Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!

ಕೃಷ್ಣನಗರಿಯಲ್ಲಿ ವೈಭವದ ಪರ್ಯಾಯೋತ್ಸವ..!!

krishnanagariyalli-vaibhavada-pariyayoutsava-naadle
Share This:

ಉಡುಪಿ ಶ್ರೀ ಕೃಷ್ಣ ಪೂಜೆಯ 2 ವರ್ಷಗಳ ಅಧಿಕಾರ ಹಸ್ತಾಂತರದ 8 ಶತಮಾನಗಳ ಮಧ್ವ ತತ್ವ , ನಂಬಿಕೆ, ವಿಶ್ವಾಸ, ಧರ್ಮ ಶ್ರದ್ಧೆಯ ಪ್ರತೀಕವಾಗಿದೆ. ದ್ವೈತ ಮತ ಸ್ಥಾಪಕ ಆಚಾರ್ಯ ಮಧ್ವರ ಬಳುವಳಿಯಾದ ಅಕ್ಷಯ ಪಾತ್ರೆ, ಸಟ್ಟುಗ, ಗರ್ಭಗುಡಿಯ ಕೀಲಿ ಕೈ ಪಡೆದು ಸರ್ವಜ್ಞ ಪೀಠವನ್ನೇರಿ ಶ್ರೀಕೃಷ್ಣ ಪೂಜೆಗೈವ ಎರಡು ವರ್ಷಗಳ ಅಧಿಕಾರ 2 ಮಠಗಳ ನಡುವೆ ವರ್ಗಾವಣೆಯೇ ಉಡುಪಿ ಪರ್ಯಾಯ.
krishnanagariyalli-vaibhavada-pariyayoutsava-naadleಪ್ರತಿ ಎರಡು ವರ್ಷಗಳಿಗೊಮ್ಮೆ ಶ್ರೀಕೃಷ್ಣ ಮಠದಲ್ಲಿ ಜರಗುವ ಪರ್ಯಾಯೋತ್ಸವ ಗುರುವಾರ ಬೆಳಗ್ಗೆ ನಡೆಯಲಿದೆ. 1522ರಲ್ಲಿ ಆರಂಭಗೊಂಡ ಎರಡು ವರ್ಷಗಳ ಪರ್ಯಾಯ 31 ಬಾರಿ ನಡೆದಿದೆ. ಈಗ 32ನೇ ಪರ್ಯಾಯ ಚಕ್ರ ಆರಂಭಗೊಳ್ಳುತ್ತಿದೆ. ಪರ್ಯಾಯ ಚಕ್ರ ಆರಂಭಗೊಳ್ಳುವುದು ಶ್ರೀ ಪಲಿಮಾರು ಮಠದಿಂದ. ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ತಮ್ಮ ಎರಡನೆಯ ಪರ್ಯಾಯ ಪೂಜೆಯ ಸರತಿಯಲ್ಲಿದ್ದಾರೆ. ಗುರುವಾರ ಮುಂಜಾವ ಕಾಪು ದಂಡತೀರ್ಥದಲ್ಲಿ ಸ್ನಾನ ಮಾಡಿ ಜೋಡುಕಟ್ಟೆಯಿಂದ ಭವ್ಯ ಮೆರವಣಿಗೆಯಲ್ಲಿ ಇತರ ಮಠಾಧೀಶರೊಂದಿಗೆ ಸಾಗಿ ಬರಲಿದ್ದಾರೆ. ಬೆಳಗ್ಗೆ ಶ್ರೀಕೃಷ್ಣ ದರ್ಶನ ಮಾಡಿ ಪೂಜಾಧಿಕಾರವನ್ನು ವಹಿಸಿಕೊಳ್ಳುವ ಶ್ರೀಪಾದರು ಬಳಿಕ ದರ್ಬಾರ್‌ ಸಭೆಯಲ್ಲಿ ಆಶೀರ್ವಚನ ನೀಡುವರು. ಪೇಜಾವರ ಶ್ರೀಗಳು ತಮ್ಮ ಐತಿಹಾಸಿಕ ಪರ್ಯಾಯ ಪೂಜೆಯ ಅವಧಿಯಿಂದ ನಿರ್ಗಮಿಸುವುದು ಮತ್ತು 32ನೇ ಪರ್ಯಾಯ ಚಕ್ರ ಆರಂಭಗೊಳ್ಳುವುದು ಶ್ರೀಕೃಷ್ಣ ಮಠದ ಮಟ್ಟಿಗೆ ದಾಖಲೆಯ ದಿನವಾಗಿದೆ. ಪಲಿಮಾರು ಶ್ರೀಪಾದರು ಗರ್ಭಗುಡಿಗೆ ಚಿನ್ನದ ತಗಡು ಹೊದೆಸುವುದು, ನಿರಂತರ ಭಜನೆ, ನಿತ್ಯ ಲಕ್ಷ ತುಳಸಿ ಅರ್ಚನೆ, ಚಿಣ್ಣರ ಸಂತರ್ಪಣೆ ಯೋಜನೆಯ ವಿಸ್ತರಣೆ ಮೊದಲಾದ ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ.
krishnanagariyalli-vaibhavada-pariyayoutsava-naadle

Upcoming and Ongoing events

View More Events

Want to Promote your Event, contact Naadle at 9035030300 or Email us at info@naadle.com

ರಜತಪೀಠಪುರ ಉಡುಪಿ ಸಮೀಪದ ಪಾಜಕದಲ್ಲಿ ಕ್ರಿ.ಶ. 1238ರಲ್ಲಿ ಅವತರಿಸಿದ ಮಧ್ವಾಚಾರ್ಯರು, ದ್ವಾರಕೆಯಿಂದ ಹಡಗಿನಲ್ಲಿ ಬಂದು ಮಲ್ಪೆ ವಡಭಾಂಡೇಶ್ವರದ ಕಡಲು ಪಾಲಾದ ಶ್ರೀಕೃಷ್ಣನನ್ನು ತಮ್ಮ 47ನೇ ವಯಸ್ಸಿಗೆ ತಂದು ಉಡುಪಿಯಲ್ಲಿ ಮಕರ ಸಂಕ್ರಮಣದ ಪರ್ವ ಕಾಲದಲ್ಲಿ ಕ್ರಿ. ಶ. 1285ರಲ್ಲಿ ಸ್ಥಾಪಿಸಿದ್ದಾರೆ. ಶ್ರೀಕೃಷ್ಣನ ಪೂಜೆಗಾಗಿ ಅಷ್ಟಮಠಗಳನ್ನು ಸ್ಥಾಪಿಸಿ, ಬಾಲ ಯತಿಗಳನ್ನು ನಿಯೋಜಿಸಿ ಎರಡು ತಿಂಗಳ ಪರ್ಯಾಯ ವ್ಯವಸ್ಥೆ ಜಾರಿಗೆ ತಂದರು. ದೇಶದಾದ್ಯಂತ ಸಂಚಾರ ಮಾಡಿ ದ್ವೈತ ಸಿದ್ಧಾಂತ(ಪರಮಾತ್ಮ ಮತ್ತು ಜಗತ್ತು ಸತ್ಯ) ಪ್ರತಿಪಾದಿಸಿ ದಿಗ್ವಿಜಯ ಸಾಧಿಧಿಸಿದ್ದು 79ನೇ ವಯಸ್ಸಿಗೆ(ಕ್ರಿ.ಶ. 1,317)ಕೀರ್ತಿಶೇಷರಾಗಿದ್ದಾರೆ. ಕ್ರಿ. ಶ. 1480ರಲ್ಲಿ ಜನಿಸಿದ ಸೋದೆ ಶ್ರೀವಾದಿರಾಜರು ಕ್ರಾಂತಿಕಾರಿಯಾಗಿದ್ದು ಪರ್ಯಾಯ ವ್ಯವಸ್ಥೆಯಲ್ಲಿ ಬದಲಾವಣೆ, ಸುಧಾರಣೆ ಜತೆಗೆ ವೈಭವ ಹೆಚ್ಚಿಸಿದ್ದಾರೆ. ಎರಡು ತಿಂಗಳ ಪರ್ಯಾಯ ವ್ಯವಸ್ಥೆಯನ್ನು 2 ವರ್ಷಗಳಿಗೆ ವಿಸ್ತರಿಸಿದ್ದಾರೆ. ಅಷ್ಟಮಠಗಳನ್ನು ನಿರ್ಮಿಸಿ, ಕ್ರಿ. ಶ. 1,522ರಿಂದ ದ್ವೈವಾರ್ಷಿಕ ಪರ್ಯಾಯವನ್ನು 4 ಬಾರಿ ನೆರವೇರಿಸಿ ಶಿಷ್ಯನನ್ನು ಸರ್ವಜ್ಞ ಪೀಠದಲ್ಲಿ ಕೂರಿಸಿ ಸೋಂದಾ ಕ್ಷೇತ್ರದಲ್ಲಿ 120ನೇ ವಯಸ್ಸಿಗೆ(ಕ್ರಿ. ಶ.1,600) ಕೀರ್ತಿಶೇಷರಾದರು. ಪೇಜಾವರ ಶ್ರೀವಿಶ್ವೇಶತೀರ್ಥ ಶ್ರೀಪಾದರು ಸೋದೆಶ್ರೀಗಳ ದಾಖಲೆ ಸರಿಗಟ್ಟಿ 5ನೇ ಪರ್ಯಾಯ ದಾಖಲೆ ಮಾಡಿದ್ದಾರೆ. ತಮ್ಮ ವಿದ್ಯಾಗುರುಗಳ ಶಿಷ್ಯ ಪಲಿಮಾರು ಶ್ರೀವಿದ್ಯಾಧೀಶತೀರ್ಥರಿಗೆ 2ನೇ ಪರ್ಯಾಯದ ಅಧಿಕಾರವನ್ನು ಜ.18ರಂದು ಹಸ್ತಾಂತರಿಸಲಿದ್ದಾರೆ.krishnanagariyalli-vaibhavada-pariyayoutsava-naadleಪರ್ಯಾಯ ಪೀಠವನ್ನೇರುವ ಯತಿ 13 ತಿಂಗಳ ಮೊದಲೇ ಬಾಳೆ ಮುಹೂರ್ತದಿಂದ ತೊಡಗಿ 4 ಪ್ರಮುಖ ಮುಹೂರ್ತಗಳ ಸಹಿತ ಅನೌಪಚಾರಿಕ ಚಪ್ಪರ ಮುಹೂರ್ತಕ್ಕೆ ಮೊದಲು ಉಡುಪಿ ಪುರ ಪ್ರವೇಶ ಮಾಡಬೇಕು. ಅನ್ನ ಬ್ರಹ್ಮ ಉಡುಪಿ ಶ್ರೀಕೃಷ್ಣನ ನಾಡಿಗೆ ಬಂದ ಭಕ್ತಾದಿಗಳಿಗೆ ಶ್ರೀಕೃಷ್ಣ ಪ್ರಸಾದ ನಿರಂತರವಾಗಿ ಸಿಗಲು ಪೂರ್ವ ಸಿದ್ಧತೆಯ ಮಹತ್ತರ ಉದ್ದೇಶ 4 ಮುಹೂರ್ತಗಳ (ಬಾಳೆ, ಅಕ್ಕಿ, ಕಟ್ಟಿಗೆ, ಭತ್ತ)ಹಿಂದಿದೆ.krishnanagariyalli-vaibhavada-pariyayoutsava-naadleಪರ್ಯಾಯ ಸರದಿಯಲ್ಲಿರುವ ಅಷ್ಟಮಠಗಳು

ಪಲಿಮಾರು, ಅದಮಾರು(ದ್ವಂದ್ವ), ಕೃಷ್ಣಾಪುರ, ಪುತ್ತಿಗೆ(ದ್ವಂದ್ವ), ಶೀರೂರು, ಸೋದೆ(ದ್ವಂದ್ವ), ಕಾಣಿಯೂರು, ಪೇಜಾವರ(ದ್ವಂದ್ವ). ಒಂದು ಮಠಕ್ಕೆ ಮತ್ತೊಂದು ಮಠ(ದ್ವಂದ್ವ)ಪೂಜೆಯಲ್ಲಿ ಹಾಗೂ ಇತರ ಸಮಸ್ಯೆ ಬಂದಾಗ ನೆರವಾಗುತ್ತದೆ.
naadle If you like this article, click on the button below

Offers

Want to Add your Offers, contact Naadle at 9035030300 or Email us at info@naadle.com