್ಲರೂ ತುಳು ನಾಟಕ ಹಾಗೂ ಸಿನಿಮಾ ಕಲಾವಿದರು. ಸಿಕೆಯವರ ತಂಗಿಯಾಗಿ PK(ಪ್ರೇಮಕುಮಾರಿ) ಈ ಪಾತ್ರವನ್ನು ರಂಗಭೂಮಿ ಕಲಾವಿದೆ ಪಿಂಕಿ ರಾಣಿ, ಸಿನಿಮಾ ನಟನಾಗಬೇಕೆಂಬ ತಮ್ಮ DK (ದಾಮು ಕುಮಾರ) ಪಾತ್ರಧಾರಿಯಾಗಿ ರಂಗಭೂಮಿ ಕಲಾವಿದ ದೀಪಕ್ ರಾಜ್ ಕುಡುಪು, ಅಡುಗೆ ಭಟ್ಟ JK(ಜಾರಪ್ಪ ಕುಕ್ಕುದಕಟ್ಟೆ) ಪಾತ್ರಧಾರಿಯಾಗಿ ರಂಗಭೂಮಿ ಹಾಗೂ ಸಿನಿಮಾ ಕಲಾವಿದ ರಂಗಬೊಳ್ಳಿ ಮಾಧವ ಇರುವೈಲ್, ಜೆಕೆ ತಂದೆ BK(ಬಾಬಣ್ಣ ಕುಕ್ಕುದಕಟ್ಟೆ)ಯಾಗಿ ರಂಗಭೂಮಿ ಕಲಾವಿದ ಪ್ರಕಾಶ್ ಪಚ್ಚನಾಡಿ. ಈ ಕಾರ್ಯಕ್ರಮದ ಮನೆ ನಿರ್ಮಾಣ , ಸ್ವರ ಜೋಡಣೆ , ಹಿನ್ನಲೆ ಸಂಗೀತ ಹಾಗೂ ಎಡಿಟಿಂಗ್ ಇವೆಲ್ಲವನ್ನೂ ನೋಡುವಾಗ ತಾಂತ್ರಿಕ ವರ್ಗದ ಪರಿಶ್ರಮ ತಿಳಿಯುತ್ತದೆ. ಈ ಕಾರ್ಯಕ್ರಮದ ತಾಂತ್ರಜ್ಞರು ಸಹನಿರ್ದೇಶನ ಪ್ರಮೋದ್ ಗೌಡ ಮತ್ತು ಅಕ್ಷತಾ ಕುಳಾಯಿ, ಸಂಪಾದಕ ಸಂತೋಷ್ ರಾಜ್. ಈ ಕಾರ್ಯಕ್ರಮಕ್ಕೆ ಸಹಕಾರ ಅಲ್ಸ್ , ವಾಲ್ಟೇರ್ ನಂದಳಿಕೆ, ದಿವ್ಯನಂದ್  ಗೋನ್ಸಲ್, ಮೊಹಮ್ಮದ್ ನಿಶಾರ್.

ಈ ಕಾರ್ಯಕ್ರಮವೂ ಈಗಾಗಲೇ ಪ್ರಸಾರವಾಗುತ್ತಿದ್ದು ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ ಹಾಗೂ ಆಯೋಜಕರ ಪ್ರಕಾರ 100 ಸಂಚಿಕೆಗಳನ್ನು ಮಾಡುವ ಯೋಜನೆಯಿದೆ, ಈಗಾಗಲೇ 25 ಸಂಚಿಕೆಗಳ ಚಿತ್ರೀಕರಣ ಮುಗಿದಿದ್ದು ಶೀಘ್ರದಲ್ಲಿಯೇ ಪ್ರಸಾರಗೊಳ್ಳಲಿದೆ. “OK with CK” ಯಾ ಮೊದಲನೇ ಸಂಚಿಕೆ ಇಲ್ಲಿದೆ ನೋಡಿ.

naadle If you like this article, click on the button below